Friday, 22nd November 2024

ಕಿವೀಸ್‌ ಆಲ್ರೌಂಡರ್‌ ಕೋರಿ ಆಂಡರ್ಸನ್‌ ಕ್ರಿಕೆಟ್‌ನಿಂದ ನಿವೃತ್ತಿ

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ ನ ಸ್ಪೋಟಕ ಆಟಗಾರ ಕೋರಿ ಆಯಂಡರ್ಸನ್ ವೃತ್ತಿಪರ ಕ್ರಿಕೆಟಿಗೆ ರಾಜೀನಾಮೆ ನೀಡಿದ್ದಾರೆ. ಊಹಾಪೋಹಗಳಿಗೆ ತೆರೆ ಎಳೆದ ಆಯಂಡರ್ಸನ್ , ಸುದ್ದಿಯನ್ನು ಖಚಿತಪಡಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾಗಿ ತಿಳಿಸಿದ್ದಾರೆ.

ನ್ಯೂಜಿಲ್ಯಾಂಡ್ ಪರ ಆಡಲು ತುಂಬಾ ಹೆಮ್ಮೆಪಟ್ಟಿದ್ದೇನೆ. ನಾನು ಇನ್ನಷ್ಟು ಆಡಲು, ಇನ್ನಷ್ಟು ಸಾಧಿಸಲು ಬಯಸಿದ್ದೆ. ಕೆಲವು ಸಾಧ್ಯತೆಗಳು, ಅವಕಾಶಗಳು ನಮ್ಮನ್ನು ಇನ್ನೊಂದು ದಾರಿಯತ್ತ ಮುಖಮಾಡಿಸುತ್ತದೆ ಎಂದು ಆಲ್ ರೌಂಡರ್ ಹೇಳಿದ್ದಾರೆ.

ಆಯಂಡರ್ಸನ್ ಮುಂದಿನ ಕ್ರಿಕೆಟ್ ನ್ನು ಯುಎಸ್ ಎ ತಂಡದೊಂದಿಗೆ ಆಡಲು ನಿರ್ಧರಿಸಿದ್ದಾರೆ. ಅಮೆರಿಕದ ಟಿ20 ಲೀಗ್ ನೊಂದಿಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ.

ಆಯಂಡರ್ಸನ್ ಕಿವೀಸ್ ಪರ 93 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಎರಡನೇ ಅತೀ ವೇಗದ ಶತಕ ಬಾರಿಸಿದ ದಾಖಲೆಯನ್ನು ಆಯಂಡರ್ಸನ್ ಹೊಂದಿದ್ದಾರೆ.

2014 ರಲ್ಲಿ ಕೋರಿ ಆಯಂಡರ್ಸನ್ ಅವರು, ವೆಸ್ಟ್ ಇಂಡೀಸ್ ವಿರುದ್ದ ವೇಗದ ಶತಕ ಬಾರಿಸಿದ್ದರು. ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿದ ಕೋರಿ, ಪಾಕಿಸ್ತಾನದ ಶಹೀದ್‌ ಅಫ್ರಿದಿ ಅವರ ದಾಖಲೆಯನ್ನು ಮುರಿದರು. ಈ ಶತಕದ ನೆರವಿನಿಂದ ನ್ಯೂಜಿಲೆಂಡ್‌ ತಂಡ, ಮಳೆ ಬಾಧಿತ ಪಂದ್ಯದಲ್ಲಿ 21 ಓವರುಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 283 ರನ್‌ ಗಳಿಸಿತು.