Thursday, 12th December 2024

ಮರಡೋನಾ: ಹೇಗೆ ಮರೆಯೋಣ ?

ಜನ್ಮದಿನ: 30 ಅಕ್ಟೋಬರ್, 1960
ಸ್ಥಳ: ಲಾನಸ್, ಬ್ಯೂನಸ್ ಐರಿಸ್
ಪತ್ನಿ: ಕ್ಲಾಡಿಯಾ ವಿಲ್ಲಫನೆ
ಮಕ್ಕಳು: 05

ಬ್ಯೂನಸ್ ಐರಿಸ್: ಫುಟ್ಬಾಲ್ ವಿಶ್ವಕಪ್ ವಿಜೇತ ನಾಯಕ, ಅರ್ಜೆಂಟೀನಾದ ದಂತಕತೆ ಡಿಯಾಗೊ ಮರಡೋನಾ
ಹೃದಯಾಘಾತದಿಂದ ನಿಧನರಾಗಿದ್ದು, ಅವರಿಗೆ 60 ವರ್ಷ ವಯಸ್ಸಾಗಿತ್ತು. ಅವರಿಗೆ ಹದಿನೈದು ದಿನದ ಹಿಂದಷ್ಟೇ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದಕ್ಕಾಗಿ ಶಸ್ತ್ರಚಿಕಿತ್ಸೆ ನಡೆದಿತ್ತು. ಅರ್ಜೆಂಟೀನಾ, ಬೊಕಾ ಜೂನಿಯರ‍್ಸ್‌, ನಪೋಲಿ ಮತ್ತು ಬಾರ್ಸಿಲೋನಾ ಮತ್ತಿತ್ತರ ತಂಡಗಳಿಗೆ ಆಡಿ, ವಿಶ್ವದೆಲ್ಲಡೆ ಅಭಿಮಾನಿಗಳನ್ನು ಸಂಪಾದಿಸಿದ್ದರು. ಡ್ರಗ್ಸ್‌ ಮತ್ತು ಆಲ್ಕೋಹಾಲ್ ನ ವ್ಯಸನಿಯಾಗಿದ್ದ ಅವರು, ವೃತ್ತಿ ಜೀವನವು ಹಲವು ವಿವಾದಗಳಿಂದ ಕೂಡಿತ್ತು.

ಮಹತ್ವದ ಪಂದ್ಯದಲ್ಲಿ ತಾವು ಗಳಿಸಿದ ಗೋಲೊಂದನ್ನು ಬಣ್ಣಿಸಲು ಮರಡೋನಾ ಬಳಸಿದ ನುಡಿಗಟ್ಟಿದು. ಆದರೆ ಈ ಗೋಲಿನ ಅಸಲೀಯತ್ತು ಮುಂದೆ ಗೊತ್ತಾಗುತ್ತಿದ್ದಂತೆ ಅದು ಭಾರಿ ವಿವಾದಕ್ಕೆ ಕಾರಣಯಿತು. ಮರಡೋನಾ ಅವರೂ ಟೀಕೆಗೆ ಗುರಿಯಾದರು. ಏಕೆಂದರೆ ಈ ಗೋಲು ಮರಡೋನಾ ಕೈಚಳದ ಫಲವಾಗಿತ್ತು.

