Friday, 13th December 2024

ಆರಂಭಿಕ ಕುಸಿತದಿಂದ ಚೇತರಿಕೆ ಕಂಡ ಸೆನ್ಸೆಕ್ಸ್

ಮುಂಬೈ: ಬುಧವಾರ ಆರಂಭಿಕ ಕುಸಿತ (270 ಅಂಕ ಕುಸಿದ ಸೆನ್ಸೆಕ್ಸ್ ಷೇರು) ಕಂಡ ಭಾರತೀಯ ಷೇರು ಮಾರುಕಟ್ಟೆ  ಮಾರುಕಟ್ಟೆಯು ಮೂರು ಗಂಟೆಗಳಲ್ಲಿ ಚೇತರಿಸಿಕೊಂಡಿದೆ. ನಿಫ್ಟಿ ಮಾರುಕಟ್ಟೆಯಲ್ಲಿ 17949ರ ಆಸುಪಾಸಿನಲ್ಲಿ ವಹಿವಾಟು ಮುಂದುವರಿದಿದೆ.

ಮಧ್ಯಾಹ್ನ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 125.66 ಅಂಕ ಇಳಿಕೆಯೊಂದಿಗೆ 60,200ರಲ್ಲಿ ವಹಿವಾಟು ನಡೆಸಿದೆ. ನಿಫ್ಟಿ 53.40 ಇಳಿಕೆಯೊಂದಿಗೆ 17,945.80ರಲ್ಲಿ ವಹಿವಾಟು ಮುಂದು ವರಿಸಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆಯು ಬುಧವಾರ 54 ಅಂಕಗಳ ಇಳಿಕೆಯೊಂದಿಗೆ ಆರಂಭ ಗೊಂಡಿದ್ದರೂ ಕೆಲವು ಕಂಪನಿಗಳ ಷೇರು ದರದಲ್ಲಿ ಏರಿಕೆ ಕಂಡು ಬಂದಿದೆ. ಟಾಟಾ ಮೋಟಾರ್ಸ್, ಏಷಿಯನ್ ಪೇಂಟ್ಸ್, ಎಸ್ ಬಿಐ ಲೈಫ್, ಎನ್ ಟಿಪಿಸಿ, ಟಾಟಾ ಕಂಸ್ಯುಮರ್ ಷೇರುಗಳ ದರದಲ್ಲಿ ಅತಿಹೆಚ್ಚು ಏರಿಕೆಯಾಗಿದೆ.

ಟಾಟಾ ಮೋಟಾರ್ಸ್ ಷೇರು ದರದಲ್ಲಿ ಶೇ.2.76ರಷ್ಟು ಏರಿಕೆಯಾಗಿದ್ದು, ಷೇರು ದರ 533.40ರಷ್ಟಿದೆ. ಏಷಿಯನ್ ಪೇಂಟ್ಸ್ ಕಂಪನಿ ಷೇರು ದರ 3,213.50 ರೂಪಾಯಿ ಆಗಿದ್ದು, ಶೇ.1.96ರಷ್ಟು ಏರಿಕೆಯಾಗಿದೆ. ಎನ್ ಟಿಪಿಸಿ ಷೇರು ಬೆಲೆಯು 136.30 ರೂಪಾಯಿ ಆಗಿದ್ದು, ಶೇ.1.49ರಷ್ಟು ಏರಿಕೆ ಕಂಡು ಬಂದಿದೆ. ಟಾಟಾ ಕಂಸ್ಯುಮರ್ ಷೇರು ಮೌಲ್ಯವು 845 ರೂಪಾಯಿ ಆಗಿದ್ದು, ಶೇ.1.39ರಷ್ಟು ಏರಿಕೆ ದಾಖಲಿಸಿದೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಗಮನಾರ್ಹವಾದ ಮಂದಗತಿ ಪ್ರವೃತ್ತಿಯ ಹೊರತಾಗಿ ಮಂಗಳವಾರ ಡಾಲರ್ ವಿರುದ್ಧ ರೂಪಾಯಿ 9 ಪೈಸೆ ಏರಿಕೆಯಾಗಿ 74.37ಕ್ಕೆ ಆರಂಭಿಕ ನಷ್ಟದಲ್ಲಿ ಕೊನೆಯಾಗಿದೆ.