Friday, 22nd November 2024

MLA Pradeep Eshwar: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಹರಿಹಾಯ್ದ ನಗರಸಭೆ ನೂತನ ಅಧ್ಯಕ್ಷ -ಉಪಾಧ್ಯಕ್ಷ

ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧತೆ ನಡೆಸಲಾಗಿದೆ ಮಾಜಿ ಶಾಸಕ ಎಂ.ಶಿವಾನಂದ್ ಹೇಳಿಕೆ

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ನಗರ ಸಭೆಯ ಸೋಲಿನ ನಂತರ ಹತಾಶೆಯಲ್ಲಿ ಸಂಸದರು ಮತ್ತು ಅವರ ತಂದೆಯ ಬಗ್ಗೆ ಮನಬಂದಂತೆ ಮಾತನಾಡಿರುವುದು ಶಾಸಕ ಸ್ಥಾನಕ್ಕೆ ಗೌರವ ತರುವುದಿಲ್ಲ. ಮನುಷ್ಯನಿಗೆ ನಾಲಿಗೆ ಮತ್ತು ಮೆಡುಳಿನ ಸಂಪರ್ಕ ಕಡಿತಗೊಂಡಾಗ ಮಾತ್ರ ಇಂತಹ ಅಸಂಸದೀಯ ಪದ ಬಳಕೆ ಬಹಿರಂಗವಾಗಿ ಆಡಲು ಸಾಧ್ಯ.ಈ ವಿಚಾರದಲ್ಲಿ ಶಾಸಕರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ನಗರಸಭೆ ನೂತನ ಉಪಾಧ್ಯಕ್ಷ ಜೆ.ನಾಗರಾಜು ಹೇಳಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಬಿಜೆಪಿಗೆ ಅಧಿಕಾರ ಸಹಜ ನ್ಯಾಯ?
ಚಿಕ್ಕಬಳ್ಳಾಪುರ ನಗರಾಡಳಿತ ಬಿಜೆಪಿಯ ಸಂಘಟನಾ ಶಕ್ತಿಗೆ ಒಲಿದಿರುವುದು ಸತ್ಯ.ಇದು ನಮ್ಮ ನಾಯಕರ ಶಕ್ತಿ ಮತ್ತು ತಾಕತ್ತು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತ ಪಡೆದವರು ಅಧಿಕಾರಕ್ಕೇರಿವುದು ಸಹಜ ನ್ಯಾಯ, ನಾವು ಕೂಡ ಇದೇ ಸಹಜ ನ್ಯಾಯದಲ್ಲಿ ಅಧಿಕಾರಕ್ಕೆ ಏರಿದ್ದೇವೆ.ನಮಗಿರುವ ೫ ಅನುಮಾನಗಳನ್ನು ಪ್ರಶ್ನೆಗಳ ರೂಪದಲ್ಲಿ ಶಾಸಕರಿಗೆ ಕೇಳುತ್ತಿದ್ದೇವೆ. ತಾಕತ್ತಿದ್ದರೆ ಉತ್ತರ ನೀಡಲಿ ಇಲ್ಲವೇ ಅಭಿವೃದ್ಧಿಯ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: MLA Pradeep Eshwar: ನಮ್ಮ ನಾಯಕರ ವಿರುದ್ಧ ಹಗುರವಾಗಿ ಮಾತನಾಡಿದರೆ ತಕ್ಕಶಾಸ್ತಿಯ ಎಚ್ಚರಿಕೆ ರವಾನೆ

