Friday, 22nd November 2024

ಗ್ರಾಮೀಣ ಭಾಗದ ರಸ್ತೆ, ಇನ್ನಿತರೆ ಅಭಿವೃದ್ಧಿ ಕಾಮಗಾರಿಗೆ ನರೇಗಾ ಯೋಜನೆ ಬಳಸಿ : ಜೆ.ಸಿ.ಎಂ.

ಚಿಕ್ಕನಾಯಕನಹಳ್ಳಿ : ಶಾಸಕರ ಅನುದಾನವನ್ನು ಕಾಯದೇ, ನರೇಗಾ ಯೋಜನೆಯಡಿ ಸ್ಥಳೀಯ ಹಳ್ಳಿಗಳ sಸಣ್ಣ,ಪುಟ್ಟ ರಸ್ತೆಗಳ ಅಭಿವೃದ್ದಿಯನ್ನು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾಮಗಾರಿ ಮಾಡುವಂತೆ ಸಚಿವ ಜೆ.ಸಿ. ಮಾಧುಸ್ವಾಮಿ ಸಲಹೆ ನೀಡಿದರು.

ತಾಲ್ಲೂಕಿನ ವಿವಿಧ ಕಡೆ ಭಾನುವಾರ ಕಸಬಾ ಹೋಬಳಿ ಸಿದ್ದರಾಮನಗರದಲ್ಲಿ ವಿಶ್ವೇಶ್ವರ ಜಲ ನಿಗಮ ಎತ್ತಿನಹೊಳೆ ಯೋಜನೆ ಹಾಗೂ ವಿಶೇಷ ಘಟಕ ಯೋಜನೆಯಡಿ ೨೦ ಲಕ್ಷದಲ್ಲಿ ಸಾಸಲು ಗ್ರಾಮದಲ್ಲಿ ಸಿ.ಸಿ ರಸ್ತೆ, ೭೦ಲಕ್ಷದಲ್ಲಿ ಅನುದಾನದಲ್ಲಿ ದಿಬ್ಬದ ಹಳ್ಳಿ, ೬೦ಲಕ್ಷರೂ. ವೆಚ್ಚದಲ್ಲಿ ಮಾರಸಂದ್ರಗ್ರಾಮದಲ್ಲಿ ಹಾಗೂ ೭೦ ಲಕ್ಷರೂ. ವೆಚ್ಚ ದಲ್ಲಿ ಸಿದ್ದರಾಮನಗರದಲ್ಲಿ ಡಾಂಬರೀ ಕರಣ ಹಾಗೂ ಸಿಸಿ ರಸ್ತೆಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಈ ಹಿಂದಿನ ಅವಧಿಯಲ್ಲಿನ ಜನಪ್ರತಿನಿಧಿಗಳು ಹಳ್ಳಿಗಳ ಮೂಲ ಸೌಕರ್ಯವನ್ನು ಸಹ ಮಾಡದೇ ಇದ್ದ ಕಾರಣ ನನ್ನ ಮೇಲೆ ಹೆಚ್ಚು ಜವಾಬ್ದಾರಿ ಹೆಚ್ಚಾಗಿದೆ. ಈ ಭಾಗದ ಕೆಲವು ಗ್ರಾಮಗಳಲ್ಲಿ ಪರಿಶಿಷ್ಠ ಜಾತಿ ಹಾಗೂ ಪಂಗಡಗಳ ಜನಾಂಗವಿಲ್ಲದ ಕಾರಣ ವಿಶೇಷ ಘಟಕಯೋಜನೆಯಡಿ ಅನುದಾನಗಳು ಬಿಡುಗಡೆಗೊಳ್ಳುವುದಿಲ್ಲ, ಆದರೆ ಶಾಸಕರ ಸ್ಥಳೀಯಾಭಿವೃದ್ಧಿ ಯೋಜನೆಯಲ್ಲಿ ಅಗತ್ಯವಿರುವ ಕಡೆ ಕಾಮಾಗಾರಿಗೆ ಹಣ ಬಿಡುಗಡೆ ಮಾಡಿದ್ದೇನೆ, ಅನೇಕ ಗ್ರಾಮಗಳಲ್ಲಿ ನರೇಗಾ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳ ಮೂಲಕ ಗ್ರಾಮ ದೊಳಗಿನ ಹಾಗೂ ಹೊಲ, ತೋಟಗಳ ರಸ್ತೆಗಳ ಅಭಿವೃದ್ದಿ ಕಾರ್ಯ ವನ್ನು ಕೈಗೆತ್ತಿಕೊಳ್ಳಿ ರೆಂದು ಅಧಿಕಾರಿಗಳಿಗೆ ಸೂಚಿಸಿ, ನರೇಗ ಯೋಜನೆಯಲ್ಲಿ ಪ್ರತಿಗ್ರಾಮ ಪಂಚಾಯಿತಿಗೆ ೪೦ರಿಂದ ೪೫ಲಕ್ಷ ರೂ. ಅನುದಾನವಿದ್ದು ಸಂಪೂರ್ಣವಾಗಿ ಬಳಸಿರೆಂದರು. ಈ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿನ ಸಂಪರ್ಕ ರಸ್ತೆಗಳನ್ನು ಮಾಡಿ ಮುಗಿಸಿದ್ದು, ರಸ್ತೆ ಕಾಮಗಾರಿಗಳ ಬಾಕಿಯಿಲ್ಲ ಇನ್ನೇಲ್ಲಾದರೂ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನಿ ಎಂದರು.

