Friday, 2nd June 2023

ರೈತರ, ಪಶುಪಾಲಕರ ಆರೋಗ್ಯ ಉತ್ತಮ ಸ್ಥಿತಿಯಿಲ್ಲಿದ್ದರೆ ರಾಷ್ಟ್ರವು ಸುಭದ್ರ

ತಿಪಟೂರು: ನಮ್ಮ ದೇಶದಲ್ಲಿ ಜಾನುವಾರುಗಳನ್ನು ಆರ್ಥಿಕತೆಯ ಜೊತೆಯಲ್ಲಿ ಗೋಮಾತೆ ಪೂಜೆ ಹಾಗೂ ಪಾಲನೆ ಪೋಷಣೆಯಿಂದ ಭವ್ಯ ಭಾರತ ದೇಶದ ರೈತರು ಹಾಗೂ ಜನತೆ ನೆಮ್ಮದಿಯ ಜೀವನವನ್ನು ಸಾಗಿಸಲು ಸಾಧ್ಯವಾಗಿದ್ದು, ರೈತರ ಮತ್ತು ಪಶುಪಾಲಕರ ಆರೋಗ್ಯ ಉತ್ತಮ ಸ್ಥಿತಿಯಿಲ್ಲಿದ್ದರೆ ರಾಷ್ಟ್ರವು ಸುಭದ್ರವಾಗಿರುತ್ತದೆ ಎಂದು ಕೆರಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮಿಜಿ ತಿಳಿಸಿದರು.

ರಂಗಾಪುರ ಗ್ರಾಮದಲ್ಲಿ ನಂದಿನಿ ಸಹಕಾರಿ ಸಂಘಗಳ ಒಕ್ಕೂಟ ತುಮಕೂರು ಹಾಗೂ ಜನ ಸಾಮಾನ್ಯ ಕಲ್ಯಾಣ ಟ್ರಸ್ಟ್ ಮಲ್ಲಸಂದ್ರ ಹಾಗೂ ಸಿದ್ದಗಂಗಾ ಆಸ್ಪತ್ರೆ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ನೆಡೆದ ಹಾಲು ಉತ್ಪಾದಕರಿಗೆ ಉಚಿತ ಆರೋಗ್ಯ ಶಿಬಿರ ಹಾಗೂ ಮಿಶ್ರ ಕರುತಳಿ ಶಿಬಿರದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾ ಡಿದರು.

ಇದೇ ಸಂದರ್ಭದಲ್ಲಿ ರೈತರ ಏಳಿಗೆಗಾಗಿ ನಮ್ಮ ಪೂರ್ಣ ಸಹಕಾರವಿದ್ದು, ಜನತೆ ಹಾಗೂ ಜಾನುವಾರಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳು ನಡೆದಾಗ ಜನರಿಗೆ ಬಹಳ ಸಹಕಾರಿಯಾಗುತ್ತದೆ. ಅದೇ ರೀತಿಯಲ್ಲಿ ನಮ್ಮ ದೇಶಿಯ ಗೋತಳಿಗಳ ಜಾನುವಾರುಗಳನ್ನು ಪೋಷಿಸಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದ ಆಯೋಜಕರಾದ ನಂದಿನಿ ಸಹಕಾರಿ ಸಂಘಗಳ ಒಕ್ಕೂಟ ತುಮಕೂರು ಹಾಗೂ ಸಾಮಾನ್ಯ ಕಲ್ಯಾಣ ಟ್ರಸ್ಟ್ ಹಾಗೂ ಸಿದ್ದಗಂಗಾ ಆಸ್ಪತ್ರೆಯವರನ್ನು ಅಭಿನಂದಿಸಿದರು ಮುಂದೆಯೂ ಸಹ ಇಂಥ ಕಾರ್ಯ ಕ್ರಮಗಳನ್ನು ಆಯೋಜಿಸಿದಲ್ಲಿ ನಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಶ್ರೀಗಳು ತಿಳಿಸಿದರು.