ಶಾಸಕರಿಗೆ ತಾಕೀತು?
ಸುಧಾಕರ್ ಅಲ್ಲಾ ಅವರ ಅಪ್ಪನಿಂದಲೂ ನನ್ನ ಕೂದಲು ಅಲುಗಾಡಿದಲು ಆಗುವುದಿಲ್ಲ ಎಂದು ಮಾತನಾಡಿ ದ್ದೀರಿ? ಯಾಕೆ ಸ್ವಾಮಿ ಸವಿತಾ ಸಮಾಜದವರು ನಿಮಗೆ ಬಹಿಷ್ಕಾರ ಹಾಕಿದ್ದಾರಾ? ಸಂಸದರ ಅನುಭವ ಸೇವೆ, ಅವರ ತಂದೆಯವರ ಅನುಭವ ಸೇವೆಯ ಬಗ್ಗೆ ಕನಿಷ್ಟ ಪರಿಜ್ಞಾನ ಇದಿದ್ದರೆ ಹೀಗೆ ಮಾತನಾಡುತ್ತಿರಲಿಲ್ಲ.ಇವರಿಬ್ಬರಿಗೂ ಅವರದೇ ಆದ ಸಾಕಷ್ಟು ಕೆಲಸಗಳಿವೆ.ನೀವು ಬಿಟ್ಟಿಯಾಗಿ ಇದ್ದರೆ ಕ್ಷೇತ್ರದಲ್ಲಿ ತುಂಬಾ ಜನ ಕೂದಲು ಬಿಟ್ಟುಕೊಡು ಇದ್ದಾರೆ.ಅವರದೆಲ್ಲಾ ನೀವೇ ಅಲುಗಾಡಿಸಿ, ಇಲ್ಲವೆ ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತಾಡಿ ಎಂದು ತಾಕೀತು ಮಾಡಿದರು.

ಶ್ವೇತಪತ್ರ ಹೊರಡಿಸಿ?
ಒಂದುವರೆ ವರ್ಷದ ಆಡಳಿತದಲ್ಲಿ ನಿಮ್ಮ ಅಭಿವೃದ್ಧಿ ಸಾಧನೆ ಏನು ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಿ?ನೀವು ಮಾಡಿರುವ ಅಭಿವೃದ್ಧಿ ಬಗ್ಗೆ ತಾಕತ್ತಿದ್ದರೆ ಬಹಿರಂಗ ಚೆರ್ಚೆಗೆ ಬನ್ನಿ? ಮಕ್ಕಳಿಗೆ ಹೆಂಗಸರಿಗೆ ಬಟ್ಟೆ ಕೊಡಿಸುವುದು ಅಭಿವೃದ್ದಿ ಅಲ್ಲ. ದಾನ ಎಂಬ ಪದಕ್ಕಿರುವ ಅರ್ಥ ನಿಮ್ಮಂಥಹವರಿAದ ಹಾಳಾಗುತ್ತದೆ.ಬಡಮಕ್ಕಳಿಗೆ ಕೊಟ್ಟ ಬಟ್ಟೆಯ ಬಗ್ಗೆ ಸದನದಲ್ಲಿ ಕೂಡ ಹೇಳಿಕೊಳ್ಳುವುದು ಬಡಮಕ್ಕಳಿಗೆ ಮಾಡಿದ ಅಪಮಾನ. ಇನ್ನಾದರೂ ಬಡವರನ್ನು ಹಂಗಿಸೋದನ್ನು ಬಿಟ್ಟಿ ಅಭಿವೃದ್ಧಿಯ ಕಡೆ ಗಮನ ನೀಡಿ ಎಂದರು.

