Thursday, 19th September 2024

PCOS Problem: ಪಿಸಿಒಎಸ್ ಸಮಸ್ಯೆ ಇರುವವರು ಡೈರಿ ಉತ್ಪನ್ನಗಳನ್ನು ಸೇವಿಸಬಹುದೇ?

PCOS Problem

ಬೆಂಗಳೂರು : ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್)(PCOS Problem) ಪ್ರಪಂಚದಾದ್ಯಂತ ಹೆಚ್ಚಿನ ಮಹಿಳೆಯರು ಎದುರಿಸುತ್ತಿರುವ ಒಂದು ಸಾಮಾನ್ಯ ಸಮಸ್ಯೆ ಇದರಿಂದ ಹಾರ್ಮೋನುಗಳ ಅಸಮತೋಲನ ಉಂಟಾಗಿ ಅನಿಯಮಿತ ಮುಟ್ಟಿನ ಸಮಸ್ಯೆ ಕಾಡುತ್ತದೆ. ಹಾಗಾಗಿ ಅನೇಕ ಮಹಿಳೆಯರು ಈ ಸಮಸ್ಯೆಯನ್ನು ನಿವಾರಿಸಲು ತಮ್ಮ ಆಹಾರಗಳಲ್ಲಿ ಬದಲಾವಣೆಗಳನ್ನು ಮಾಡುತ್ತಾರೆ. ಯಾಕೆಂದರೆ ಪಿಸಿಒಎಸ್ ಸಮಸ್ಯೆ ಇರುವವರು ಡೈರಿ ಉತ್ಪನ್ನಗಳನ್ನು ಸೇವಿಸಬಾರದು ಎಂದು ಕೆಲವರು ಹೇಳುತ್ತಾರೆ. ಹಾಗಾದ್ರೆ ಇದು ನಿಜವೇ? ಡೈರಿ ಉತ್ಪನ್ನಗಳು ಪಿಸಿಒಎಸ್ ಸಮಸ್ಯೆಯ ಮೇಲೆ ಪರಿಣಾಮ ಬೀರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯೋಣ.

ಪಿಸಿಓಎಸ್ ಎಂದರೇನು?
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅಥವಾ ಪಿಸಿಒಎಸ್ ಒಂದು ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುವ ಸಮಸ್ಯೆಯಾಗಿದೆ. ಇದು ಮಹಿಳೆಯರ ಮುಟ್ಟಿನ ಮೇಲೆ ಪರಿಣಾಮ ಬೀರುತ್ತದೆ. ಪಿಸಿಒಎಸ್ ಹೊಂದಿರುವ ಮಹಿಳೆಯರಲ್ಲಿ ಅಂಡೋತ್ಪತ್ತಿ ಸರಿಯಾಗಿ ಆಗುವುದಿಲ್ಲ ಮತ್ತು ಆಂಡ್ರೊಜೆನ್‌ಗಳ ಅಂದರೆ ಪುರುಷ ಹಾರ್ಮೋನುಗಳು ಹೆಚ್ಚಿನ ಮಟ್ಟದಲ್ಲಿ ಉತ್ಪಾದನೆಯಾಗುತ್ತದೆ. ಇದರಿಂದ ಅಂಡಾಶಯದ ಮೇಲೆ ಸಣ್ಣ ಸಿಸ್ಟ್ ಗುಳ್ಳೆಗಳು ಮೂಡುತ್ತವೆ. ಪಿಸಿಒಎಸ್ ಸಮಸ್ಯೆ ಇರುವವರಲ್ಲಿ ಅನಿಯಮಿತ ಋತುಚಕ್ರ, ಮುಖದಲ್ಲಿ ಕೂದಲು, ತೂಕ ಹೆಚ್ಚಾಗುವುದು, ಮೊಡವೆ, ಎಣ್ಣೆಯುಕ್ತ ಚರ್ಮ ಇತ್ಯಾದಿ ರೋಗಲಕ್ಷಣಗಳು ಕಾಣಿಸುತ್ತದೆ.

