ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಪಿಎ ರಮೇಶ್ ಅವರ ಆತ್ಮಹತ್ಯೆೆ ಪ್ರಕರಣಕ್ಕೆೆ ಸಂಬಂಧಪಟ್ಟಂತೆ ಐಟಿ ವಿಚಾರಣೆಗೆ ಪರಮೇಶ್ವರ ಕಾಲಾವಕಾಶ ಕೇಳಿದ್ದಾರೆ.
ಪರಮೇಶ್ವರ ಅವರ ಪಿಎ ರಮೇಶ್ ಅವರ ಆತ್ಮಹತ್ಯೆೆ ಪ್ರಕರಣ ಸಂಬಂಧ ವಿಚಾರಣೆಗೆ ಐಟಿ ಇಲಾಖೆ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ ಕೆಲ ವೈಯಕ್ತಿಿಕ ಕಾರಣಗಳಿಂದಾಗಿ ಶನಿವಾರ ವಿಚಾರಣೆಗೆ ಹಾಜರಾಗದೇ ಸೋಮವಾರ ಹಾಜರಾಗುವುದಾಗಿ ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕಳೆದೆರೆಡು ದಿನಗಳ ಹಿಂದೆ ಮಾಜಿ ಡಿಸಿಎಂ ಜಿ.ಪರಮೇಶ್ವರ ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿ ಕೆಲ ಪ್ರಶ್ನೆೆಗಳಿಗೆ ಉತ್ತರ ನೀಡಿ ಕೆಲ ಮಹತ್ವದ ದಾಖಲೆಗಳನ್ನು ಒದಗಿಸಿದ್ದರು. ಈ ವೇಳೆ ಐಟಿ ಅಧಿಕಾರಿಗಳು ಶುಕ್ರವಾರ ಮತ್ತೆೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಆದರೆ ಪರಮೇಶ್ವರ ಅವರಿಗೆ ಕೆಲ ವೈಯಕ್ತಿಿಕ ಕಾರಣಗಳ ಹಿನ್ನೆೆಲೆ ವಿಚಾರಣೆಗೆ ಹಾಜರಾಗಿಲ್ಲ. ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಐಟಿಗೆ ನೋಟಿಸ್ ಜಾರಿ!
ಮತ್ತೊೊಂದೆಡೆ ಪರಮೇಶ್ವರ ಪಿಎ ರಮೇಶ್ ಐಟಿ ಅಧಿಕಾರಿಗಳ ಕಿರುಕುಳಕ್ಕೆೆ ಮೃತಪಟ್ಟಿಿದ್ದಾರೆಂಬ ಆರೋಪ ಪ್ರಕರಣಕ್ಕೆೆ ಸಂಬಂಧಿಸಿದಂತೆ ಈಗಾಗಲೇ ಜ್ಞಾನಭಾರತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಿಕೊಂಡಿದ್ದಾರೆ. ರಮೇಶ್ ಅವರ ಪತ್ನಿಿ ಹಾಗೂ ಮನೆಯ ಸಿಸಿಟಿವಿ ದೃಶ್ಯದಲ್ಲಿ ಐಟಿ ಅಧಿಕಾರಿಗಳು ರಮೇಶ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು ಸ್ಪಷ್ಟವಾಗಿತ್ತು. ಹೀಗಾಗಿ ಐಟಿ ತನಿಖೆಯ ದೃಷ್ಟಿಿಯಿಂದ ಪರಮೇಶ್ವರ ಕಾರು ಚಾಲಕ ಅನೀಲ್ ಹಾಗೂ ರಮೇಶ್ ಆಪ್ತರನ್ನು ವಿಚಾರಣೆಗೆ ಒಳಪಡಿಸಿದ್ದು ತಿಳಿದು ಬಂದಿದೆ ಎಂದು ಹೇಳಲಾಗಿದೆ. ಸದ್ಯ ಸಿಆರ್‌ಪಿಸಿ ಸೆಕ್ಷನ್ 91ರ ಅಡಿ ಜ್ಞಾನಭಾರತಿ ಪೊಲೀಸರು ಐಟಿಗೆ ನೋಟಿಸ್ ಜಾರಿ ಮಾಡಿ ನೋಟಿಸ್‌ನಲ್ಲಿ ರಮೇಶ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದೀರಾ ಇಲ್ವಾಾ? ಒಳಪಡಿಸಿದ್ದರೆ ಯಾವಾಗ ವಿಚಾರಣೆ ನಡೆದಿದೆ, ಎಲ್ಲಿ ನಡೆದಿದೆ ಎಂಬ ಮಾಹಿತಿಯನ್ನು ಲಿಖಿತ ರೂಪದಲ್ಲಿ ನೀಡುವಂತೆ ಐಟಿ ಇಲಾಖೆಗೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.