ಹಳೇ ರೆಕಾರ್ಡ್ ನಿಲ್ಲಿಸಿ
ನೀವು ಶಾಸಕರಾದ ಮೇಲೆ ಕ್ಷೇತ್ರದಲ್ಲಿ ಎಷ್ಟು ಚುನಾವಣೆ ಗೆದ್ದಿದ್ದೀರಿ ಎಂಬುದನ್ನು ಜನತೆಗೆ ಹೇಳಿ? ಲೋಕಸಭೆ ಚುನಾವಣೆಯಲ್ಲಿ ಒಂದು ಮತ ಹೆಚ್ಚಿಗೆ ಪಡೆದರೂ ರಾಜೀನಾಮೆ ಕೊಡುವ ಮಾತಾಡಿದ್ದು ನೆನಪಿದೆಯಾ? ನಮ್ಮ ನಾಯಕರು ಒಂದಲ್ಲ ೨೦ಸಾವಿರ ಮತಗಳ ಲೀಡ್ ಪಡೆದರೂ ರಾಜೀನಾಮೆ ಕೊಡದೆ ನಾಳಿಗೆಗೆ ಮೂಳೆಯಿಲ್ಲ ಎಂದು ತೋರಿಸಿದ್ದೀರಿ? ಅಲ್ಲಸ್ವಾಮಿ ಅನಾಥ ಹುಡುಗ ಅನಾಥ ಹುಡುಗ ಅಂತೀರಲ್ಲ? ಆ ಪದದ ಅರ್ಥಗೊತ್ತಾ ನಿಮಗೆ?ಇನ್ನೆಷ್ಟು ದಿನ ಹಳೆ ಗ್ರಾಮೋಪೋನಿನ ರೆಕಾರ್ಡ್ ಹಾಕುತ್ತೀರಿ?ನಿಮ್ಮದೇ ಪಕ್ಷದ ಸದಸ್ಯರನ್ನು ಉಳಿಸಿ ಕೊಳ್ಳಲಾಗದ ನೀವು, ಹೀನಾಯ ಸೋಲಿನ ಮೂಲಕ ಪಾಪ ನಿಮ್ಮ ನಂಬಿದ ಸದಸ್ಯರನ್ನು ಬಲಿಪಶು ಮಾಡಿದ್ದು ನ್ಯಾಯವೇ ಎಂದು ಪ್ರಶ್ನಿಸಿದರು.

ಮನೆಗೆದ್ದು ಮಾರು ಗೆಲ್ಲಿ
ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ ಇರಲಿ ನಿಮ್ಮದೇ ಸಮುದಾಯಕ್ಕೆ ಏನು ಕೊಡುಗೆ ನೀಡಿದ್ದೀರಿ? ನಿಮ್ಮದೇ ಸಮು ದಾಯದ ಕಟ್ಟಡಕ್ಕೆ ಖಾತೆ ಮಾಡುಸುವ ತಾಕತ್ತು ನಿಮಗಿದೆಯಾ? ನಿಮ್ಮ ಸಮುದಾಯಕ್ಕೆ ಒಂದು ಹಾಸ್ಟೆಲ್ ಕಟ್ಟಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡುವ ದಮ್ಮು ತಾಕತ್ತು ನಿಮಗಿದೆಯಾ? ಮೊದಲು ಮನೆ ಗೆದ್ದು ನಂತರ ಊರು ಗೆಲ್ಲಬೇಕು ಎಂಬ ಮಾತಿದೆ.ಇವೆಲ್ಲಾ ಇರಲಿ ಸದನದಲ್ಲಿ ಸಭಾಧ್ಯಕ್ಷರಿಂದಲೇ ಕಬ್ಬಿಣ ಹಿಡಿಸಿಕೊಳ್ಳುವ ಮಟ್ಟಕ್ಕೆ ನಿಮ್ಮ ವರ್ತನೆ ಇರುವುದು ಕ್ಷೇತ್ರಕ್ಕೆ ಮಾಡಿದ ಅಪಮಾನ ಎಂದು ಹೇಳಿದರು.

ಕೊನೆಯದಾಗಿ ನಿಮಗೆ ದಮ್ಮು ತಾಕತ್ ಖಲೇಜಾ ಇದ್ರೆ ಬಹಿರಂಗ ಚರ್ಚೆ ಮಾಡೋಣಾ ಬನ್ನಿ? ನಿಮ್ಮ ಅಧಿಕಾರ ದಲ್ಲಿ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?  ನಮ್ಮ ನಾಯಕನ ಅಧಿಕಾರದಲ್ಲಿ ನಮ್ಮ ಕೊಡುಗೆ ಏನು? ಎಂಬ ಬಗ್ಗೆ ಚರ್ಚೆ ಮಾಡೋಣ ? ಅಷ್ಟೇ ಅಲ್ಲ ನಿಮ್ಮ ತಂದೆಯ ಆತ್ಮಹತ್ಯೆಗೆ ಕಾರಣವಾದ ಅಂಶಗಳ ಬಗ್ಗೆಯೂ ಚರ್ಚೆ ಮಾಡೋಣಾ,ಅನಾಥ ಹುಡುಗ ಎಂಬುವುದರ ಬಗ್ಗೆಯೂ ಚರ್ಚೆ ಮಾಡೋಣ ಎಂದು ಪಂಥಾಹ್ವಾನ ನೀಡಿದರು.