ಇಷ್ಟಕ್ಕೂ ಆಗಿದ್ದೇನು?: ಅದು 1986 ರ ವಿಶ್ವಕಪ್ ಫುಟ್ಬಾಲ್ ಸಮಯ. ಜೂನ್ 22 ರಂದು ಮೆಕ್ಸಿಕೋದ ಅಜ್ ಟೆಕ್ ಸ್ಟೇಡಿಯಂ ನಲ್ಲಿ ಅರ್ಜೆಂಟೀನಾ-ಇಂಗ್ಲೆಂಡ್ ನಡುವೆ ಪಂದ್ಯ ನಡೆಯುತ್ತಿತ್ತು. ಪಂದ್ಯದ ಮೊದಲಾರ್ಧದಲ್ಲಿ 0-0 ಸ್ಕೋರ್ ಆಗಿತ್ತು. ಎರಡನೇ ಅವಧಿಯಲ್ಲಿ ಮರಡೋನಾ ಬಿರುಸಿನ ಆಟಕ್ಕೆ ಮುಂದಾದರು. ಆರನೇ ನಿಮಿಷದಲ್ಲಿ ಎರಡೂ ತಂಡದ ಆಟಗಾರರ ಮುಖಾ ಮುಖಿ ನಡುವೆ ಚೆಂಡು ಇಂಗ್ಲೆಂಡ್ ಗೋಲ್‌ಕೀಪರ್ ಬಳಿ ಹೋಯಿತು. ಗೋಲಿಯೊಂದಿಗೆ ಮರಡೋನಾ ಸೆಣಸಾಟಕ್ಕಿಳಿದರು. ಕುಳ್ಳರಾಗಿದ್ದ ಕಾರಣ ಸ್ವಲ್ಪ ಕಷ್ಟವಾಗಿತ್ತು. ಗೋಲ್ ಕೀಪರ್ ಶಿಲ್ಟನ್ ಬಲಗೈಯಿಂದ ಮುಂದಕ್ಕೆ ಬಾಗಿದರು. ಆದರೆ ಮರಡೋನಾ ಎಡಗೈಯನ್ನು ಮುಂಚಾಚಿದರು. ಚೆಂಡು ಅವರ ಕೈಗೆ ತಾಗಿತು. ಅನಂತರ ಹೆಡ್ ಮಾಡಿ ಗೋಲುಪೆಟ್ಟಿಗೆಯೊಳಗೆ ಸೇರಿಸಿದರು. ಈ ಹಂತದಲ್ಲಿ ಮರಡೋನಾ ಸಂತಸದಿಂದ ಕುಣಿದಾಡಿದರು. ಲೆನ್ಸ್ ಮನ್ ದೃಢಪಡಿಸಿದಾಗ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಟ್ಯುನೀಸಿಯದ ರೆಫರಿ ಇದು ಗೋಲೆಂದು ತೀರ್ಪಿತ್ತರಾರೂ ಇಂಗ್ಲೆಂಡ್ ಆಟಗಾರರು ಪ್ರತಿಭಟಿಸಿದಾ ಎರಡನೇ ಲೆನ್ಸ್‌ ಮನ್ ಅಭಿಪ್ರಾಯ ಪಡೆದರು. ಅವರು ಕೂಡ ದೃಢಪಡಿಸಿದರು. ಇದಾದ ಬಳಿಕ ಮರಡೋನಾ ಮತ್ತೊಂದು ಗೋಲು ಹೊಡೆದರು.

ಅಂತಿಮವಾಗಿ 2-1 ರಿಂದ ಅರ್ಜೆಂಟೀನಾ ಗೆದ್ದಿತು. ಆದರೆ ಮೆಕ್ಸಿಕೋದ ಛಾಯಾಗ್ರಾಹಕರೊಬ್ಬರು ಈ ಕ್ಷಣವನ್ನು ತಮ್ಮ
ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಮರಡೋನಾ ಅವರು ಚೆಂಡನ್ನು ಕೈಯಿಂದ ಮುಟ್ಟಿದ ದೃಶ್ಯ ಅದರಲ್ಲಿ ಸ್ಪಷ್ಟವಾಗಿ
ಗೋಚರಿಸುತ್ತಿತ್ತು. ಆದರೆ ಚೆಂಡು ಸರಿಯಾಗಿ ಕಾಣಿಸಲಿಲ್ಲ ಹಾಗೂ ವಿಡಿಯೊ ಅಸಿಸ್ಟೆಂಟ್ ರೆಫರಿ ಸೌಲಭ್ಯ ಇರಲಿಲ್ಲವಾಗಿ ಆಗ ಗೊತ್ತಾಗಲಿಲ್ಲ. ‘ಈ ಗೋಲನ್ನು ಒಂದಷ್ಟು ಕೈ ಹಾಗೂ ಒಂದಷ್ಟು ದೇವರ ಕೈ’ ನೆರವಿನೊಂದಿಗೆ ಗಳಿಸಿದೆ ಎಂದು ಪಂದ್ಯದ ಬಳಿಕ ಮರಡೋನಾ ಹೇಳಿದ್ದರು.

