ರಾಜ್‌ಕೋಟ್: ಗುಜರಾತಿನ ರಾಜ್‌ಕೋಟ್‌ನಲ್ಲೊಂದು ವಿಶಿಷ್ಟ ಆಲಯವಿದ್ದು, ಇದು ಜೀವಿಕಾ ಮಾತಾಜಿ ದೇವಸ್ಥಾನ ಅಂತಾನೇ ಖ್ಯಾತಿ ಪಡೆದಿದೆ.
ವಿಶೇಷವೆಂದರೆ ಇಲ್ಲಿ ಭಕ್ತರು ಮಾತಾಜಿಗೆ ಪಂಚದಾರ ಅಥವಾ ಶ್ರೀಫಲದ ಬದಲು ಫಾಸ್ಟ್ ಫುಡ್ ನೈವೇದ್ಯ ಮಾಡುತ್ತಾರೆ. ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋದಾಗ ತೆಂಗಿನಕಾಯಿ, ಸಿಹಿತಿಂಡಿ ಇತ್ಯಾದಿಗಳನ್ನು ತೆಗೆದುಕೊಂಡು ಹೋಗುತ್ತೇವೆ.
ಆದರೆ, ರಾಜ್‌ಕೋಟ್‌ನ ರಜಪೂತ್‌ಪರದಲ್ಲಿ ಇರುವ 60-70 ವರ್ಷ ಹಳೆಯ ಈ ಜೀವಿಕಾ ಮಾತಾಜಿ ವಿಶಿಷ್ಟ ನೈವಿದ್ಯ ಅರ್ಪಿಸಲಾಗುತ್ತೆ. ಮಹಿಳೆಯರು ಜೀವಂತ ತಾಯಿಯನ್ನ ಪೂಜಿಸುತ್ತಾರೆ ಮತ್ತು ತಮ್ಮ ಮಕ್ಕಳ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ.
ಈ ದೇವತೆ ಮಕ್ಕಳ ತಾಯಿ ಎನ್ನಲಾಗ್ತಿದ್ದು, ಹಾಗಾಗಿ ಮಕ್ಕಳು ಮಾತಾಜಿಯನ್ನ ಭಕ್ತಿಯಿಂದ ಪೂಜಿಸುತ್ತಾರೆ. ಅದಕ್ಕಾಗಿ, ಮಕ್ಕಳ ನೆಚ್ಚಿನ ಚಾಕಲೇಟ್, ಭೇಲ್, ವಡಪಾನ್, ದಾಬೇಲಿ, ಸ್ಯಾಂಡ್‌ವಿಚ್, ಹಾಟ್‌ಡಾಗ್, ಪಾನಿಪುರಿ, ಪಿಜ್ಜಾ, ತಂಪು ಪಾನೀಯಗಳನ್ನ ಇಲ್ಲಿ ಪ್ರಸಾದವಾಗಿ ಇಡಲಾಗುತ್ತೆ. ಮಕ್ಕಳ ನೆಚ್ಚಿನ ಫಾಸ್ಟ್ ಫುಡ್’ನ್ನ ಇಲ್ಲಿ ಅಮ್ಮನಿಗೆ ತರಲಾಗುತ್ತದೆ.
ಪ್ರಸಾದದಲ್ಲಿ ಕೆಲವು ಮಕ್ಕಳ ನೆಚ್ಚಿನ ಸ್ಟೇಷನರಿ ಕಿಟ್, ಊಟದ ಚೀಲವೂ ಸೇರಿದೆ. ಭಕ್ತರು ಆನ್‌ಲೈನ್’ನಲ್ಲಿ ಜೀವಿಕಾ ಮಾತಾಜಿಯ ದರ್ಶನವನ್ನೂ ಮಾಡಬಹುದು. ರಾಜ್‌ಕೋಟ್‌ನ ಭಕ್ತೆ ಯೋಗಿನಿ ಬೆನ್ ಮಾತನಾಡಿ, ಹಲವು ವರ್ಷಗಳಿಂದ ಜೀವಿಕಾ ಮಾತಾಜಿಯ ದರ್ಶನಕ್ಕೆ ಬರುತ್ತಿದ್ದೇವೆ. ನಮಗೆ ಏನಾದರೂ ಬೇಕಾದ್ರೆ ನಾವು ಅಮ್ಮನನ್ನ ಕೇಳುತ್ತೇವೆ. ಯಾಕಂದ್ರೆ, ಆಕೆ ನಮಗೆ ಎಲ್ಲವನ್ನೂ ಕೊಡುತ್ತಾಳೆ. ಆಗ ಈ ತಾಯಿಯೂ ನಮ್ಮೆಲ್ಲರ ಇಷ್ಟಾರ್ಥಗಳನ್ನ ಪೂರೈಸುತ್ತಾಳೆ ಎಂದರು.