Sunday, 1st December 2024

ಧಾರವಾಡದಲ್ಲಿ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಶಿಬಿರ ಆಯೋಜನೆ

ಹುಬ್ಬಳ್ಳಿ: ಯುವ ಕ್ರಿಕೆಟಿಗರಿಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ನಡೆಸುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಶಿಬಿರ ಕೆಎಸ್‌ಸಿಎ ಧಾರವಾಡ ವಲಯದಲ್ಲಿ ಆಯೋ ಜನೆಯಾಗಿದೆ.

ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ಅವಿನಾಶ ಪೋತದಾರ ಮಾತನಾಡಿ, ’19 ವರ್ಷದ ಒಳಗಿನವರ ಬಾಲಕರ ತಂಡಕ್ಕೆ ಮೇ 9ರಿಂದ ಜೂನ್‌ 2ರ ತನಕ ಬೆಳಗಾವಿಯಲ್ಲಿ ಹಾಗೂ ಬಾಲಕಿಯರ ತಂಡಕ್ಕೆ ಮೇ 16ರಿಂದ ಜೂನ್‌ 9ರ ತನಕ ಹುಬ್ಬಳ್ಳಿಯಲ್ಲಿ ಎನ್‌ಸಿಎ ಶಿಬಿರ ನಡೆಯಲಿದೆ. ಎರಡೂ ಕಡೆ 25 ಕ್ರಿಕೆಟಿಗರು ಹಾಗೂ ಒಂಬತ್ತು ಜನ ಸಹಾಯಕ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಕೋವಿಡ್‌ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಕ್ರಿಕೆಟ್‌ ಚಟುವಟಿಕೆ ನಡೆದಿರಲಿಲ್ಲ. ಈಗ ಕೆಎಸ್‌ಸಿಎ ರಾಜಧಾನಿ ಕೇಂದ್ರ ದಿಂದ ಹೊರಗೆ ಹೆಚ್ಚು ಕ್ರಿಕೆಟ್‌ ಚಟುವಟಿಕೆಗಳನ್ನು ಆಯೋಜಿಸಿದೆ.

ಧಾರವಾಡ ವಲಯದ 16 ವರ್ಷದ ಒಳಗಿನ ಕ್ರಿಕೆಟಿಗರಿಗೆ ಆಯೋಜನೆಯಾದ ಅಕಾಡೆಮಿ ಶಿಬಿರಕ್ಕೆ ಕೆಎಸ್‌ಸಿಎ ಆಡಳಿತ ಮಂಡಳಿ ಸದಸ್ಯ ತಿಲಕ್‌ ನಾಯ್ಡು ಸೋಮವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿ, ‘ರಾಜ್ಯ ತಂಡದಲ್ಲಿ ಗ್ರಾಮೀಣ ಪ್ರದೇಶಗಳಿಂದ ಹೆಚ್ಚು ಪ್ರತಿಭಾನ್ವಿತ ಆಟಗಾರರು ಬರಬೇಕು ಎನ್ನುವ ಅಪೇಕ್ಷೆ ನಮ್ಮದು. ಆದ್ದರಿಂದ ರಾಜ್ಯದ ಎಲ್ಲಾ ವಲಯಗಳಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದರು. 15 ದಿನಗಳ ಕಾಲ ನಡೆ ಯುವ ಶಿಬಿರದಲ್ಲಿ 24 ಆಟಗಾರರು ಪಾಲ್ಗೊಂಡಿದ್ದಾರೆ.