ತಾಲ್ಲೂಕಿನ ಜ್ವಲಂತ ಸಮಸ್ಯೆಗಳಿಗೆ ಸ್ವಂದಿಸಿ : ಕೊಬ್ಬರಿ ಬೆಲೆಗಾಗಿ ನಿರಂತರ ಹೋರಾಟಕ್ಕೆ ಸಿದ್ದ
ತಿಪಟೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದಾರೆ ಬಿಜೆಪಿ ವಿರುದ್ಧದ ಭ್ರಷ್ಟಾಚಾರ, ರೈತ ವಿರೋಧಿ ನೀತಿ, ನಿರುದ್ಯೋಗ ಸಮಸ್ಯೆ, 40% ಕಮಿಷನ್ ವಿರುದ್ಧದ ಅಲೆಯೇ ಹೊರತು ಕಾಂಗ್ರೆಸ್ ಪರ ಅಲೆಯಲ್ಲ. ಕಾಂಗ್ರೆಸ್ ಪಕ್ಷವು ನೀಡಿರುವ ಉಚಿತ ಗ್ಯಾರಂಟಿಗಳನ್ನು ಸರ್ಕಾರ ರಚನೆಯಾದ ದಿನದಿಂದಲೇ ಜಾರಿಗೆ ತರಬೇಕು. ತಿಪಟೂರಿನಲ್ಲಿ ಡಿ.ಕೆ. ಶಿವಕುಮಾರ್ ಪ್ರಚಾರದ ವೇಳೆ ಕೊಟ್ಟ ಮಾತಿನಂತೆ 15 ಸಾವಿರ ಕೊಬ್ಬರಿ ಬೆಲೆ ಜಾರಿ ಗೊಳಿಸಬೇಕು ಇಲ್ಲದಿದ್ದರೆ ಮತ್ತೆ ರೈತರ ಪರ ಹೋರಾಟಕ್ಕೆ ನಿಲ್ಲುತ್ತೇನೆ. ಜೆಡಿಎಸ್ ಪರಾಜಿತ ಅಭ್ಯರ್ಥಿ ಕೆ.ಟಿ. ಶಾಂತಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸುಮಾರು ಎಂಟು ವರ್ಷಗಳಿಂದ ಸತತವಾಗಿ ತಾಲೂಕಿನ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದೇನೆ ನಾನು ಸೇವೆ ಮಾಡಿದ ಒಂದು ವರ್ಷದ ಹಣದಲ್ಲಿ ಚುನಾವಣಾ ಸಂದರ್ಭ ದಲ್ಲಿ ಚೆಲ್ಲಿದ್ದರೆ ನಾನು ಸಹ ಶಾಸಕನಾಗುತ್ತಿದ್ದೆ ಜನರು ನನ್ನ ಸೇವೆಯನ್ನು ಗಮನದಲ್ಲಿಟ್ಟುಕೊಂಡಿದ್ದಾರೆ ಎಂದು ತಿಳಿದಿದ್ದೆ,
ಮುಂದೆಯೂ ಸಹ ಕ್ಷೇತ್ರದ ಜನರ ಸೇವೆಗೆ ಬದ್ಧನಾಗಿದ್ದೇನೆ. ಮತದಾರರು ನನ್ನ ಮೇಲಿನ ಅಭಿಮಾನ, ಬೆಂಬಲ ನೋಡಿ ಸಹಿಸದ ಇಬ್ಬರು ರಾಜಕಾರಣಿಗಳು ನನ್ನ ಮೇಲೆ ಇಲ್ಲದ ಸಲ್ಲದ ಆರೋಪ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ತಕ್ಕ ಶಾಸ್ತ್ರಿ ಅನುಭವಿಸ ಲಿದ್ದಾರೆ ಎಂದು ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಸ್ವಾಮಿ ಮಾತನಾಡಿ ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳು ಹುಸಿ ಭರವಸೆಗಳಾಗಿವೆ, ಹೇಗೆ ನೆರವೇರಿಸುತ್ತಾರೆ ಕಾದು ನೋಡಬೇಕಿದೆ, ರಾಜ್ಯ ಸರ್ಕಾರದ ಬಜೆಟ್ ಗೂ ಮೀರಿ ಪ್ರಣಾಳಿಕೆ ನೀಡಿವೆ, ಎಂದರು ಈ ಸಮಯದಲ್ಲಿ ರಾಜು ಕಂಚಘಟ್ಟ, ಜಿಲ್ಲಾ ಕಾರ್ಯದರ್ಶಿ ಶಿವಸ್ವಾಮಿ, ನಟರಾಜು ಗುರುಗದಹಳ್ಳಿ, ಧನಂಜಯ್, ಹಾಗೂ ಕಾರ್ಯಕರ್ತರು ಇದ್ದರು.
*
ನನ್ನ ಸೋಲಿಗೆ ನನ್ನ ಪಕ್ಷದ ಕೆಲ ಕಾರ್ಯಕರ್ತರು ಕಾರಣರಾಗಿದ್ದಾರೆ ಚುನಾವಣೆ ಹಿಂದಿನ ದಿನ ಬೂತ್ ಏಜೆಂಟರ ನಿರ್ವಹಣೆ ನಿಮಿತ್ತ ಮನೆಯಲ್ಲಿಯೇ ಇದ್ದೆ, ಮೊಬೈಲ್ ಸ್ವಿಚ್ ಆಫ್ ಮಾಡಿಲ್ಲ, ನನ್ನ ಮೇಲೆ ಅಪಪ್ರಚಾರ ಮಾಡುವವರಿಗೆ ನೀನೇ ಶಿಕ್ಷೆ ನೀಡಬೇಕೆಂದು ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕೇಳಿಕೊಂಡು ಬಂದಿದ್ದೇನೆ, ಒಬ್ಬರನ್ನು ತುಳಿದು ರಾಜಕೀಯ ಮಾಡುವುದು ಸರಿ ಅನಿಸುವುದಿಲ್ಲ, ಆದರೂ ಮತದಾರರು 26 ಸಾವಿರ ಮತ ನೀಡಿದ್ದಾರೆ. ಮುಂದಿನ ದಿನದಲ್ಲಿ ಆಶೀರ್ವದಿಸುತ್ತಾರೆ ಎಂಬ ನಂಬಿಕೆಯಿದೆ.
ಜೆ.ಡಿ.ಎಸ್. ಪರಾಜಿತ ಅಭ್ಯರ್ಥಿ ಸಮಾಜ ಸೇವಕ ಕೆ ಟಿ ಶಾಂತಕುಮಾರ್.