Sunday, 15th December 2024

ಸೌಥಾಂಪ್ಟನ್‌’ನಲ್ಲಿ ಮಳೆಯದ್ದೇ ಆಟ, ಪಂದ್ಯಕ್ಕೆ ಕಾಟ

ಸೌತಾಂಪ್ಟನ್ : ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಸುಸೂತ್ರವಾಗಿ ಸಾಗುವಂತೆ ಕಾಣುತ್ತಿಲ್ಲ. ಪಂದ್ಯದ ಮೊದಲ ದಿನವೂ ಮಳೆರಾಯನ ಕಾಟವಿದ್ದು, ನಾಲ್ಕನೇ ದಿನದಾಟಕ್ಕೂ ಮಳೆ ಅಡ್ಡಿಯಾಗಿದ್ದು ಪಂದ್ಯ ಸ್ಥಗಿತಗೊಂಡಿದೆ.

ನ್ಯೂಜಿಲ್ಯಾಂಡ್ ಮತ್ತು ಟೀಂ ಇಂಡಿಯಾ ನಡುವಿನ ಪಂದ್ಯದಲ್ಲಿ ಮೊದಲು ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ 217 ರನ್ ಗಳಿಗೆ ಆಲೌಟ್ ಆಯಿತು. ನಂತರ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲ್ಯಾಂಡ್ 2 ವಿಕೆಟ್ ನಷ್ಟಕ್ಕೆ 101 ರನ್ ಬಾರಿಸಿದೆ. ಮೂರನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲ್ಯಾಂಡ್ 101 ರನ್ ಬಾರಿಸಿತ್ತು. ನಾಲ್ಕನೇ ದಿನದಾಟದಲ್ಲೂ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.

ನ್ಯೂಜಿಲ್ಯಾಂಡ್ ಪರ ಟಾಮ್ ಲ್ಯಾಥಮ್ 30 ಮತ್ತು ಡಿವೋನ್ ಕೊನ್ವಾಯ್ 54 ರನ್ ಬಾರಿಸಿದ್ದಾರೆ. ಕೇನ್ ವಿಲಿಯಮ್ಸನ್ ಅಜೇಯ 12 ರನ್ ಮತ್ತು ರಾಸ್ ಟೇಲರ್ ಅಜೇಯರಾಗಿದ್ದು ಐದನೇ ದಿನದಾಟ ಪ್ರಾರಂಭಿಸಲಿದ್ದಾರೆ.

ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 34, ಶುಭ್ಮನ್ ಗಿಲ್ 28, ವಿರಾಟ್ ಕೊಹ್ಲಿ 44, ಅಂಜಿಕ್ಯ ರಹಾನೆ 49 ಮತ್ತು ರವಿಚಂದ್ರನ್ ಅಶ್ವಿನ್ 22 ರನ್ ಬಾರಿಸಿದರು. ನ್ಯೂಜಿಲ್ಯಾಂಡ್ ಪರ ಬೌಲಿಂಗ್ ನಲ್ಲಿ ಕೇಲ್ ಜೇಮಿಸನ್ 5, ವಾಗ್ನರ್ ಮತ್ತು ಟ್ರಿಂಟ್ ಬೌಲ್ಟ್ ತಲಾ 2 ವಿಕೆಟ್ ಪಡೆದಿದ್ದಾರೆ.