ಕಾರ್ಯಕ್ರಮದಲ್ಲಿ ಮುಖಂಡಸಾಸಲು ದಿನೇಶ್ ಮಾತನಾಡಿ ಈ ಭಾಗದಲ್ಲಿನ ನೀರಿನ ಸಮಸ್ಯೆಯ ಜೊತೆಗೆ ಹಲವು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಉಳಿದಿದ್ದ ಸಂಪರ್ಕ ರಸ್ತೆ ಹಾಗೂ ಇತರೆ ಅಭಿವೃದ್ದಿ ಕಾರ್ಯಗಳು ಸಚಿವರ ಅಧಿಕಾರವಧಿಯಲ್ಲಿ ಪೂರ್ಣ ಗೊಂಡಿದೆ ಎ0ದರು.

ಸಭೆಯಲ್ಲಿ ತಮ್ಮಡಿಹಳ್ಳಿಯ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಮಾತನಾಡಿ ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ರೈತರು ಪ್ರತಿವರ್ಷ ಬೇಸಿಗೆಯಲ್ಲಿ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಲಕ್ಷಗಟ್ಟಲೆ ಹಣವನ್ನು ಕೊಳವೆ ಬಾವಿ, ಉಪಕರಣಗಳಿಗೆ ವೆಚ್ಚಮಾಡುವ ಸನ್ನಿವೇಶವಿತ್ತು, ಆದರೆ ಸಚಿವರು ಕ್ಷೇತ್ರದ ಜನತೆಗೆ ತಾವು ಮಾತುಕೊಟ್ಟಂತೆ ನೀರಾವರಿ,ತಾಲ್ಲೂಕಿನ ಅಭಿವೃದ್ಧಿ ಕೆಲಸವನ್ನು ಮಾಡಿ ಕ್ಷೇತ್ರದ ಋಣ ತೀರಿಸಿರುವುದು ಸೂರ್ಯನಷ್ಟೆ ಸತ್ಯವಾಗಿದೆ. ಇದನ್ನು ಅಲ್ಲಗೆಳೆಯವರಿಗೆ ಕಾರ್ಯಕರ್ತರು ತಕ್ಕಉತ್ತರ ನೀಡಬೇಕೆಂದರು.

ಈ ಸಂದರ್ಭದಲ್ಲಿ ದುಗಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಲಿತಮ್ಮ, ಸದಸ್ಯ ರಾಜಶೇಖರ್, ಕುಪ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜು , ವಿಶ್ವೇಶ್ವರಯ್ಯ ಜಲ ನಿಗಮ ಇಲಾಖೆ ಎಇಇ ಸಂಗಮೇಶ್‌ಕಲಬುರ್ಗಿ, ಜೆಇಆರ್. ಆನಂದ್‌ ಕುಮಾರ್ ಮುಂತಾದವರಿದ್ದರು.