ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಪಂಜಾಬ್ ವ್ಯವಹಾರಗಳ ಎಐಸಿಸಿ ಉಸ್ತುವಾರಿ ಹರೀಶ್ ಚೌಧರಿ, ಪಂಜಾಬ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಪರತಾಪ್ ಸಿಂಗ್, ಶಾಸಕರಾದ ಸುಖಪಾಲ್ ಖೈರಾ, ಟ್ರಿಪ್ ರಾಜಿಂದರ್ ಬಾಜ್ವಾ, ಸುಖ್ಜಿಂದರ್ ಸಿಂಗ್ ರಾಂಧವಾ, ಸುಖಬಿಂದರ್ ಸರ್ಕಾರಿಯಾ, ಸಂಸದರಾದ ಮನೀಶ್ ತಿವಾರಿ, ಜಸ್ಬೀರ್ ಡಿಂಪಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಕಾಂಗ್ರೆಸ್ ಮುಖಂಡ ಸಿದ್ದು ಪಕ್ಷದ ಕಚೇರಿಗೆ ಬಂದರೂ ವೇದಿಕೆ ಹಂಚಿಕೊಳ್ಳಲಿಲ್ಲ. ಪಂಜಾಬ್‍ನ ಕಾಂಗ್ರೆಸ್‍ನ ಮಾಜಿ ಮುಖ್ಯಸ್ಥ ಸುನಿಲ್ ಜಾಖರ್ ಅವರು ಸಮಾರಂಭದಲ್ಲಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ವಾರಿಂಗ್, ತನ್ನನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿದ್ದಕ್ಕಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ನಾಯಕತ್ವಕ್ಕೆ ಧನ್ಯವಾದ ಹೇಳಿದರು.
ಜವಾಬ್ದಾರಿಯನ್ನು ಹೊರುವ ಕಡೆಗೆ ಸಮರ್ಪಣೆ ಕೂಡ ಬಹಳ ಮುಖ್ಯ. ಜನರ ಅಭಿಪ್ರಾಯ ಪಡೆಯಲು ಜನರೊಂದಿಗೆ ಸಂವಾದಕ್ಕೂ ಒತ್ತು ನೀಡಬೇಕು. ನಾನು ಏಕವ್ಯಕ್ತಿ ತಂತ್ರಗಾರಿಕೆ ರೂಪಿಸಿದರೆ ಯಶಸ್ವಿಯಾಗಲು ಸಾಧ್ಯವಿಲ್ಲ. ಪಕ್ಷ ಬೆಳೆಯಬೇಕಾ ದರೆ ಸಾಮೂಹಿಕ ನಾಯಕತ್ವ ಬೇಕು. ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.