Thursday, 12th December 2024

ಪಗಡದಿನ್ನಿ ಕ್ಯಾಂಪಿನ ಪೂರ್ವ ಶಿಕ್ಷಣ ತರಬೇತಿ ಯಶಸ್ವಿ

ಸಿಂಧನೂರು :ಸಮೀಪದ ಪಗಡದಿನ್ನಿ ಕ್ಯಾಂಪಿನ ಅಂಗನವಾಡಿ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಹಾಗೂ ತಾಲೂಕು ಶಿಶು ಅಭಿವೃದ್ಧಿ ಯೋಜನೆ ಇಲಾಖೆ ತುರುವಿಹಾಳ ಇವರ ಸಂಯುಕ್ತ ಆಶ್ರಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರ 3 ನೇ ಹಂತದ ಶಾಲಾಪೂರ್ವ ಶಿಕ್ಷಣ ಬಲವರ್ಧನೆಯ ತರಬೇತಿಯು ಯಶಸ್ವಿಯಾಗಿ ಜರುಗಿತು.

ಈ ವೇಳೆ ಶಿಕ್ಷಣ ಯೋಜನೆ ಕಲಿಕಾ ಟಾಟಾ ಟ್ರಸ್ಟಿನ ನಿರ್ದೇಶಕ ಗಿರೀಶ್ ಮಾತನಾಡಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಯಲ್ಲಿ ಒಂದಾದ ಬಲವರ್ಧನೆ ಯೋಜನೆ ಬಹುಮುಖ್ಯವಾಗಿದೆ ಇದನ್ನು ಪ್ರತಿಯೊಬ್ಬರು ಅರಿತುಕೊಂಡು ಕಾರ್ಯಕರ್ತರು ಹೆಚ್ಚಿನ ರೀತಿಯಲ್ಲಿ ಹರಿದುಕೊಂಡು ಅಂಗನವಾಡಿಗಳಿಗೆ ಸಹಾಯ ಹಾಗೂ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.

ಜಿಲ್ಲಾ ವ್ಯವಸ್ಥಾಪಕ ಶ್ರೀಶೈಲ್ ಡಂಬಳ ಮಾತನಾಡಿ ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿಯೊಬ್ಬರು ಅರಿತುಕೊಂಡು ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದರು ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಸುಮಿತಾ, ಶಾಂತ ಮಹಾದೇವಿ ಇತರರಿದ್ದರು.