Friday, 13th December 2024

ಮಾಧವ್ ಗೋವಿಂದ್ ವೈದ್ಯ ಅಂತ್ಯಕ್ರಿಯೆ

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾರವಾದಿ ಮಾಧವ್ ಗೋವಿಂದ್ ವೈದ್ಯ ಅವರ ಅಂತಿಮ ಕ್ರಿಯೆ ಮಹಾರಾಷ್ಟ್ರದ ನಾಗಪುರ ಚಿತಾಗಾರದಲ್ಲಿ ಭಾನುವಾರ ನಡೆಸಲಾಯಿತು.

ಆರ್‌ಎಸ್‌ಎಸ್‌ನ ಮೊದಲ ವಕ್ತಾರ ಮಾಧವ್‌ ವೈದ್ಯ (97) ಅಲ್ಪಕಾಲದ ಅನಾರೋಗ್ಯದಿಂದಾಗಿ ಶನಿವಾರ ನಾಗಪುರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು.

ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌, ಮಹಾರಾಷ್ಟ್ರದ ಗೃಹ ಸಚಿವ ಅನಿಲ್‌ ದೇಶ್ ‌ಮುಖ್‌ ಮತ್ತಿತರರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಅಂತ್ಯಸಂಸ್ಕಾರಕ್ಕೆ ಮೊದಲು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಮಾಧವ್‌ ಅವರ ಮನೆಗೂ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಎಂ.ಜಿ.ವೈದ್ಯ ಅವರು ಸಂಘದ ಸಿದ್ಧಾಂತಕ್ಕೆ ಅನುಗುಣವಾಗಿ ಬದುಕಿದವರು. ಅವರು ಆರ್‌ಎಸ್‌ಎಸ್‌ನ ವಿಶ್ವಕೋಶ. ನಾವು ಒಬ್ಬ ಪೋಷಕನನ್ನು ಕಳೆದುಕೊಂಡಿದ್ದೇವೆ’ ಎಂದರು.

ಡಿ.31 ರಂದು ಮಾಧವ್‌ ವೈದ್ಯರ ನೆನಪಿನಲ್ಲಿ ರೆಶಿಂಭಾಗಿನ ಡಾ.ಹೆಡ್ಗೆವಾರ್ ಸ್ಮೃತಿ ಮಂದಿರದಲ್ಲಿ ಸಭೆ ನಡೆಯಲಿದೆ.