Sunday, 8th September 2024

ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಮಗನಿಗೆ ತಾಯಿ ಸಹಾಯ..!

ಕೋಲ್ಕತ್ತ: ಶಿಕ್ಷಿಸಿ ಸರಿ ದಾರಿಗೆ ತರಬೇಕಾಗಿದ್ದ ಅಮ್ಮ ತಲೆಹಿಡುಕ ಕೆಲಸ ಮಾಡಿ, ಈಗ ಆ ತಾಯಿ-ಮಗ ಇಬ್ಬರೂ ಬಂಧಿತ ರಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಮಗ ಅತ್ಯಾಚಾರ ಮಾಡಲು ಅವನ ತಾಯಿಯೇ ಸಹಾಯ ಮಾಡಿದ್ದಾಳೆ.

ಕೋಲ್ಕತ್ತದ ಹರಿದೇವ್​​ಪುರ ನಿವಾಸಿಗಳಾದವರ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆ ಯಡಿ ಪ್ರಕರಣ ದಾಖಲಿಸಿದ್ದಾರೆ.

ಈ ಮಹಿಳೆ ಬ್ಯುಟಿಷಿಯನ್​ ಆಗಿದ್ದಳು. ಹರೆಯಕ್ಕೆ ಕಾಲಿಡುತ್ತಿರುವ ಹುಡುಗಿ ಬ್ಯೂಟಿಷಿ ಯನ್ ಕೋರ್ಸ್ ಮಾಡಲು ಮಹಿಳೆ ಬಳಿ ಬರುತ್ತಿದ್ದಳು. ಅಕ್ಟೋಬರ್​ನಲ್ಲಿ ಮಹಿಳೆ ಆ ಹುಡುಗಿಯನ್ನು ತಮ್ಮ ಮನೆಗೆ ಆಹ್ವಾನಿಸಿದಳು. ಪರಿಚಿತರೇ ಅಲ್ಲವಾ ಎಂದು ಹುಡುಗಿ ಯೂ ಹೋಗಿದ್ದಾಳೆ.

ಈ ಬಾಲಕಿ ಹೋದ ತಕ್ಷಣ ಆಕೆಗೆ ತಿನ್ನಲೆಂದು ಮಹಿಳೆ ಲೇಸ್​ ಕೊಟ್ಟಳು. ಅದು ಬರೀ ಲೇಸ್​ ಆಗಿರಲಿಲ್ಲ. ಮಾದಕ ದ್ರವ್ಯ ಸವರಿದ ತಿನಿಸಾಗಿತ್ತು. ಅದನ್ನು ತಿನ್ನುತ್ತಿದ್ದಂತೆ ಹುಡುಗಿ ಪ್ರಜ್ಞೆ ತಪ್ಪಿ ಬಿದ್ದಳು. ಮೈಮೇಲೆ ಎಚ್ಚರ ಇಲ್ಲದೆ ಬಿದ್ದ ಬಾಲಕಿ ಮೇಲೆ ಆ ಧೂರ್ತ ಮಹಿಳೆಯ ಕೆಟ್ಟ ಮಗ ಹಲವು ಬಾರಿ ರೇಪ್​ ಮಾಡಿದ್ದಾನೆ.

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಅರೆಬರೆ ಎಚ್ಚರವಾದಾಗ ತನ್ನ ಮೇಲೆ ಅತ್ಯಾಚಾರ ಆಗಿದ್ದು ಗೊತ್ತಾಗಿದೆ. ಅಲ್ಲಿಂದ ಮೌನ ವಾಗಿಯೇ ಮನೆಗೆ ಹೋಗಿದ್ದಳು. ಪೊಲೀಸರಿಗೆ ಹೇಳಲು ಭಯವಾಗಿಯೇ ಸುಮ್ಮನಿದ್ದಳು. ಕೊನೆಗೂ ಸ್ನೇಹಿತರು ಧೈರ್ಯ ತುಂಬಿದ ಮೇಲೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ. ಅಮ್ಮ-ಮಗನನ್ನು ಅರೆಸ್ಟ್ ಮಾಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 

Read E-Paper click here

error: Content is protected !!