ನವದೆಹಲಿ: ಫ್ರಾನ್ಸ್‌ನ ರಾಷ್ಟ್ರೀಯ ದಿನ (ಜುಲೈ ೧೪, ೨೦೨೩) ರಂದು ರಾಜಧಾನಿ ಪ್ಯಾರಿಸ್ ನಲ್ಲಿ ಆಯೋಜಿಸಲಾದ ಕಾರ್ಯ ಕ್ರಮದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪ್ರತಿ ವರ್ಷ ಜುಲೈ ೧೪ ರಂದು ಫ್ರಾನ್ಸ್‌ನಲ್ಲಿ ‘ಬಾಸ್ಟಿಲ್ ಡೇ ಪರೇಡ್’ ಅನ್ನು ಆಯೋಜಿಸ ಲಾಗುತ್ತದೆ. ಈ ಪರೇಡ್‌ನಲ್ಲಿ ಫ್ರೆಂಚ್ ಸೇನೆಯೊಂದಿಗೆ ಭಾರತೀಯ ಸಶಸ್ತ್ರ ಪಡೆಗಳ ಒಂದು ಗುಂಪು ಭಾಗವಹಿಸಲಿದೆ. ಈ ವಾರ್ತೆಯನ್ನು ಭಾರತದ ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ.
ಫ್ರಾನ್ಸ್‌ನ ಆಹ್ವಾನವನ್ನು ಸ್ವೀಕರಿಸಿದ್ದಕ್ಕಾಗಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಸಂತೋಷ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಚಿತ್ರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಅವರು, ‘ಜುಲೈ ೧೪ ರ ಕಾರ್ಯಕ್ರಮಕ್ಕಾಗಿ ನಿಮ್ಮನ್ನು ಪ್ಯಾರಿಸ್ಗೆ ಸ್ವಾಗತಿಸಲು ನಾನು ತುಂಬಾ ಸಂತೋಷಪಡುತ್ತೇನೆ ಎಂದು ಬರೆದಿದ್ದಾರೆ.
ಮ್ಯಾಕ್ರನ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ‘ಧನ್ಯವಾದ ಸ್ನೇಹಿತ’ ಎಂದು ಹೇಳಿದ್ದಾರೆ. ಭಾರತದ ವಿದೇಶಾಂಗ ಸಚಿವಾಲಯವು, ಭಾರತ-ಫ್ರಾನ್ಸ್ ವ್ಯೂಹಾತ್ಮಕ ಪಾಲುದಾರಿಕೆಯ ೨೫ ವರ್ಷಗಳು ಪೂರ್ಣಗೊಂಡಿದ್ದರಿಂದ ಪ್ರಧಾನಿಯವರ ಭೇಟಿಗೆ ವಿಶೇಷ ಮಹತ್ವವಿದೆ ಎಂದು ಹೇಳಿದೆ.