ತುಮಕೂರು ಹಾಲು ಒಕ್ಕೂಟದ ಅದ್ಯಕ್ಷ ಮಹಲಿಂಗಪ್ಪ ಮಾತನಾಡಿ ಹಾಲು ಉತ್ಪಾದಕರಿಗೆ ಸದಾ ಬೆನ್ನಲುಬಾಗಿ ಒಕ್ಕೂಟವು ಜೊತೆಯಲ್ಲಿದ್ದು, ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಉತ್ಪಾದಕರಿಗೆ ಅನುಕೂಲವನ್ನು ಮಾಡು ತ್ತಾ ಬರುತ್ತಿದ್ದೇವೆ, ಜೊತೆಯಲ್ಲಿಯೇ ಕಡಿಮೆ ದರದಲ್ಲಿ ಪಶು ಚಿಕಿತ್ಸೆಗಳು, ರೈತರಿಗೆ ಆರೋಗ್ಯ ಶಿಬಿರಗಳನ್ನು ಮಾಡುತ್ತಿದ್ದೆವೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಹಾಲು ಮಹಾ ಮಂಡಳದ ನಿರ್ಧೇಶಕ ಮಾದಿಹಳ್ಳಿ ಪ್ರಕಾಶ್ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ ನೂರೂಕ್ಕ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಒಕ್ಕೂಟ ಹಾಗೂ ಕೆಎಮ್‌ಎಫ್ ಸಂಸ್ಥೆಯಿ0ದ ಒಂದಲ್ಲ ಒಂದು ಸಹಾಯವನ್ನು ಪಡೆದು ಉತ್ತಮ ರೀತಿಯಲ್ಲಿ ಹಾಲು ಉತ್ಪಾದಕರಿಗೆ ನೆರವಾಗಿದೆ. ಸಂಸ್ಥೆಯಿ0ದ ವಿದ್ಯಾಬ್ಯಾಸಕ್ಕಾಗಿ ವಸತಿ ವ್ಯವಸ್ಥೆ, ರಾಸು ವಿಮಾ ಯೋಜನೆ, ಉತ್ಪಾದಕರ ಮರಣ ಪರಿಹಾರ ಯೋಜನೆ ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಿಗೆ ಸನ್ಮಾನ ಮಾಡಲಾಗಿದ್ದು ಕಣ್ಣು ತಪಾಸಣೆ ಮಾಡಿಸಿಕೊಂಡ ರೈತರಿಗೆ ಉಚಿತವಾಗಿ ಕನ್ನಡಕಗಳನ್ನು ನೀಡಲಾಯಿತು ಹಾಗೂ ಹೆಣ್ಣು ಜಾನುವಾರು ಕರುಗಳನ್ನು ಪೋಷಿಸುತ್ತಿರುವವರಿಗೆ ವಿಶೇಷ ಸನ್ಮಾನ ಮಾಡಿ ಗೌರವಿಸಿ ಪ್ರಶಸ್ತಿಯನ್ನು ನೀಡಲಾಯಿತು .

ಕರ‍್ಯಕ್ರಮದಲ್ಲಿ ಒಕ್ಕೂಟದ ಮಾಜಿ ನಿರ್ಧೇಶಕ ತ್ರಿಯಂಭಕ, ವ್ಯವಸ್ಥಾಪಕ ನಿರ್ಧೇಶಕ ಸುರೇಶ್, ಸಿದ್ದಗಂಗಾ ಆಸ್ವತ್ರೆ ವ್ಯವಸ್ಥಾಪಕರು ಪರಮೇಶ್, ಶೇಖರಣಾ ವಿಬಾಗದ ವ್ಯವಸ್ಥಾಪಕ ಪ್ರಸಾದ್, ಉಪವ್ಯವಸ್ಥಾಪಕ ಮಂಜುನಾಥ್‌ನಾಯಕ್, ಒಕ್ಕೂಟದ ವಿಸ್ತಾರಣಾಧಿಕಾರಿಗಳಾದ ನಾಗರಾಜು, ಶಶಿಕಲಾ, ಶ್ರೀಲಕ್ಷಿö್ಮ, ಮಲ್ಲಿಕಾರ್ಜುನ್, ಒಕ್ಕೂಟ ಹಾಗೂ ಆಸ್ವತ್ರೆಯ ಅಧಿಕಾರಿಗಳು ರಂಗಾಪುರ ಹಾಲು ಸಹಕಾರ ಸಂಘದ ಕಾರ್ಯದರ್ಶಿ ಶಂಕರಮೂರ್ತಿ, ಶ್ರೀ ಮಠದ ಗಂಗಣ್ಣ ಹಾಗೂ ತಾಲ್ಲೂಕಿನ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಹಾಗೂ ಪದಾದಿಕಾರಿಗಳು ಭಾಗವಹಿಸಿದ್ದರು.

error: Content is protected !!