Monday, 25th November 2024

ಆಫ್ರಿಕನ್ ಮಹಿಳೆಗೆ ಮಂಕಿಪಾಕ್ಸ್‌: ದೆಹಲಿಯಲ್ಲಿ ಆರನೇ ಪ್ರಕರಣ

ವದೆಹಲಿ: ಆಫ್ರಿಕನ್ ಮೂಲದ 22 ವರ್ಷದ ಮಹಿಳೆಗೆ ಮಂಕಿಪಾಕ್ಸ್‌ ವೈರಸ್ ತಗುಲಿರು ವುದು ಪತ್ತೆಯಾಗಿದೆ.

ರಾಜಧಾನಿಯಲ್ಲಿ ಪತ್ತೆಯಾಗಿರುವ ಆರನೇ ಪ್ರಕರಣ ಇದಾಗಿದೆ ಎಂದು ವೈದ್ಯರು ತಿಳಿಸಿ ದ್ದಾರೆ. ಮಹಿಳೆಯನ್ನು ಆಗಸ್ಟ್ 31 ರಂದು ದೆಹಲಿ ಸರ್ಕಾರದ ಲೋಕನಾಯಕ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆಯ ಪ್ರತ್ಯೇಕ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾ ಗುತ್ತಿದೆ.

ಡಾ. ಸುರೇಶ್ ಕುಮಾರ್ ಮಾತನಾಡಿ, ಮಹಿಳೆಯು ಇತ್ತೀಚೆಗೆ ಯಾವುದೇ ಅಂತರ ರಾಷ್ಟ್ರೀಯ ಪ್ರಯಾಣ ಮಾಡಿಲ್ಲ ಎಂದು ತಿಳಿಸಿದ್ದಾರೆ. ಮಹಿಳೆ ಕಳೆದ ಜನವರಿಯಲ್ಲಿ ಭಾರತಕ್ಕೆ ಬಂದಿದ್ದರು ಮತ್ತು ಅಂದಿನಿಂದ ದ್ವಾರಕಾದಲ್ಲಿಯೇ ನೆಲೆಸಿದ್ದರು.

ಕೆಲವು ದಿನಗಳ ಹಿಂದಷ್ಟೇ ಜ್ವರ, ಗಂಟಲು ನೋವು ಮತ್ತು ಚರ್ಮದ ಮೇಲೆ ಗಾಯಗಳ ಬಗ್ಗೆ ದೂರು ನೀಡಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಪ್ರಯೋಗಾಲಯದ ವರದಿಯಲ್ಲಿ ಆಕೆಗೆ ಮಂಕಿಪಾಕ್ಸ್ ಸೋಂಕು ತಗುಲಿರುವುದು ದೃಢಪಟ್ಟಿದೆ’ ಎಂದು  ಹೇಳಿದರು.

ದೆಹಲಿಯಲ್ಲಿ ವರದಿಯಾಗಿರುವ ಎಲ್ಲಾ ಆರು ಪ್ರಕರಣಗಳಲ್ಲಿ ತಲಾ ಮೂವರು ಪುರುಷರು ಮತ್ತು ಮಹಿಳೆಯರಾಗಿದ್ದಾರೆ. ಪುರುಷ ಮತ್ತು ಸ್ತ್ರೀಲಿಂಗದ ರೋಗಿಗಳ ಸಮಾನ ಅನುಪಾತವು ಈ ರೋಗವು ಪ್ರಧಾನವಾಗಿ ಸಲಿಂಗಕಾಮಿ ಪುರುಷರಲ್ಲಿ ಕಂಡು ಬರುತ್ತದೆ ಎಂಬ ಸಾಮಾನ್ಯ ಕಲ್ಪನೆಯನ್ನು ತೊಡೆದುಹಾಕಿದೆ ಎಂದು ಆಸ್ಪತ್ರೆಯ ಐಸೋಲೇಷನ್ ವಿಭಾಗದ ವೈದ್ಯರು ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಂಕಿಪಾಕ್ಸ್ ಒಂದು ವೈರಲ್ ಸೋಂಕು ಆಗಿದ್ದು, ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಮನುಷ್ಯರಿಂದ ಇತರ ಮನುಷ್ಯರಿಗೆ ಮತ್ತು ಪರಿಸರದಿಂದ ಮನುಷ್ಯರಿಗೆ ಹರಡಬಹುದು ಎಂದಿದೆ.