Monday, 16th September 2024

ಫಾಕ್ಸ್ಕಾನ್’ನಿಂದ 500 ಮಿಲಿಯನ್ ಡಾಲರ್ ಹೂಡಿಕೆ, 25,000 ನೇರ ಉದ್ಯೋಗ ಸೃಷ್ಟಿ

ಹೈದ್ರಬಾದ್‌: ತೈವಾನ್ ನ ಬಹುರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ದೈತ್ಯ ಫಾಕ್ಸ್ ಕಾನ್ ಇಂಟರ್ ಕನೆಕ್ಟ್ ಟೆಕ್ನಾಲಜಿ ಲಿಮಿಟೆಡ್ ಹೈದರಾಬಾದ್ ನ ಹೊರವಲಯದಲ್ಲಿರುವ ಕೊಂಗರಾ ಕಲಾನ್ ನಲ್ಲಿ ತನ್ನ ಉತ್ಪಾದನಾ ಸೌಲಭ್ಯಕ್ಕೆ ಭೂಮಿ ಪೂಜೆ ನೆರವೇರಿಸಿತು.

ತೆಲಂಗಾಣ ಕೈಗಾರಿಕಾ ಸಚಿವ ಕೆ.ಟಿ.ರಾಮರಾವ್ ಮತ್ತು ಫಾಕ್ಸ್ಕಾನ್ ಕಾರ್ಯ ನಿರ್ವಾಹಕರು ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಫಾಕ್ಸ್ಕಾನ್ 500 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಮತ್ತು 25,000 ನೇರ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ತೆಲಂಗಾಣ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಸೌಲಭ್ಯವು ವಿಶ್ವ ದರ್ಜೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸುವುದನ್ನು ಮುಂದುವರಿಸುವ ಭರವಸೆ ನೀಡುತ್ತದೆ ಮತ್ತು ತನ್ನ ಜಾಗತಿಕ ಉತ್ಪಾದನಾ ನೆಲೆಯನ್ನು ವೈವಿಧ್ಯಗೊಳಿಸುವ ಕಂಪನಿಯ ಜಾಗತಿಕ ವಿಸ್ತರಣಾ ಕಾರ್ಯತಂತ್ರಕ್ಕೆ ಒಂದು ಮೈಲಿಗಲ್ಲಾಗಿದೆ ಎಂದು ತೆಲಂಗಾಣ ಸರ್ಕಾರ ಮತ್ತು ಫಾಕ್ಸ್ಕಾನ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಈ ಒಪ್ಪಂದವು 10 ವರ್ಷಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.