Thursday, 12th December 2024

ಗೋಲ್ಡನ್ ಸ್ಟಾರ್ ಗಣೇಶ್‌’ಗೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಗೋಲ್ಡನ್ ಸ್ಟಾರ್ ಆಗಿ ಮಿಂಚುತ್ತಿರುವ ಗಣೇಶ್ ಅವರು ಶುಕ್ರವಾರ 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಜನಸಾಮಾನ್ಯರ ಮನೆಮಾತಾದ ʼಕಾಮಿಡಿ ಟೈಮ್ʼ ಮೂಲಕ ಮನೆಮಾತಾಗಿದ್ದ ಗಣೇಶ್ 2006ರಲ್ಲಿ ಎಂ ಡಿ ಶ್ರೀಧರ್ ನಿರ್ದೇಶನದ ‘ಚೆಲ್ಲಾಟ’ ಚಿತ್ರದಲ್ಲಿ ನಾಯಕನಾಗಿ ನಟಿಸಿದರು. ಗಣೇಶ್ ಗೆ ಜೋಡಿ ಯಾಗಿ ರೇಖಾ ಅಭಿನಯಿಸಿದ್ದರು. ಇದಕ್ಕೂ ಮುಂಚೆ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಗಣೇಶ್ ನಂತರ ನಟಿಸಿದ ‘ಮುಂಗಾರು ಮಳೆ’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ಹಲವು ದಾಖಲೆಗಳನ್ನು ಬರೆಯಿತು. ಈ ಸಿನಿಮಾ 75 ಕೋಟಿ ಕಲೆಕ್ಷನ್ ಮಾಡಿತ್ತು. ಗಣೇಶ್ ಒಬ್ಬ ಸ್ಟಾರ್ ನಟರಾದರು.

ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿನಯದ ‘ಗಾಳಿಪಟ 2’ ಚಿತ್ರದ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಮತ್ತೊಂದೆಡೆ ‘ತ್ರಿಬಲ್ ರೈಡಿಂಗ್’ ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡುತ್ತಿದ್ದಾರೆ.