Saturday, 23rd November 2024

Healthy Breakfast: ಬೆಳಗಿನ ಉಪಾಹಾರಕ್ಕೆ ಈ 4 ಆಹಾರ ಪದಾರ್ಥಗಳನ್ನು ಎಂದಿಗೂ ಸೇವಿಸಬೇಡಿ!

Healthy Breakfast

ಪ್ರತಿದಿನದ ಉಪಾಹಾರ ನಮ್ಮ ಅವಿಭಾಜ್ಯ ಕ್ರಮ. ಯಾಕೆಂದರೆ ಇದು ನಮ್ಮನ್ನು ದಿನವಿಡೀ ಉತ್ಸಾಹದಿಂದ ಇರುವಂತೆ ಮಾಡುತ್ತದೆ. ಇದರಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ. ಆದರೆ ಉಪಾಹಾರ(Healthy Breakfast)ವನ್ನು ತಿನ್ನುವುದು ಒಳ್ಳೆಯದು ಎಂದ ಮಾತ್ರಕ್ಕೆ ಏನು ಬೇಕಾದರೂ ತಿನ್ನಬಹುದು ಎಂದುಕೊಳ್ಳಬೇಡಿ. ಯಾಕೆಂದರೆ ಕೆಲವೊಂದು ಆಹಾರಗಳನ್ನು ಉಪಾಹಾರದಲ್ಲಿ ಸೇವಿಸಬಾರದು. ಇದರಿಂದ ಒಟ್ಟಾರೆ ದೇಹದ ಆರೋಗ್ಯ ಕೆಡುತ್ತದೆಯಂತೆ. ಹಾಗಾಗಿ ಆಹಾರ ತಜ್ಞರು ಉಪಹಾರದಲ್ಲಿ ಕೆಲವು ಆಹಾರಗಳನ್ನು ಸೇರಿಸಬಾರದು ಎಂದು ತಿಳಿಸಿದ್ದಾರೆ.

ಕೆಲವು ಆಹಾರಗಳು ನಿಮ್ಮಲ್ಲಿ ಅನಗತ್ಯ ಕ್ಯಾಲೊರಿಗಳನ್ನು ಹೆಚ್ಚಿಸುತ್ತವೆ ಮತ್ತು ಇದರಿಂದ ರಕ್ತದಲ್ಲಿ ಸಕ್ಕರೆಯಂಶ ಹಚ್ಚಾಗಬಹುದು ಮತ್ತು ಇದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾಗಿ ಕೊಬ್ಬು ಮತ್ತು ಪ್ರೋಟೀನ್‍ಗಳಿಂದ ತುಂಬಿರುವ ಉಪಾಹಾರದ ಆಯ್ಕೆ ಮಾಡಿ. ಇದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವುದಿಲ್ಲ ಮತ್ತು ನಿಮ್ಮ ಹೊಟ್ಟೆ ಹೆಚ್ಚು ಕಾಲ ತುಂಬಿರುವಂತೆ ಮಾಡುತ್ತದೆ. ಹಾಗಾಗಿ ಆಹಾರ ತಜ್ಞರು, ತಿಳಿಸಿದ ಪ್ರಕಾರ ಉಪಹಾರದಲ್ಲಿ ಎಂದಿಗೂ ಈ ನಾಲ್ಕು ಆಹಾರಗಳನ್ನು ತಿನ್ನಬಾರದಂತೆ. ಅವು ಯಾವುದೆಂಬುದನ್ನು ತಿಳಿಯೋಣ.

ಮೊದಲನೆಯದು ಹಣ್ಣಿನ ರಸಗಳು ಅಥವಾ ಸ್ಮೂಥಿಗಳು:

ಏಕೆಂದರೆ ಇದರಲ್ಲಿ ಫೈಬರ್ ಅಂಶ ಕಡಿಮೆ ಇರುತ್ತದೆ ಮತ್ತು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತದೆ. ಅಲ್ಲದೇ ಇದರಿಂದ ನಿಮಗೆ ದಿನವಿಡೀ ಹೆಚ್ಚು ಹಸಿವಾಗುತ್ತಿರುತ್ತದೆ.

ಎರಡನೆಯದು ಚಹಾ ಅಥವಾ ಕಾಫಿ:

ಬೆಳಗ್ಗಿನ ಉಪಾಹಾರದೊಂದಿಗೆ ಕಾಫಿ ಅಥವಾ ಚಹಾ ಕುಡಿಯುವ ಅಭ್ಯಾಸ ಹಲವರಿಗಿದೆ. ಆದರೆ ಅದು ಕಬ್ಬಿಣ, ಸತು ಮತ್ತು ಕ್ಯಾಲ್ಸಿಯಂನಂತಹ ಪ್ರಮುಖ ಪೋಷಕಾಂಶಗಳನ್ನು ದೇಹ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ದೇಹದಲ್ಲಿ ಪೌಷ್ಟಿಕಾಂಶಗಳ ಕೊರತೆಯಾಗುತ್ತದೆ.

ಮೂರನೆಯದು ಪರಿಮಳಯುಕ್ತ ಮೊಸರು:

ಇದು ಕೃತಕ ಸಕ್ಕರೆ ಮತ್ತು ಹೆಚ್ಚುವರಿ ಸಕ್ಕರೆಯನ್ನು ಸಹ ಹೊಂದಿರುತ್ತದೆ. ಇದು ನಿಮಗೆ ಪದೇ ಪದೇ ಹಸಿವಾಗುವಂತೆ ಮಾಡುತ್ತದೆ ಮತ್ತು ಈ ಉಪಾಹಾರದಿಂದ ನೀವು ಹೆಚ್ಚು ಕ್ಯಾಲೊರಿ ಸೇವಿಸಿದಂತಾಗುತ್ತದೆ.

ನಾಲ್ಕನೆಯದು ಧಾನ್ಯಗಳು:

ಇದರಲ್ಲಿ ಪ್ರೋಟೀನ್, ಫೈಬರ್ ಮತ್ತು ಕೊಬ್ಬುಗಳು ಹೆಚ್ಚಿನ ಪ್ರಮಾಣದಲ್ಲಿರುವುದಿಲ್ಲ. ಆದರೆ ಇದು ಹಸಿವನ್ನು ಹೆಚ್ಚಿಸುತ್ತದೆ. ಮತ್ತು ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟದಲ್ಲಿ ವ್ಯತ್ಯಾಸವಾಗುತ್ತದೆ. ಆದ್ದರಿಂದ, ನಿಮ್ಮ ಉಪಾಹಾರದಲ್ಲಿ ಈ ನಾಲ್ಕು ಆಹಾರಗಳನ್ನು ಸೇವಿಸಬೇಡಿ.

ಇದನ್ನೂ ಓದಿ: ಗೌರಿ-ಗಣೇಶ ಹಬ್ಬದ ಗ್ರ್ಯಾಂಡ್‌ ಮೇಕಪ್‌‌‌ಗೆ ಇಲ್ಲಿದೆ 5 ಸಿಂಪಲ್‌ ರೂಲ್ಸ್!

ಹಾಗಾಗಿ ಬೆಳಗ್ಗಿನ ಉಪಾಹಾರದಲ್ಲಿ ಉತ್ತಮವಾದ ಆಹಾರವನ್ನು ಸೇವಿಸಿ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ದೀರ್ಘಕಾಲದವರೆಗೆ ಆರೋಗ್ಯಕರವಾದ ಜೀವನವನ್ನು ಸಾಗಿಸಿ.