ಭಾರತೀಯರ ಪಾಲಿಗೆ ಚಿನ್ನದ ಬಾಂಧವ್ಯವು ಯುಗಯುಗಾಂತರಗಳಿಂದ ಅಪ್ಯಾಯಮಾನವಾಗಿದೆ. ಭಾರತೀಯ ಸಂಸ್ಕೃತಿಯ ಅಂಗವಾಗಿದೆ ಈ ಹಳದಿ ಅಮೂಲ್ಯ ಲೋಹ. ನಾನಾ ವಡವೆ ಆಭರಣಗಳಿಂದ ಅಲಂಕೃತವಾದ ಅಬಾಲವೃದ್ದರಿಂದ ತುಂಬಿದ ಕುಟುಂಬಗಳ ವೈಭವೋಪೇತ ದಂತಕತೆಗಳನ್ನು ಸಾರಿ ಹೇಳುವ ವೈವಿದ್ಯಮಯ ಐತಿಹ್ಯ ಭಾರತದ ಸಾಮು ದಾಯಗಳ ಪರಂಪರೆಯಾಗಿದೆ.
ನಾವು ಚಿನ್ನವನ್ನು ಧರಿಸಲು ಇಷ್ಟಪಡುತ್ತೇವೆ, ಉಡುಗೊರೆ ಯಾಗಿ ನೀಡಲು ಇಷ್ಟಪಡುತ್ತೇವೆ ಮತ್ತು ಸಂಗ್ರಹಿಸಿ ಜೋಪಾನವಾಗಿಡಲು ಇಷ್ಟಪಡುತ್ತೇವೆ. ಹಣದ ಹೂಡಿಕೆಗೆ ನೂರಾರು ವಿಧಾನಗಳಿದ್ದರೂ, ಸಾಂಪ್ರದಾಯಿಕ ವಾಗಿ ಮೊದಲ ಆಯ್ಕೆ ಚಿನ್ನವಾಗಿದೆ ಎನ್ನುತ್ತಾರೆ “ರುಪೀಕ್” ಚಿನ್ನದಸಾಲ ಸಂಸ್ಥೆಯ ಶ್ರೀ ಶಲಭ್ ಅತ್ರೇ.
ಚಿನ್ನವನ್ನು ಒತ್ತೆ ಇಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅನಿರೀಕ್ಷಿತ ಬಿಕ್ಕಟ್ಟಿನ ಸಮಯದಲ್ಲಿ, ಚಿನ್ನದ ಮೇಲಿನ ಸಾಲವು ಸುರಕ್ಷಿತ ಹಾಗೂ ತ್ವರಿತ ಸಾಲವಾಗಿದೆ. ಹಣದ ಆವಶ್ಯಕತೆಗಳನ್ನು ಸಕಾಲಿಕವಾಗಿ ಪೂರೈಸಲು ಚಿನ್ನ ನಂಬಿಗತಸ್ಥ ಆಪತ್ಬಾಂಧವ ಅನ್ನಬಹುದು.
ಭಾರತದಲ್ಲಿ ಚಿನ್ನದ ಸಾಲ ವಿತರಣೆ ಎರಡು ವಿಧ – ಭಾರತೀಯ ರಿಸರ್ವೇ ಬ್ಯಾಂಕ್ ನಿಯಮಾವಳಿ ಪಾಲಿಸುತ್ತಾ ಸರಳ-ಸುರಕ್ಷಿತವಾಗಿ ಕಾರ್ಪೋರೇಟ್ ವ್ಯವಸ್ಥೆಯಲ್ಲಿ ಚಿನ್ನದ ಸಾಲ ಪೂರೈಕೆದಾರಾದ ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ಒಳಗೊಂಡಿರುವ ಸಂಘಟಿತ ವಲಯ ಒಂದು ಕಡೆಯಾದರೆ, ದಿನದ ಹಾಗೂ ತಿಂಗಳ ಚಕ್ರಬಡ್ಡಿ ವಸೂಲಿ ಮಾಡುವ ಸ್ಥಳೀಯ ಆಭರಣ ಅಂಗಡಿಗಳು, ಮನೆ ಪಕ್ಕದ ಗಿರವಿ ಅಂಗಡಿಗಳು ಮತ್ತು ಪರಿಚಿತ ಸಾಲದ ದಲ್ಲಾಳಿ ಗಳನ್ನು ಒಳಗೊಂಡಿರುವ ಅಸಂಘಟಿತ ವಲಯ ಇನ್ನೊಂದಡೆ. ಇವುಗಳ ಜೊತೆಗೆ, ಹೊಸ-ಯುಗದ ತಂತ್ರಜ್ಞಾನ ಮೂಲಕ ಮನೆ ಬಾಗಿಲಿಗೆ ಚಿನ್ನದಸಾಲ ತಲುಪಿಸುವುದು ಇತ್ತೀಚಿನ ಆವಿಷ್ಕಾರವಾಗಿದೆ.