ತಾನು ಕೈಯಿಂದ ಗಳಿಸಿದ ಗೋಲಿದು ಎಂದು ಮುಂದೆ ಅನೇಕ ಸಂದರ್ಭಗಳಲ್ಲಿ ಅವರು ಒಪ್ಪಿಕೊಂಡಿದ್ದರು. ತಪ್ಪನ್ನು
ಸರಿಪಡಿಸುವ ಅವಕಾಶ ಇರುವುದಾದರೆ ಇದನ್ನು ಸರಿಪಡಿಸಬಹುದು ಎಂದೂ ಹೇಳಿದ್ದರು. ಆದರೆ ಒಟ್ಟಾರೆಯಾಗಿ ಈ ಪಂದ್ಯದ ಮೊದಲ ಗೋಲು ಹ್ಯಾಂಡ್ ಆಫ್ ಗಾಡ್ ಎಂದೂ ಎರಡನೇ ಗೋಲು ಶತಮಾನದ ಗೋಲು ಎಂದೇ ಪ್ರಸಿದ್ಧಿ ಪಡೆಯಿತು.
ವಾಸ್ತವವಾಗಿ ಹ್ಯಾಂಡ್ ಆಫ್ ಗಾಡ್ ಗೋಲಿಗೆ ಮರಡೋನಾಗೆ ಯೆಲ್ಲೋ ಕಾರ್ಡ್ ನೀಡಬೇಕಿತ್ತು ಎಂದೂ ಅಭಿಪ್ರಾಯ ಕೇಳಿಬಂದಿದ್ದವು.

ಎಂಥ ನೋವಿನ ಸುದ್ದಿ. ನನ್ನ ಗೆಳೆಯನನ್ನು ನಾನು ಕಳೆದುಕೊಂಡೆ. ಜಗತ್ತು ಕ್ರೀಡಾ ದಿಗ್ಗಜನನ್ನು ಕಳೆದುಕೊಂಡಿತು. ಒಂದು ದಿನ ನಾನೂ ಕೂಡ ನನ್ನ ಗೆಳೆಯನ ಜತೆ ಆಕಾಶದಲ್ಲಿ ಫುಟ್ಬಾಲ್ ಆಟವಾಡುವುದನ್ನು ಎದುರು ನೋಡುತ್ತಿದ್ದೇನೆ. ಅವರ ಕುಟುಂಬ, ಅಭಿಮಾನಿಗಳಿಗೆ ಈ ನೋವು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ.
– ಪೀಲೆ ಬ್ರೆಜಿಲ್ ಫುಟ್ಭಾಲ್ ದಿಗ್ಗಜ

ದಾಖಲೆ ವೀರ
*ಅರ್ಜೆಂಟಿನಾ ಪರ 91 ಪಂದ್ಯಗಳಲ್ಲಿ 34 ಗೋಲ್
*ಕ್ಲಬ್‌ಗಳ ಪರ 490 ಪಂದ್ಯಗಳಲ್ಲಿ 259 ಗೋಲ್
*ಒಟ್ಟು ನಾಲ್ಕು ವಿಶ್ವಕಪ್, 21 ಪಂದ್ಯಗಳಲ್ಲಿ ಆಟವಾಡಿದ ದಾಖಲೆ
*ವಿಶ್ವಕಪ್‌ನಲ್ಲಿ ನಾಯಕನಾಗಿ ಅತಿಹೆಚ್ಚು (16)ಪಂದ್ಯವಾಡಿದ ದಾಖಲೆ
*1977ರಲ್ಲಿ 16ನೇ ವಯಸ್ಸಿನಲ್ಲಿ ಹಂಗೇರಿ ವಿರುದ್ಧ ಮೊದಲ ಪಂದ್ಯ
*ವಿಶ್ವಕಪ್‌ನಲ್ಲಿ ಹೆಚ್ಚು ಫೌಲ್ (53)ಮಾಡಿದ ದಾಖಲೆಯೂ ಇವರದ್ದೇ
*1986ರ ವಿಶ್ವಕಪ್‌ನ ಗೋಲ್ಡನ್ ಬಾಲ್ ಪ್ರಶಸ್ತಿ ವಿಜೇತ.