Sunday, 15th December 2024

ಏಪ್ರಿಲ್ 1ರಿಂದ ದೇಶೀಯ ಪಾವತಿ ಸೇವೆ ಸ್ಥಗಿತ: PayPal

ನವದೆಹಲಿ: ಏಪ್ರಿಲ್ 1ರಿಂದ ಭಾರತದಲ್ಲಿ ದೇಶೀಯ ಪಾವತಿ ಸೇವೆಗಳನ್ನು ಸ್ಥಗಿತಗೊಳಿಸಲು ಜಾಗತಿಕ ಡಿಜಿಟಲ್ ಪಾವತಿ ವೇದಿಕೆ PayPal ಶುಕ್ರವಾರ ನಿರ್ಧರಿಸಿದೆ.

ಏಪ್ರಿಲ್ 1ರಿಂದ, ಕಂಪನಿಯು ಭಾರತದ ಉದ್ಯಮಗಳಿಗೆ ಹೆಚ್ಚು ಅಂತಾರಾಷ್ಟ್ರೀಯ ಮಾರಾಟ ಸಕ್ರಿಯಗೊಳಿಸುವತ್ತ ತನ್ನ ಗಮನವನ್ನು ಕೇಂದ್ರೀ ಕರಿಸಲಿದೆ ಭಾರತದಲ್ಲಿ ತನ್ನ ದೇಶೀಯ ಉತ್ಪನ್ನಗಳತ್ತ ಗಮನವನ್ನು ಕೇಂದ್ರೀಕರಿಸಲಿದೆ. ಹೀಗಾಗಿ ಏಪ್ರಿಲ್ 1ರಿಂದ ಭಾರತದಲ್ಲಿ ದೇಶೀಯ ಪಾವತಿ ಸೇವೆಗಳನ್ನು ನಾವು ನೀಡುವುದಿಲ್ಲ ಎಂದು PayPal ವಕ್ತಾರರು ತಿಳಿಸಿದ್ದಾರೆ.

ಕಂಪನಿಯು ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಲ್ಲಿ ಮೂರು ಕೇಂದ್ರಗಳನ್ನು ಹೊಂದಿದ್ದು, ಇದು ಅಮೆರಿಕದ ಹೊರಗಿರುವ ಅತಿ ದೊಡ್ಡ ಸಂಸ್ಥೆಎಂದು ಪರಿಗಣಿಸಲ್ಪಟ್ಟಿದೆ. ಭಾರತದಲ್ಲಿ ತನ್ನ ವ್ಯಾಪಾರ ಅಭಿವೃದ್ಧಿ ತಂಡಗಳನ್ನು ಸಹ ಹೊಂದಿದೆ.

‘ಭಾರತದ ಉದ್ಯಮಗಳು ಪ್ರಪಂಚದಾದ್ಯಂತ ಸುಮಾರು 350 ಮಿಲಿಯನ್ PayPal ಗ್ರಾಹಕರನ್ನು ತಲುಪಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮಾರಾಟವನ್ನು ಹೆಚ್ಚಿಸಲು ಮತ್ತು ಭಾರತೀಯ ಆರ್ಥಿಕತೆ ಗೆ ಮರಳಲು ಸಹಾಯ ಮಾಡುವಂತಹ ಉತ್ಪನ್ನ ಅಭಿವೃದ್ಧಿಯಲ್ಲಿ ಹೂಡಿಕೆಯನ್ನು ಮುಂದುವರಿಸಲಿದೆ’ ಎಂದು PayPal ಹೇಳಿದರು.