ಪಿಸಿಒಎಸ್ ಸಮಸ್ಯೆ ಇರುವವರು ಡೈರಿ ಉತ್ಪನ್ನಗಳನ್ನು ಸೇವಿಸಬಹುದೇ?
ಹೆಚ್ಚಿನ ಕಾರ್ಬೋಹೈಡ್ರೇಟ್, ಹೆಚ್ಚಿನ ಕೊಬ್ಬಿನ ಆಹಾರ, ಕಡಿಮೆ ಫೈಬರ್ ಆಹಾರ, ಹೆಚ್ಚಿನ ಗ್ಲೈಸೆಮಿಕ್ ಮತ್ತು ಫಾಸ್ಟ್‌ಫುಡ್ ಗಳು ಪಿಸಿಒಎಸ್ ಸಮಸ್ಯೆಯನ್ನು ಹೆಚ್ಚಿಸುತ್ತವೆ ಎಂದು ಹೇಳಲಾಗಿದೆ. ಆದರೆ ಪಿಸಿಒಎಸ್ ಸಮಸ್ಯೆ ಇರುವವರು ಡೈರಿ ಉತ್ಪನ್ನಗಳನ್ನು ಸೇವಿಸುವುದನ್ನು ತಪ್ಪಿಸಬೇಕು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಡೈರಿ ಉತ್ಪನ್ನಗಳು ನೇರವಾಗಿ ಪಿಸಿಒಎಸ್ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಯಾವುದೇ ಸಂಶೋಧನೆಯಲ್ಲಿ ತಿಳಿಸಲಾಗಿಲ್ಲ. ಆದರೆ ಕೊಬ್ಬಿನಾಂಶ ಸೇವನೆ ಮಿತಿಯೊಳಗೆ ಇರಬೇಕು ಮತ್ತು ಹೆಚ್ಚು ಸ್ಯಾಚುರೇಟೆಡ್ ಕೊಬ್ಬುಗಳನ್ನು ತಿನ್ನುವಂತಿಲ್ಲ .

ಇದನ್ನೂ ಓದಿ: ಹೊಳೆಯುವ ಚರ್ಮ ಮತ್ತು ಆರೋಗ್ಯಕರ ಕೂದಲಿಗಾಗಿ ಒಣ ಖರ್ಜೂರವನ್ನು ಹೀಗೆ ಬಳಸಿ

ಕೆಲವು ಜನರು ಲ್ಯಾಕ್ಟೋಸ್ ಅಸಹಿಷ್ಣುರಾಗಿರುತ್ತಾರೆ. ಆದ್ದರಿಂದ, ಅಂತವರು ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ತಿನ್ನುತ್ತಿದ್ದರೆ, ಅದು ಅಜೀರ್ಣ ಸಮಸ್ಯೆ ಉಂಟುಮಾಡಬಹುದು. ಹಾಗಾಗಿ ತಜ್ಞರ ಪ್ರಕಾರ, ಲ್ಯಾಕ್ಟೋಸ್ ಅಸಹಿಷ್ಣುತೆ ಇಲ್ಲದಿದ್ದರೆ, ಪಿಸಿಒಎಸ್ ಸಮಸ್ಯೆ ಇರುವವರು ಪ್ರೋಟೀನ್‍ನ ಉತ್ತಮ ಮೂಲಗಳಾದ ಮೊಸರು ಮತ್ತು ಮಜ್ಜಿಗೆಯನ್ನು ಮಿತವಾಗಿ ಸೇವಿಸಬಹುದಂತೆ ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಹಾಗಾಗಿ ಯಾವುದೇ ಸಮಸ್ಯೆ ಇದ್ದರೂ ಕೂಡ ಆಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

Leave a Reply

Your email address will not be published. Required fields are marked *