Saturday, 23rd November 2024

ಮಹಾರಾಷ್ಟ್ರದಲ್ಲಿ ‘ಎತ್ತಿನಗಾಡಿ ಓಟ’ದ ಸ್ಪರ್ಧೆಗೆ ಸುಪ್ರೀಂ ಅಸ್ತು

#Kambala

ನವದೆಹಲಿ: ಮಹಾರಾಷ್ಟ್ರದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸಲು ಸುಪ್ರೀಂ ಕೋರ್ಟ್‌ ಗುರುವಾರ ಅನುಮತಿ ನೀಡಿದೆ.

ಬಾಕಿ ಇದ್ದ ಎಲ್ಲ ಅರ್ಜಿಗಳನ್ನು ಸಂವಿಧಾನ ಪೀಠದ ಪರಾಮರ್ಶೆಗೆ ಪೀಠ ಒಪ್ಪಿಸಿತು. 2017ರಿಂದ ರಾಜ್ಯದಲ್ಲಿ ಈ ಸ್ಪರ್ಧೆ ನಿಷೇಧಿಸಲಾಗಿದೆ.

ಆ ಎರಡು ರಾಜ್ಯಗಳಲ್ಲಿ ತಂದಂತೆಯೇ ಮಹಾರಾಷ್ಟ್ರದಲ್ಲಿಯೂ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಹೀಗಾಗಿ, ಅದೇ ಮಾನದಂಡವನ್ನು ಇಲ್ಲೂ ಅಳವಡಿಸಬೇಕು ಎಂದು ಪೀಠ ಅಭಿಪ್ರಾಯಪಟ್ಟಿತು. ನ್ಯಾಯಮೂರ್ತಿಗಳಾದ ದಿನೇಶ್‌ ಮಹೇಶ್ವರಿ ಮತ್ತು ಸಿ.ಟಿ.ರವಿಕುಮಾರ್‌ ಅವರು ಈ ಪೀಠದ ಇತರ ಸದಸ್ಯರು.

ಕರ್ನಾಟಕ ಮತ್ತು ತಮಿಳುನಾಡು ಪ್ರಕರಣ ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದ ಮಹಾರಾಷ್ಟ್ರ ಸರ್ಕಾರ, ರಾಜ್ಯದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆಯ ಮೇಲೆ ವಿಧಿಸಿರುವ ನಿಷೇಧ ಹಿಂಪಡೆಯಬೇಕು ಎಂದು ಕೋರಿತ್ತು.

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಇದರೊಂದಿಗೆ ನಡೆಸಬೇಕು. ಸಂಬಂಧಿತ ವಾದಿಗಳು ಈ ಸಂಬಂಧ ಮುಖ್ಯ ವಿಷಯದ ವಿಚಾರಣೆಗೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅವರಿಗೇ ಮನವಿ ಸಲ್ಲಿಸಬಹುದು ಎಂದು ಪೀಠವು ಸಲಹೆ ಮಾಡಿತು.

ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಮಹಾರಾಷ್ಟ್ರ ಸರ್ಕಾರವನ್ನು ಪ್ರತಿನಿಧಿಸಿದ್ದರು.