Thursday, 12th December 2024

Pro Kabaddi 2024 : ಅಕ್ಟೋಬರ್‌ 18ರಿಂದ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿ ಆರಂಭ

PRO KABADDI LEAGUE 2024

ಮುಂಬೈ: ಪ್ರೊ ಕಬಡ್ಡಿ ಲೀಗ್‌ನ ಆಯೋಜಕರಾದ ಮಶಾಲ್‌ ಸ್ಪೋರ್ಟ್ಸ್ ಪಿಕೆಎಲ್‌ 11ನೇ ಆವೃತ್ತಿಯು (Pro Kabaddi 2024) 2024ರ ಅಕ್ಟೋಬರ್‌ 18ರಂದು ಪ್ರಾರಂಭವಾಗಲಿದೆ ಎಂದು ಘೋಷಿಸಿದೆ. ಈ ವರ್ಷದ ಆರಂಭದಲ್ಲಿಪ್ರೊ ಕಬಡ್ಡಿ ಲೀಗ್‌ನ ಹತ್ತು ಋುತುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ವಿಶ್ವದ ಅತಿದೊಡ್ಡ ಕಬಡ್ಡಿ ಲೀಗ್‌ ಅಕ್ಟೋಬರ್‌ನಲ್ಲಿಹೊಸ ಹಂತವನ್ನು ಪ್ರಾರಂಭಿಸಲಿದೆ.

11ನೇ ಆವೃತ್ತಿಯಲ್ಲಿಪ್ರೊ ಕಬಡ್ಡಿ ಲೀಗ್‌ ಮೂರು ನಗರಗಳ ಕಾರವಾನ್‌ ಸ್ವರೂಪಕ್ಕೆ ಮರಳಲಿದೆ. 2024ರ ಆವೃತ್ತಿಯು ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿಅಕ್ಟೋಬರ್‌ 18ರಂದು ಪ್ರಾರಂಭವಾಗಲಿದ್ದು, ನವೆಂಬರ್‌ 10ರಿಂದ ಎರಡನೇ ಚರಣಕ್ಕಾಗಿ ನೋಯ್ಡಾ ಒಳಾಂಗಣ ಕ್ರೀಡಾಂಗಣಕ್ಕೆ ತೆರಳಲಿದೆ. ಮೂರನೇ ಚರಣ ಡಿಸೆಂಬರ್‌ 3ರಿಂದ ಪುಣೆಯ ಬಾಳೆವಾಡಿ ಕ್ರೀಡಾಂಗಣದಲ್ಲಿನಡೆಯಲಿದೆ. ಪ್ಲೇಆಫ್‌ಗಳ ದಿನಾಂಕಗಳು ಮತ್ತು ಸ್ಥಳವನ್ನು ನಂತರದ ದಿನಾಂಕದಲ್ಲಿಪ್ರಕಟಿಸಲಾಗುತ್ತದೆ.

ಪಿಕೆಎಲ್‌ 11ನೇ ಆವೃತ್ತಿಯ ದಿನಾಂಕಗಳ ಪ್ರಕಟಣೆಯ ಬಗ್ಗೆ ಮಾತನಾಡಿದ ಪ್ರೊ ಕಬಡ್ಡಿ ಲೀಗ್‌ ಆಯುಕ್ತ ಅನುಪಮ್‌ ಗೋಸ್ವಾಮಿ, ‘‘ಪಿಕೆಎಲ್‌ ಆವೃತ್ತಿಯ ಪ್ರಾರಂಭದ ದಿನಾಂಕ ಮತ್ತು ಸ್ಥಳಗಳನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. 10 ಋುತುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಪಿಕೆಎಲ್‌ 11ನೇ ಆವೃತ್ತಿ ಲೀಗ್‌ನ ನಿರಂತರ ಏರಿಕೆಯಲ್ಲಿಹೊಸ ಮೈಲಿಗಲ್ಲನ್ನು ಗುರುತಿಸುತ್ತದೆ. ಇದು ಭಾರತ ಮತ್ತು ವಿಶ್ವದಾದ್ಯಂತ ಕಬಡ್ಡಿಯ ಬೆಳವಣಿಗೆಯನ್ನು ಬಲಪಡಿಸುತ್ತದೆ,’’ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: ಬJasprit Bumrah : ಬಾಂಗ್ಲಾದೇಶ ಸರಣಿಗಾಗಿ ಅಭ್ಯಾಸ ಆರಂಭಿಸಿದ ಜಸ್‌ಪ್ರಿತ್‌ ಬುಮ್ರಾ, ಇಲ್ಲಿದೆ ವಿಡಿಯೊ

ಪ್ರೊ ಕಬಡ್ಡಿ ಲೀಗ್‌ ಸೀಸನ್‌ 11ರ ಹರಾಜು 2024ರ ಆಗಸ್ಟ್‌ 15ರಿಂದ 16ರವರೆಗೆ ಮುಂಬೈನಲ್ಲಿನಡೆಯಿತು, ಎಂಟು ಆಟಗಾರರು 1 ಕೋಟಿ ರೂ.ಗೆ ಮಾರಾಟವಾಗಿದ್ದಾರೆ, ಇದು ಲೀಗ್‌ ಇತಿಹಾಸದಲ್ಲಿಹೊಸ ದಾಖಲೆಯಾಗಿದೆ.

ಮಶಾಲ್‌ ಸ್ಪೋರ್ಟ್ಸ್ ಮತ್ತು ಡಿಸ್ನಿ ಸ್ಟಾರ್‌ ಪಿಕೆಎಲ್‌ ಅನ್ನು ಭಾರತದ ಅತ್ಯಂತ ಯಶಸ್ವಿ ಕ್ರೀಡಾ ಲೀಗ್‌ಗಳಲ್ಲಿಒಂದನ್ನಾಗಿ ನಿರ್ಮಿಸಿವೆ. ಅಮೆಚೂರ್‌ ಕಬಡ್ಡಿ ಫೆಡರೇಶನ್‌ ಆಫ್‌ ಇಂಡಿಯಾ (ಎಕೆಎಫ್‌ಐ)ಜತೆ ಮಂಜೂರಾದ ಒಪ್ಪಂದದ ಅಡಿಯಲ್ಲಿಮಶಾಲ್‌ ಆಯೋಜಿಸಿ ನಡೆಸುತ್ತಿರುವ ಪ್ರೊ ಕಬಡ್ಡಿ ಲೀಗ್‌ ಭಾರತದ ಸ್ಥಳೀಯ ಕ್ರೀಡೆಯಾದ ಕಬಡ್ಡಿ ಮತ್ತು ಅದರ ಕ್ರೀಡಾಪಟುಗಳ ಚಿತ್ರಣವನ್ನು ರಾಷ್ಟ್ರೀಯ ಮತ್ತು ವಿಶ್ವದಾದ್ಯಂತ ಪರಿವರ್ತಿಸಿದೆ. ಪಿಕೆಎಲ್‌ನಲ್ಲಿತಮ್ಮ ಅನೇಕ ಆಟಗಾರರ ಭಾಗವಹಿಸುವಿಕೆಯನ್ನು ನೋಡಿದ ನಂತರ, ಹಲವಾರು ಕಬಡ್ಡಿ ಆಡುವ ರಾಷ್ಟ್ರಗಳು ತಮ್ಮ ದೇಶೀಯ ಕಬಡ್ಡಿ ಕಾರ್ಯಕ್ರಮಗಳನ್ನು ಬಲಪಡಿಸಿವೆ.