Friday, 8th November 2024

ಡಿ.ಶಶಿಕುಮಾರರವರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಮಾನ್ವಿ: ತಾಲ್ಲೂಕು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟ ವತಿಯಿಂದ ಬೆಂಗಳೂರಿನಲ್ಲಿ ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ ರವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಸಂತೋಷರಾಣಿ ರವರ ಮೂಲಕ ತಾ.ಖಾ.ಶಿ.ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಹೆಚ್.ಶರ್ಫುದ್ದೀನ್ ಮನವಿ ಸಲ್ಲಿಸಿ ಮಾತನಾಡಿದ ಅವರು ಬೆಂಗಳೂರಿನಲ್ಲಿ ಬ್ಲಾಸಂಮ್ ಶಾಲೆಯ ಮುಖ್ಯಸ್ಥರು ಹಾಗೂ ರಾಜ್ಯ ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರರವರ ನಿವಾಸದ ಹತ್ತಿರ ಅವರ ಮೇಲೆ ಕೆಲವರು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆಯನ್ನು ನಡೆಸಿದ್ದು ತಪ್ಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ತಾ.ಖಾ.ಶಿ.ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳಾದ ರಾಜು ತಾಳಿಕೋಟೆ, ಶೇಖ ಫರೀದ್ ಉಮ್ರಿ, ನರಸಿಂಹ, ನಾಗೇಶ್ವರರಾವ್, ಶ್ರೀನಿವಾಸ್, ಪ್ರಕಾಶ, ಸೈಯ್ಯದ್ ಆಹ್ಮದ್ ಮತವಾಲ್, ಭೀಮರಾವ್, ಹಾರೂನ್, ಸಿದ್ದುಹಾಲಾಪೂರ, ಅಲೀಖಾನ್, ಸರೀತಾ ಜೈನ್,ಫಕೀರಪ್ಪವಲೇಕಾರ್ ಸೇರಿದಂತೆ ಇನ್ನಿತರರು ಇದ್ದರು.