Sunday, 15th December 2024

ನಾಳೆ ಗ್ರ್ಯಾಂಡ್​​ ಚಾಲೆಂಜಸ್​ ವಾರ್ಷಿಕ ಸಭೆಯಲ್ಲಿ ಮೋದಿ ಮಾತು

ನವದೆಹಲಿ: ಕರೊನಾ ಪಿಡುಗನ್ನು ಎದುರಿಸುವುದು ಹಾಗೂ ಕರೊನೋತ್ತರ ಪರಿಸ್ಥಿತಿ ನಿಭಾಯಿಸುವ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೇ ತಿಂಗಳ 18ರಂದು ಜಾಗತಿಕ ಸಭೆಯಲ್ಲಿ ಮಾತನಾಡಲಿದ್ದಾರೆ.

ಕೋವಿಡ್​ ಪಿಡುಗನ್ನು ಎದುರಿಸುವ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ವಿಜ್ಞಾನಿಗಳು, ಸಂಶೋಧಕರು ಸೇರಲಿರುವ ಗ್ರ್ಯಾಂಡ್​​ ಚಾಲೆಂಜಸ್​ ವಾರ್ಷಿಕ ಸಭೆ 2020 ಆಯೋಜಿಸಲಾಗಿದೆ. ಇದರಲ್ಲಿ ಪ್ರಧಾನಿ ಮೋದಿ ಅವರು ರಾತ್ರಿ 7.30ಕ್ಕೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಗವಹಿಸಲಿದ್ದು, ಮುಖ್ಯಅತಿಥಿ ಆಗಿ ಮಾತನಾಡಲಿದ್ದಾರೆ.

ಈ ಸಭೆ ಕಳೆದ 15 ವರ್ಷಗಳಿಂದ ನಡೆಯುತ್ತಿದ್ದು, ಆರೋಗ್ಯ ಮತ್ತು ಅಭಿವೃದ್ಧಿ ಸಂಬಂಧಿತ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತ ಬಂದಿದೆ. 40 ದೇಶಗಳ ಸುಮಾರು 1,600 ಗಣ್ಯರು ಈ ಜಾಗತಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.