Sunday, 15th December 2024

ನೂತನ ಸಂಸತ್ ಕಟ್ಟಡ ಉದ್ಘಾಟನೆ ನಮ್ಮ ಹೆಮ್ಮೆಯ ಪ್ರತೀಕ: ನರೇಂದ್ರ ಮೋದಿ

ವದೆಹಲಿ: ಭಾರತದ ನೂತನ ಸಂಸತ್ ಕಟ್ಟಡ ಉದ್ಘಾಟನೆಯು ನಮ್ಮ ಹೃದಯ, ಮನಸ್ಸುಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ.

ನೂತನ ಸಂಸತ್ ಕಟ್ಟಡ ಉದ್ಘಾಟನೆಯ ಬಳಿಕ ಟ್ವಿಟ್ ಮಾಡಿರುವ ಅವರು, ಭಾರತದ ಸಂಸತ್ತಿನ ಹೊಸ ಕಟ್ಟಡವನ್ನು ಉದ್ಘಾಟಿಸುತ್ತಿದ್ದಂತೆ, ನಮ್ಮ ಹೃದಯ, ಮನಸ್ಸು ಹೆಮ್ಮೆ ಮತ್ತು ಭರವಸೆಯಿಂದ ತುಂಬಿದೆ. ಈ ಐತಿಹಾಸಿಕ ಕಟ್ಟಡವು ಸಬಲೀಕರಣದ ತೊಟ್ಟಿಲು ಆಗಲಿದೆ. ನಮ್ಮ ಕನಸು ಗಳನ್ನು ವಾಸ್ತವಕ್ಕೆ ತರಲು ಕೆಲಸ ಮಾಡಲಿದೆ. ಇದು ನಮ್ಮ ರಾಷ್ಟ್ರವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಇಂದು ನೂತನ ಸಂಸತ್ ಭವನವನ್ನು ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. ಇದಕ್ಕೂ ಮುನ್ನ ವಿವಿಧ ವಿಧಿ-ವಿಧಾನಗಳಂತೆ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳ ಲಾಯಿತು. ಆ ಬಳಿಕ ರಾಜ ದಂಡವನ್ನು ಲೋಕಸಭೆಯ ಸ್ಪೀಕರ್ ಕುರ್ಚಿಯ ಸಮೀಪ ಪ್ರತಿಷ್ಠಾಪಿಸಿದರು.

ಬಳಿಕ ಸಂಸತ್ ಭವನ ನಿರ್ಮಾಣಕ್ಕಾಗಿ ದುಡಿದ ಕಾರ್ಮಿಕರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.

ಮೊದಲ ಹಂತದ ನೂತನ ಸಂಸತ್ ಕಟ್ಟಡ ಉದ್ಘಾಟನೆ ಮುಗಿದಿದ್ದು, 2ನೇ ಹಂತದ ಕಾರ್ಯಕ್ರಮಗಳು ಮಧ್ಯಾಹ್ನದ ಬಳಿಕ ಶುರುವಾಗಲಿವೆ. ಇದೀಗ ಮನ್ ಕೀ ಬಾತ್ ನಲ್ಲಿ ಮಾತನಾಡಿತ್ತಿರುವ ಪ್ರಧಾನಿ ಮೋದಿಯವರು, ‘ಮನ್ ಕಿ ಬಾತ್’ನ ಈ ಸಂಚಿಕೆಯು ಎರಡನೇ ಶತಮಾನದ ಆರಂಭವಾಗಿದೆ.