Thursday, 12th December 2024

ದೂರುಗಳನ್ನು ಸಲ್ಲಿಸಲು ಏಕೀಕೃತ ಒಂಬುಡ್ಸ್‌ಮನ್‌ ವ್ಯವಸ್ಥೆ: ಆರ್‌ಬಿಐ

ಮುಂಬೈ: ಬ್ಯಾಂಕ್‌, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹಾಗೂ ಡಿಜಿಟಲ್ ಪಾವತಿಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಏಕೀಕೃತ ಒಂಬುಡ್ಸ್‌ಮನ್‌ ವ್ಯವಸ್ಥೆ ಜಾರಿಗೆ ತರಲು ಆರ್‌ಬಿಐ ತೀರ್ಮಾನಿಸಿದೆ.

ಈಗ ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಸಂಬಂಧಿಸಿದ ವಹಿವಾಟು ಹಾಗೂ ಬ್ಯಾಂಕ್‌ ಅಲ್ಲದ ಸಂಸ್ಥೆಗಳು ಒದಗಿಸುವ ಪ್ರೀಪೇಯ್ಡ್‌ ಡಿಜಿಟಲ್ ಪಾವತಿಗಳಿಗೆ ಸಂಬಂಧಿಸಿದ ದೂರುಗಳನ್ನು ಹೇಳಿಕೊಳ್ಳಲು ಪ್ರತ್ಯೇಕ ಒಂಬುಡ್ಸ್‌ಮನ್‌ ವ್ಯವಸ್ಥೆ ಇದೆ.

ಒಂಬುಡ್ಸ್‌ಮನ್‌ ವ್ಯವಸ್ಥೆ ಸರಳಗೊಳಿಸಲು, ಮೂರನ್ನೂ ಒಂದೆಡೆ ತಂದು, ‘ಒಂದು ದೇಶ, ಒಂದು ಒಂಬುಡ್ಸ್‌ಮನ್‌’ ವ್ಯವಸ್ಥೆಯನ್ನು ರೂಪಿಸ ಲಾಗುವುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದರು. ಇದನ್ನು ಜೂನ್‌ ತಿಂಗಳಿಂದ ಜಾರಿಗೆ ತರುವ ಉದ್ದೇಶ ಇದೆ.