Friday, 22nd November 2024

ಎಟಿಆರ್​-72 ವಿಮಾನ ಪೋಖರಾದಲ್ಲಿ ಪತನ

ಪೋಖರಾ: ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ 72 ಪ್ರಯಾಣಿ ಕರಿದ್ದ ವಿಮಾನ ಪತನಗೊಂಡಿದೆ.
ಎಟಿಆರ್​-72 ವಿಮಾನವು ಕಸ್ಕಿ ಜಿಲ್ಲೆಯ ಪೋಖರಾದಲ್ಲಿ ಭಾನುವಾರ ಪತನಗೊಂಡಿದ್ದು, ಕನಿಷ್ಠ 13 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ವಿಮಾನದಲ್ಲಿ 68 ಪ್ರಯಾಣಿಕರು ಹಾಗೂ 4 ಸಿಬ್ಬಂದಿ ಇದ್ದರು. ಅಪಘಾತದ ಸ್ಥಳದಲ್ಲಿ 40 ಮೃತದೇಹಗಳು ಕಂಡುಬಂದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಮಾನದಲ್ಲಿ 5 ಮಂದಿ ಭಾರತೀಯರು ಕೂಡ ಪ್ರಯಾಣಿಸುತ್ತಿದ್ದರು. ಇದುವರೆಗೆ 40 ಮಂದಿಯ ಮೃತದೇಹ ಪತ್ತೆಯಾಗಿದೆ. ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ವಿಮಾನ ಪತನದ ವಿಡಿಯೋ ಸೋಶಿಯಲ್‌ ಮೀಡಿಯಾಗಳಲ್ಲಿ ಹರಿದಾ ಡುತ್ತಿದ್ದು, ಭಾರಿ ಬೆಂಕಿಗೆ ವಿಮಾನ ಧಗಧಗ ಉರಿಯು ತ್ತಿರುವುದನ್ನು ಕಾಣಬಹುದು, ಇದೇ ಸಮಯದಲ್ಲಿ ಸುತ್ತ ಸಾಕಷ್ಟು ಜನರು ನೆರೆದಿದ್ದು, ರಕ್ಷಣಾ ಪಡೆಗಳು ವಿಮಾನದಲ್ಲಿದ್ದವರ ಪ್ರಾಣವುಳಿಸಲು ಪ್ರಯತ್ನಿಸುತ್ತಿವೆ.

ಬೆಂಕಿ ಮತ್ತು ಅಪಘಾತದ ತೀವ್ರತೆ ಗಮನಿಸಿದರೆ ವಿಮಾನದಲ್ಲಿದ್ದವರ ಸ್ಥಿತಿ ಏನಾಗಿರಬಹುದು ಎಂಬ ಆತಂಕ ವ್ಯಕ್ತವಾಗಿದೆ. ಕೆಲವೊಂದು ವರದಿಗಳು ವಿಮಾನದಲ್ಲಿರುವ ಎಲ್ಲರೂ ಮೃತಪಟ್ಟಿರುವ ಶಂಕೆಯಿದೆ ಎಂದಿವೆ.