Sunday, 15th December 2024

ಅತಿಯಾದ ವರ್ತನೆ ಖಂಡಿಸಿ ಕಲಾಪದಿಂದ ದೂರ ಉಳಿದ ವಕೀಲರು

ಚಿಕ್ಕನಾಯಕನಹಳ್ಳಿ: ಸರಕಾರಿ ಸಹಾಯಕ ಅಭಿಯೋಜಕರು ಅತಿಯಾಗಿ ವರ್ತಿಸಿ ನ್ಯಾಯಪೀಠಕ್ಕೆ ಅಗೌರವ ತೋರಿಸಿದ್ದಾರೆಂದು ವಕೀಲರು ಬುಧವಾರ ಕೋರ್ಟ್ ಕಲಾಪದಲ್ಲಿ ಭಾಗವಹಿಸದೆ ಹೊರಗುಳಿದು ಪ್ರತಿಭಟಿಸಿದರು.

ಇದೇ ೩೦ ರಂದು ಬೆಳಗ್ಗೆ ಪ್ರಕರಣಕ್ಕೆ ಸಂಬ0ಧಿಸಿದ0ತೆ ಕಾರ್ಯಕಲಾಪಗಳು ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರ ಬಗ್ಗೆ ತೆರೆದ ನ್ಯಾಯಾಲಯದಲ್ಲಿ ನ್ಯಾಯ ಪೀಠಕ್ಕೆ ಅಗೌರವ ತೋರುವಂತಹ ಮಾತುಗಳನ್ನು ಸರಕಾರಿ ಸಹಾಯಕ ಅಭಿಯೋಜಕರು ಆಡಿದ್ದಾರೆ.

ಈ ಸಂಬ0ಧ ವಕೀಲರ ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಶಂಕರಲಿ೦ಗಪ್ಪನವರ ನೇತೃತ್ವದಲ್ಲಿ ಮಂಗಳವಾರ ತುರ್ತು ಸಭೆ ನಡೆಸಿದ ವಕೀಲರು ಈ ಪ್ರಕರಣ ಕುರಿತು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ಮತ್ತು ಡೈರೆಕ್ಟರ್ ಆಫ್ ಪ್ರಾಸಿಕ್ಯೂಷನ್ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಲು ನಿರ್ಧರಿಸಲಾಯಿತು.

ಈ ಘಟನೆಯಿಂದ ಸಾರ್ವಜನಿಕರಲ್ಲಿ ನ್ಯಾಯ ಪೀಠದ ಬಗ್ಗೆ ತಪ್ಪು ಅಭಿಪ್ರಾಯ ಮೂಡುವ ಸಂದರ್ಭವಿರುತ್ತದೆ. ಸದರಿ ಘಟನೆ ಮರು ಕಳಿಸದಂತೆ ನ್ಯಾಯಾಲಯದ ಕಾರ್ಯಕಲಾಪಗಳು ನಡೆಯಲು ಸೂಕ್ತ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಶಂಕರಲಿ೦ಗಪ್ಪ, ಕಾರ್ಯದರ್ಶಿ ರವೀಂದ್ರ, ಉಪಾಧ್ಯಕ್ಷ ಶಶಿಕುಮಾರ್, ಚಿಕ್ಕಣ್ಣ, ಎಂ.ಬಿ.ನಾಗರಾಜ್, ಆದರ್ಶ, ಲೋಕೇಶ್ವರ, ಮನು, ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿ ದ್ದರು.