ಮಧ್ಯಪ್ರದೇಶ: ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಸಚಿವರೊಬ್ಬರು ಖುದ್ದು ಶೌಚಾಲಯ ಸ್ವಚ್ಛಗೊಳಿಸಿ ಸರಳತೆ ಮೆರೆಯುವುದರ ಜೊತೆಗೆ ಸ್ವಚ್ಛತೆಯ ಸಂದೇಶ ಸಾರಿದ್ದಾರೆ.
ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಬಾಲಕಿ ನೀಡಿದ ದೂರಿನ ಮೇರೆಗೆ ಸ್ವತಃ ಶಾಲೆಗೆ ಬಂದು ಶೌಚಾಲಯ ಸ್ವಚ್ಛಗೊಳಿಸಿ ದ್ದಾರೆ. ಶೌಚಾಲಯ ಸ್ವಚ್ಛಗೊಳಿಸಿವುದು ಕಂಡು ಬಂದಿದ್ದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛ ಗೊಳಿಸುವುದು ಮತ್ತು ರಸ್ತೆಯನ್ನು ಗುಡಿಸಿದ್ದರು.
ಪ್ರದ್ಯುಮನ್ ಸಿಂಗ್ ತೋಮರ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ತಪಾಸಣೆಗೆ ಬಂದಿದ್ದರು. ಇಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸುವಾಗ ಶಾಲೆಯ ಶೌಚಾಲಯ ತುಂಬಾ ಕೊಳಕಾಗಿದೆ ಎಂದು ಸಚಿವರಿಗೆ ತಿಳಿಸಿ ಇದರಿಂದ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಿದೆ ಎಂದು ದೂರಿದರು.
ಇಂಧನ ಸಚಿವರು ನೇರವಾಗಿ ಶೌಚಾಲಯಕ್ಕೆ ತೆರಳಿ ಸಮಯ ವ್ಯರ್ಥ ಮಾಡದೆ ತಮ್ಮ ಕೈಯಿಂದಲೇ ಶೌಚಾಲಯ ಸ್ವಚ್ಛಗೊಳಿಸಲು ಆರಂಭಿಸಿದರು.
ಶಾಲೆಯಲ್ಲಿನ ಶೌಚಾಲಯಗಳು ಸ್ವಚ್ಛವಾಗಿಲ್ಲ, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ವಿದ್ಯಾರ್ಥಿನಿಯೊಬ್ಬರು ನನಗೆ ಹೇಳಿದರು. 30 ದಿನಗಳಿಂದ ಸ್ವಚ್ಛತಾ ಪ್ರತಿಜ್ಞೆ ಮಾಡಿದ್ದು, ಪ್ರತಿ ದಿನ ಯಾವುದಾದರೂ ಸಂಸ್ಥೆಗೆ ತೆರಳಿ ಸ್ವಚ್ಛತೆ ಮಾಡುತ್ತೇನೆ ಎಂದು ತಿಳಿಸಿದರು.