Wednesday, 11th December 2024

30 ವರ್ಷಕ್ಕಿಂತ ಕಡಿಮೆ ಸೇವೆ ಹೊಂದಿರುವ ನೌಕರರಿಗೆ ‘3ನೇ ಬಡ್ತಿ’ ನೀಡುವಂತಿಲ್ಲ

ವದೆಹಲಿ : 30 ವರ್ಷಕ್ಕಿಂತ ಕಡಿಮೆ ಸೇವೆ ಹೊಂದಿರುವ ಕೇಂದ್ರ ಸರ್ಕಾರಿ ನೌಕರರಿಗೆ ಆರ್ಥಿಕ ಪ್ರಗತಿಯ ಲಾಭ ವನ್ನ ನೀಡಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪಿನಲ್ಲಿ ಹೇಳಿದೆ.

ಕೇವಲ 28 ವರ್ಷಗಳ ಸೇವಾವಧಿಯಲ್ಲಿ ಕೆಲವು ಅಧಿಕಾರಿಗಳಿಗೆ ಮೂರನೇ ಎಂಎಸಿಪಿಯ ಲಾಭವನ್ನ ಕೇಂದ್ರವು ನೀಡಿದೆ ಎಂಬ ವಾದವನ್ನ ನ್ಯಾಯಾ ಲಯ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ವಿ.ಕಾಮೇಶ್ವರ ರಾವ್ ಮತ್ತು ಎ.ಕೆ. ಮೆಂಡಿರಟ್ಟಾ ಅವರ ಪೀಠವು ತನ್ನ ತೀರ್ಪಿನಲ್ಲಿ ಸರ್ಕಾರವು ಈ ಹಿಂದೆ 30 ವರ್ಷಕ್ಕಿಂತ ಕಡಿಮೆ ಸೇವೆ ಹೊಂದಿರುವವರಿಗೆ ಮೂರನೇ ಎಂಎಸಿಪಿಯ ಪ್ರಯೋಜನ ವನ್ನ ತಪ್ಪಾಗಿ ನೀಡಿದೆ. ಇದರರ್ಥ ಈ ತಪ್ಪು ಪುನರಾವರ್ತನೆಯಾಗಬೇಕು ಎಂದು ಅರ್ಥವಲ್ಲ ಎಂದು ಹೇಳಿದೆ.

ಕೇಂದ್ರ ಲೋಕೋಪಯೋಗಿ ಇಲಾಖೆಯ (CPWD) ಅಧಿಕಾರಿಯೊಬ್ಬರ ಬೇಡಿಕೆಯನ್ನ ತಿರಸ್ಕರಿಸಿದ ಪೀಠವು ಈ ಹೇಳಿಕೆ ನೀಡಿದೆ. ಅರ್ಜಿದಾರ ಭೂಪ್ ಸಿಂಗ್ ಅವರ ಬೇಡಿಕೆಯನ್ನು ಅಂಗೀಕರಿಸಿದರೆ, ಅವರು 2008ರಲ್ಲಿ ಪಡೆದ ಎರಡನೇ ಎಂಎಸಿಪಿಯ ಆರು ವರ್ಷಗಳ ಬಳಿಕ ಒಟ್ಟು 28 ವರ್ಷಗಳ ಸೇವೆ ಯಲ್ಲಿ ಮೂರನೇ ಎಂಎಸಿಪಿಯ ಲಾಭವನ್ನ ನೀಡಲಾಗುತ್ತದೆ ಎಂದು ಅರ್ಥ ಎಂದಿದೆ.

ಏನಿದು ಎಂಎಸಿಪಿ : ನೌಕರನಿಗೆ ಬಡ್ತಿ ಸಿಗದಿದ್ದರೂ, ನಿರ್ದಿಷ್ಟ ಸೇವೆಯ ಮಧ್ಯಂತರದಲ್ಲಿ ಅವರು ಆರ್ಥಿಕ ಹೆಚ್ಚಳವನ್ನ ಪಡೆಯುತ್ತಾರೆ ಎಂಬ ನಿಬಂಧನೆ ಇದೆ. ಇದಕ್ಕಾಗಿ, 10 ವರ್ಷ, 20 ವರ್ಷ ಮತ್ತು 30 ವರ್ಷಗಳ ಸೇವೆಯನ್ನ ಪೂರ್ಣಗೊಳಿಸಿದ ನಂತರ ಆರ್ಥಿಕ ಬಡ್ತಿಗೆ ಅವಕಾಶವಿದೆ.