ಚಿನ್ನದ ಸಾಲವನ್ನೇ ಏಕೆ ಪರಿಗಣಿಸಬೇಕು ? ಇದಕ್ಕೆ ಕಾರಣ ಹಲವಾರು… “ಕ್ಷಣಮಾತ್ರದಲ್ಲಿ ನಿರೀಕ್ಷಿಸಿದ ಸಾಲ ಲಭ್ಯ. ಸಾಲಕ್ಕಾಗಿ ಸುಲಭ ಅರ್ಹತೆ, ತಕ್ಷಣದ ಸ್ಪಂದನೆ ಮತ್ತು ಸರಳ ಪ್ರಕ್ರಿಯೆ, ಆದಾಯ ದೃಢೀಕರಣ ಅಗತ್ಯವಿಲ್ಲ, ಕನಿಷ್ಟ ದಾಖಲಾತಿ, ಸಾಲಗಾರರ ಗುರುತುಪತ್ರ ಮಾತ್ರ ಸಾಕು, ಪಾರ ದರ್ಶಕತೆ, ಮರುಪಾವತಿ ಆಯ್ಕೆಗಳು, ಆಕರ್ಷಕ ಬಡ್ಡಿದರಗಳು, ಯಾವುದೇ ಪ್ರಕ್ರಿಯೆ ಶುಲ್ಕವಿಲ್ಲ, ಅತ್ಯಾಧುನಿಕ ಯಂತ್ರಗಳ ಮೂಲಕ ಗುಣಮಟ್ಟ ಪರಿಶೀಲನೆ, ಪರಿಣಾಮಕಾರಿ ಕನಿಷ್ಟವೆಚ್ಚ, ಅತ್ಯಂತ ಸುರಕ್ಷಿತ ಮತ್ತು ಹೆಚ್ಚಿನ ಅನುಕೂಲತೆ” ಎನ್ನುತ್ತಾರೆ ಭಾರತದ ಅತ್ಯಂತ ವಿಶ್ವಾಸಾರ್ಹ ಚಿನ್ನದ ಸಾಲ ನೀಡುವ “ರುಪೀಕ್” ಸಂಸ್ಥೆಯ ಮಾರ್ಕೆಟಿಂಗ್ ಮತ್ತು ಡಿಜಿಟಲ್ ವಿಭಾಗದ ಹಿರಿಯ ಉಪಾಧ್ಯಕ್ಷ ಶ್ರೀ ಶಲಭ್ ಅತ್ರೇ.
“ಕಾಲ ಬದಲಾಗಿದೆ. ತಂತ್ರಜ್ಞಾನ ಮತ್ತು ಆ್ಯಪ್‌ಗಳ ಮೂಲಕ, ಗ್ರಾಹಕರು ತಮ್ಮ ಖರ್ಚು ಮತ್ತು ಬಡ್ಡಿ ದರವನ್ನು ಟ್ರ್ಯಾಕ್ ಮಾಡುವುದರ ಜೊತೆಗೆ ಸಾಲದ ಕಂತು ಮೊಬೈಲ್ ಮೂಲಕ ಕಟ್ಟಬಹುದು, ಗಡುವು ಪುನಃ ನವೀಕೃತವಾಗಿರಬಹುದು. ಅವಧಿಯು ಪೂರ್ಣಗೊಳ್ಳುವ ಮೊದಲೇ ಸಾಲ ತೀರಿಸಬಹುದು. ಚಿನ್ನದ ಪರಿಶುದ್ಧತೆಯನ್ನು ಪರೀಕ್ಷಿಸಲು ಸಮಕಾಲೀನ ಅತ್ಯಾಧುನಿಕ ಉಪಕರಣಗಳ ಸಹಾಯದಿಂದ ಚಿನ್ನದ ಮೌಲ್ಯಮಾಪಕರು ಮನೆಬಾಗಿಲಿಗೆ ಸೇವೆಗಳನ್ನು ನೀಡುತ್ತಾರೆ. ತಮ್ಮ ಚಿನ್ನವನ್ನು ಹೇಗೆ ಅಳೆಯಲಾಗುತ್ತದೆ ಎಂಬುದನ್ನು ಸಾಲಗಾರ ಗ್ರಾಹಕರು ಸಾಲಪಡೆಯುವ ಮುನ್ನ ನೇರವಾಗಿ ವೀಕ್ಷಿಸುತ್ತಾರೆ.” ಎನ್ನುತ್ತಾರೆ “ರುಪೀಕ್” ಚಿನ್ನದಸಾಲ ಸಂಸ್ಥೆಯ ಶ್ರೀ ಶಲಭ್ ಅತ್ರೇ.
ಹೆಚ್ಚಿನ ಭಾರತೀಯ ಕುಟುಂಬಗಳಿಗೆ, ಹೂಡಿಕೆಗೆ ಚಿನ್ನವು ಹೆಚ್ಚು ಆದ್ಯತೆಯ ವಿಧಾನವಾಗಿದೆ. ಚಿನ್ನದ ಬೆಲೆಯಲ್ಲಿ ನಿರಂತರ ಬದಲಾವಣೆಗಳಿದ್ದರೂ ಸಹ, ದೀರ್ಘಾವಧಿಯಲ್ಲಿ ಚಿನ್ನದ ಮೌಲ್ಯವು ಸ್ಥಿರವಾಗಿ ಹೆಚ್ಚುತ್ತಿದೆ. ಹೌದು, ಯಾವುದೇ ಅಡಚಣೆ ರಹಿತವಾಗಿ ತುರ್ತುಅನುಕೂಲಕರ, ಸುರಕ್ಷಿತ, ಸ್ವಾವಲಂಭಿ ಸಾಲ, ಕೇವಲ ಚಿನ್ನದ ಸಾಲದಲ್ಲಿ ಮಾತ್ರ ಸಾಧ್ಯ.