Sunday, 15th December 2024

ಎನ್‌ಐಟಿ ವಿದ್ಯಾರ್ಥಿಗಳ ಗುಂಪುಗಳ ನಡುವೆ ಘರ್ಷಣೆ: ಐವರಿಗೆ ಗಾಯ

ಶ್ರೀನಗರ: ಮ್ಮು ಮತ್ತು ಕಾಶ್ಮೀರದ ಶ್ರೀನಗರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ), ಶ್ರೀನಗರದಲ್ಲಿ ವಾಲಿಬಾಲ್ ಪಂದ್ಯ ಮುಗಿದ ನಂತರ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ.

ಘಟನೆಯಲ್ಲಿ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮಾಹಿತಿ ಪಡೆದ ಪೊಲೀಸರು ಕ್ಯಾಂಪಸ್‌ಗೆ ಆಗಮಿಸಿ ತನಿಖೆ ನಡೆಸಿದ್ದಾರೆ.

ವಿವಿಧ ಬ್ಯಾಚ್‌ಗಳಿಗೆ ಸೇರಿದ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ತಡರಾತ್ರಿ ಘರ್ಷಣೆ ನಡೆದಿದೆ.

ಎನ್‌ಐಟಿ ಶ್ರೀನಗರದಲ್ಲಿ ತಡರಾತ್ರಿ ನಡೆದ ಗಲಾಟೆಯಲ್ಲಿ ವಾಲಿಬಾಲ್ ಪಂದ್ಯದ ಅಂತ್ಯದ ನಂತರ ವಿವಿಧ ಬ್ಯಾಚ್‌ಗಳಿಗೆ ಸೇರಿದ 2 ಗುಂಪುಗಳ ವಿದ್ಯಾರ್ಥಿಗಳು ಘರ್ಷಣೆ ನಡೆಸಿದರು. ಎರಡೂ ಕಡೆಯ 5 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.