*

ನೂತನ ಶಾಸಕರಿಗೆ ವಿಧಾನ ಸಭಾಧ್ಯಕ್ಷರ ಉಸ್ತುವಾರಿಯಲ್ಲಿ ಸಾರ್ವಜನಿಕ ಜೀವನದಲ್ಲಿ ಶಾಸಕರ ನಡಾವಳಿಗಳು ಹೇಗಿರಬೇಕು ಎಂಬ ಬಗ್ಗೆ ತರಬೇತಿ ಕೊಡುತ್ತಾರೆ. ಬಹುಶಃ ಪ್ರದೀಪ್ ಈ ತರಬೇತಿ ಪಡೆದುಕೊಂಡAತೆ ಕಾಣುವುದಿಲ್ಲ. ಈತನಿಗೆ ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕು ಎಂಬ ಬಗ್ಗೆ ಪಕ್ಷದ ಯಾವೊಬ್ಬ ಮುಖಂಡರೂ ಹೇಳಿಕೊಟ್ಟಂತೆ, ಹೇಳಿದ್ದರೂ ಕೇಳಿಸಿಕೊಂಡAತೆ ಕಾಣುವುದಿಲ್ಲ.ದೊಡ್ಡವರು ಚಿಕ್ಕವರು ಎನ್ನದೆ ನಾಲಿಗೆ ಹೋದಂತೆಲ್ಲಾ ಈತ ಮಾತನಾಡಿದರೆ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ.ಈ ಬಗ್ಗೆ ಚಿಂತನೆ ನಡೆಸಲಾಗಿದೆ.ಕ್ಷೇತ್ರದ ಅಭಿವೃದ್ಧಿಗಾಗಿ ಸಂದರೊಟ್ಟಿಗೆ ಹೊಂದಾಣಿಕೆಯಲ್ಲಿ ಹೋಗಲಿ, ಸಂಸದರೂ ಕೂಡ ಅಭಿವೃದ್ಧಿ ದೃಷ್ಟಿಯಿಂದ ಎಲ್ಲವನ್ನೂ ಮರೆತು ಸೌಹಾರ್ಧತೆ ತೋರಲಿ ಎಂದು ಹೇಳಿದ್ದೇವೆ.ಸರಿ ಹೋದರೆ ಸರಿ.ಅದು ಬಿಟ್ಟು ವಿನಾಶಕಾಲೇ ವಿಪರೀಪ ಬುದ್ದಿ ಎಂದರೆ ಏನೂ ಮಾಡಲಾಗದು.
ಎಂ.ಶಿವಾನ೦ದ್ ಮಾಜಿ ಶಾಸಕರು ಚಿಕ್ಕಬಳ್ಳಾಪುರ.

ಸುದ್ದಿಗೋಷ್ಟಿಯಲ್ಲಿ ನೂತನ ನಗರಸಭಾಧ್ಯಕ್ಷ ಗಜೇಂದ್ರ, ಮಾಜಿ ನಗರಸಭಾಧ್ಯಕ್ಷರಾದ ಕೆ.ವಿ.ಮಂಜುನಾಥ್, ಮುನಿಕೃಷ್ಣ, ಕೊಂಡೇನಹಳ್ಳಿ ಮುರುಳಿ, ಸುಮಿತ್ರ, ಮಂಜುನಾಥ್, ಅರುಣ್‌ಕುಮಾರ್, ಜಿಯಾವುಲ್ಲಾ, ಸಾಗರ್, ಶ್ರೀರಾಮ್, ಲಕ್ಷ್ಮೀಪತಿ ಮತ್ತಿತರರು ಇದ್ದರು.