ಪ್ಯಾರಿಸ್: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಪ್ಯಾರಾ ಬ್ಯಾಡ್ಮಿಂಟನ್ ತಾರೆಗಳಾದ ಸುಕಾಂತ್ ಕದಮ್(Sukant Kadam), ಕನ್ನಡಿಗ ಸುಹಾಸ್ ಯತಿರಾಜ್(Suhas Yathiraj) ಮತ್ತು ತರುಣ್ ಥಿಲ್ಲೋನ್(Tarun Tarun)ಗೆಲುವಿನ ಶುಭಾರಂಭ ಕಂಡಿದ್ದಾರೆ. ಪುರುಷರ ಸಿಂಗಲ್ಸ್ ಎಸ್‌ಎಲ್4 ಗುಂಪು ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಮುಂದಿನ ಹಂತಕ್ಕೇರಿದ್ದಾರೆ. ಆದರೆ ಮಹಿಳಾ ವಿಭಾಗದಲ್ಲಿ ಮಾನಸಿ ಜೋಶಿ(Manasi Joshi) ಮತ್ತು ಮನ್‌ದೀಪ್ ಕೌರ್(Mandeep Kaur) ಸೋಲು ಕಂಡು ನಿರಾಸೆ ಮೂಡಿಸಿದರು.
ಸುಹಾಸ್ ಅವರು ಇಂಡೋನೇಷ್ಯಾದ ಹಿಕ್ಮತ್ ರಾಮದಾನಿ ಅವರನ್ನು 21-7, 21-5 ನೇರ ಗೇಮ್‌ಗಳಿಂದ ಮಣಿಸಿದರು. ಸುಕಾಂತ್ ಕದಮ್ ಮಲೇಷ್ಯಾದ ಮೊಹಮ್ಮದ್ ಅಮೀನ್ ಬುರ್ಹಾನುದ್ದೀನ್ ವಿರುದ್ಧ ಮೂರು ಸುತ್ತುಗಳ ಮ್ಯಾರಥಾನ್ ಹೋರಾಟದಲ್ಲಿ 17-21, 21-15, 22-20 ಗೇಮ್‌ಗಳ ಅಂತರದಿಂದ ಗೆಲುವಿನ ನಿಟ್ಟುಸಿರುಬಿಟ್ಟರು.
ಮಹಿಳಾ ಸಿಂಗಲ್ಸ್ SL3 ವಿಭಾಗದಲ್ಲಿ ಮಾನಸಿ ಜೋಶಿ ಅವರು ಅಗ್ರ ಶ್ರೇಯಾಂಕದ ಇಂಡೋನೇಷ್ಯಾದ ಕೊನಿಟಾ ಸೈಕುರೋಹ್ ವಿರುದ್ಧ ಮೊದಲ ಗೇಮ್‌ನಲ್ಲಿ ಗೆಲುವು ಸಾಧಿಸಿದರೂ ಕೂಡ ಆ ಬಳಿಕ ಎರಡು ಗೇಮ್‌ಗಳಲ್ಲಿ ಸೋಲು ಕಂಡರು. ಸೈಕುರೋಹ್ ಗೆಲುವಿನ ಅಂತರ 16-21, 21-13, 21-18.
https://x.com/SportsArena1234/status/1829102974762713101
ಪುರುಷರ ಸಿಂಗಲ್ಸ್ ಎಸ್‌ಎಲ್4 ‘ಡಿ’ ಗುಂಪಿನ ಮೊದಲ ಸುತ್ತಿನಲ್ಲಿ ಪಂದ್ಯದಲ್ಲಿ ಭಾರತದ ತರುಣ್ ಥಿಲ್ಲೋನ್ ಬ್ರೆಜಿಲ್‌ನ ರೊಜೆರಿಯೊ ಜೂನಿಯರ್ ಕ್ಸೇವಿಯರ್ ಡಿ ಒಲಿವೇರಾ ವಿರುದ್ಧ 21-17, 21-19 ನೇರ ಗೇಮ್‌ಗಳ ಅಂತರದಿಂದ ಗೆಲುವಿನ ನಗೆ ಬೀರಿದರು. ಇದಕ್ಕೂ ಮುನ್ನ ನಡೆದ ಮಹಿಳಾ ಸಿಂಗಲ್ಸ್ SL3 ವಿಭಾಗದ ‘ಬಿʼ ಗುಂಪಿನ ಪಂದ್ಯದಲ್ಲಿ ಭಾರತದ ಮನ್‌ದೀಪ್ ಕೌರ್ ನೈಜೀರಿಯಾದ ಮರಿಯಮ್ ಬೋಲಾಜಿ ವಿರುದ್ಧ 18-21, 14-21 ನೇರ ಗೇಮ್‌ಗಳಿಂದ ಪರಾಭವಗೊಂಡರು.
ಟೆಕ್ವಾಂಡೊ ಸ್ಪರ್ಧೆಯಲ್ಲಿ ನಿರಾಸೆ
ಪದಕ ಗೆಲ್ಲಬಹುದಾಗಿದ್ದ ಟೆಕ್ವಾಂಡೊ ಸ್ಪರ್ಧೆಯಲ್ಲಿ ಮಹಿಳೆಯರ ಕೆ44-47 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಭಾರತದ ಅರುಣಾ ಸಿಂಗ್ ತನ್ವಾರ್ 19-0 ಅಂತರದ ಸೋಲು ಕಂಡರು.