Saturday, 14th December 2024

ಸರಕಾರ ರೈತರಿಗೆ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ: ನದಾಫ್

ಮೂಡಲಗಿ : ಆತ್ಮ ಯೋಜನೆ ಕೃಷಿ ಇಲಾಖೆ ಹಾಗೂ ಕೃಷಿ ಸಂಬoಧಿತ ಇಲಾಖೆಗಳ ಸಹಯೋಗದಲ್ಲಿ ಕಿಸಾನ್ ಗೋಷ್ಠಿ ಕಾರ್ಯ ಕ್ರಮ ದುರದುಂಡಿ ಗ್ರಾಮದಲ್ಲಿ ಜರುಗಿತು.

ಸಹಾಯಕ ಕೃಷಿ ನಿರ್ದೇಶಕ ಎಂ.ಎo.ನದಾಫ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರಕಾರ ರೈತರಿಗೆ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದ ಅವರು ಕೃಷಿ ಇಲಾಖೆಯ ಸೌಲತ್ತುಗಳ ಜೊತೆಗೆ ರೈತರ ಕ್ರಿಯಾ ಯೋಜನೆ ಕುರಿತು ವಿವರವಾದ ಮಾಹಿತಿಯನ್ನು ರೈತರಿಗೆ ನೀಡಿದರು.

ಕಾರ್ಯಕ್ರಮದಲ್ಲಿ ಐಸಿಎಆರ್ ಬರ್ಡ್ಸ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಸೂರಜ್ ಕೌಜಲಗಿ ಹೈನುಗಾರಿಕೆ ಕುರಿತು, ಡಾ.ಎಂ.ಎನ್.ಮಳಾವಡೆ ಸಮಗ್ರ ಬೇಸಾಯ ಪದ್ಧತಿ ಹಾಗೂ ಕಿತ್ತೂರರಾಣಿ ಚೆನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ವಿಜಯ ಮಹಾಂತೇಶ ಸಾವಯವ ಕೃಷಿ ಕುರಿತು ಉಪನ್ಯಾಸ ನೀಡಿದರು.

ಸಮಾರಂಭದಲ್ಲಿ ದುರದುಂಡಿ ಗ್ರಾಪಂ ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗ, ಕೃಷಿ ಪ್ರಶಸ್ತಿ ವಿಜೇತರು ಸಾವಯವ ಕೃಷಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಆತ್ಮ ಯೋಜನೆ ತಾಂತ್ರಿಕ ವ್ಯವಸ್ಥಾಪಕಿ ಛಾಯಾ ಪಾಟೀಲ್ ನಿರೋಪಿಸಿದರು. ಐಸಿಐಸಿಐ ಅಧಿಕಾರಿ ಬಸವರಾಜ್ ಚುಕ್ಕಿ ವಂದಿಸಿದರು