Thursday, 19th September 2024

ಎರಡನೇ ಚುಟುಕು ಟಿ20: ಟಾಸ್ ಗೆದ್ದ ಭಾರತ, ಬೌಲಿಂಗ್ ಆಯ್ಕೆ

ಸಿಡ್ನಿ: ಸಿಡ್ನಿಯಲ್ಲಿ ನಡೆಯಲಿರುವ ಎರಡನೇ ಚುಟುಕು ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್‌ ಗೆದ್ದು, ಫೀಲ್ಡಿಂಗ್‌ ಆರಿಸಿ ಕೊಂಡಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ಪ್ರವಾಸಿಗರಿಗೆ ಎರಡನೇ ಪಂದ್ಯ ಗೆದ್ದು ಇಂದೇ ಸರಣೀ ಗೆಲ್ಲುವ ಛಲ ಹೊಂದಿದೆ.

ಟೀಂ ಇಂಡಿಯಾದ ಬಲಾಬಲವನ್ನು ಗಮನಿಸಿದರೆ, ಆಸೀಸ್ ತಂಡದ ಬೌಲಿಂಗ್‌ ವಿಭಾಗ ತುಸು ದುರ್ಬಲವಾದಂತಿದೆ. ಈ ಪಂದ್ಯ ದಲ್ಲಿ ಪ್ರಧಾನ ವೇಗಿ ಮಿಚೆಲ್‌ ಸ್ಟಾರ್ಕ್‌ ಆಡುತ್ತಿಲ್ಲ, ವೈಯಕ್ತಿಕ ಕಾರಣಗಳಿಂದ ಸರಣಿಯಿಂದಲೇ ಹೊರಗುಳಿದಿದ್ದಾರೆ. ಹ್ಯಾಜಲ್‌ವುಡ್‌ ಕೂಡ ಪಂದ್ಯದ ಭಾಗವಾಗಿಲ್ಲ.

ಇತ್ತೀಚಿನ ವರದಿ ಪ್ರಕಾರ, ಆಸೀಸ್‌ ತಂಡದಿಂದ ಆರನ್‌ ಫಿಂಚ್‌, ಹ್ಯಾಜಲ್‌ವುಡ್‌ ಹಾಗೂ ಸ್ಟಾರ್ಕ್‌ ಹೊರಗುಳಿದಿದ್ದು, ಸ್ಯಾಮ್ಸ್, ಸ್ಟೋಯಿನಿಸ್‌ ಹಾಗೂ ಟೈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಟೀಂ ಇಂಡಿಯಾದಲ್ಲಿ ಗಾಯಾಳು ರವೀಂದ್ರ ಜಡೇಜಾ ಬದಲಿಗೆ ಸ್ಪಿನ್ನರ್‌ ಚಹಲ್‌, ಶಮಿ ಬದಲಿಗೆ ಠಾಕೂರ್‌ ಹಾಗೂ ಮನೀಶ್‌ ಪಾಂಡೆ ಬದಲು ಶ್ರೇಯಸ್‌ ಅಯ್ಯರ್‌ ಸ್ಥಾನ ಪಡೆದಿದ್ದಾರೆ.

ಆರನ್‌ ಫಿಂಚ್‌ ಬದಲು ಆಸೀಸ್‌ ತಂಡವನ್ನು ವಿಕೆಟ್‌ ಕೀಪರ್‌ ಮ್ಯಾಥ್ಯೂ ವೇಡ್‌ ಮುನ್ನಡೆಸಲಿದ್ದಾರೆ. ಉಳಿದಂತೆ ಉಭಯ ತಂಡಗಳಲ್ಲಿ ಯಾವುದೇ ಮಹತ್ತರ ಬದಲಾವಣೆಯಾಗಿಲ್ಲ.

 

 

Leave a Reply

Your email address will not be published. Required fields are marked *