ಅನರ್ಹ ಶಾಸಕ ಆರ್.ಶಂಕರ್ ಬೆಂಬಲಿತ ಕಾರ್ಯಕರ್ತರು ಕಾಂಗ್ರೇಸ್ ಪಕ್ಷಕ್ಕೆೆ ಸೇರ್ಪಡೆಗೊಂಡರು.
ರಾಣೆಬೆನ್ನೂರ: ಈ ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್ ಅವರ ಕಾರ್ಯವೈಖರಿಗೆ ಬೇಸತ್ತು ನಗರಸಭಾ ಸದಸ್ಯರು ಸೇರಿದಂತೆ 200ಕ್ಕೂ ಅಧಿಕ ಕಾರ್ಯಕರ್ತರು ಮಂಗಳವಾರ ರಾತ್ರಿಿ ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ, ಹರಿಹರ ಶಾಸಕ ಎಸ್.ರಾಮಜ್ಜ, ಎಂಎಲ್ಸಿ ಜಬ್ಬಾಾರ್ ಸಾಹೇಬ, ರುದ್ರಪ್ಪ ಲಮಾಣಿ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಕಾಂಗ್ರೆೆಸ್ ಪಕ್ಷಕ್ಕೆೆ ಸೇರ್ಪಡೆಯಾದರು.
ಸೇರ್ಪಡೆಗೊಂಡ ಸರ್ವರಿಗೂ ಕೋಳಿವಾಡ ಪಕ್ಷದ ಶಾಲು ಹೊದಿಸಿ ಸ್ವಾಾಗತಿಸಿದರು. ಇದೇ ಸಂದರ್ಭದಲ್ಲಿ ಕೆಪಿಜೆಪಿ ಪಕ್ಷದ ನಗರಸಭೆ ಸದಸ್ಯರುಗಳಾದ ನೂರುಲ್ಲಾಾ ಖಾಜಿ, ಕೆ.ಎಂ.ಪಿ.ಮಣಿ ಮತ್ತು ನಿಂಗಪ್ಪ ಮಾತನಾಡಿ ಕಾಂಗ್ರೆೆಸ್ ಪಕ್ಷಕ್ಕೆೆ ಮುಂಬರುವ ಉಪ ಚುನಾವಣೆಯಲ್ಲಿ ಬಾಹ್ಯ ಬೆಂಬಲ ನೀಡುವುದಾಗ ವಿಶ್ವಾಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಕೋಳಿವಾಡರು ಎಂಬುದೊಂದು ದೈತ್ಯ ಶಕ್ತಿಿ. ರಾಣೇಬೆನ್ನೂರು ತಾಲೂಕಿನಲ್ಲಿ ಕಳೆದ 50 ವರ್ಷಗಳಿಂದ ರಾಜಕೀಯವಾಗಿ ಜೀವಂತವಾಗಿದ್ದಾಾರೆಂದರೆ ಅವರಲ್ಲಿರುವ ಒಳ್ಳಯತನ ಮತ್ತು ಅಭಿವೃದ್ಧಿಿ ಕೆಲಸಗಳು. ಯಾವುದೇ ಜಠಿಲ ಸಮಸ್ಯೆೆ ಇದ್ದರೂ ಕ್ಷಣಾರ್ಧದಲ್ಲಿ ಪರಿಹರಿಸುವ ಚಾಣಾಕ್ಯ. ಇಂಥ ನಾಯಕ ನಮಗೆ ಬೇಕಾಗಿದೆ ಎಂದರು.
ನಿಮ್ಮೆಲ್ಲರ ಸೇವೆ ಮಾಡಲಿಕ್ಕೆೆ ಮತ್ತೊೊಮ್ಮೆೆ ಅವಕಾಶ ಸಿಕ್ಕಿಿದೆ. ನೀವು ತೋರಿಸುತ್ತಿಿರುವ ಪ್ರೀತಿ, ವಿಶ್ವಾಾಸ ನನ್ನನ್ನು ಮೂಕವಿಸ್ಮಿಿತನನ್ನಾಾಗಿಸಿದೆ. ನೀವೆಲ್ಲರೂ ನನಗೆ ಬೆಂಬಲಿಸುತ್ತ ಬಂದಿರುವುದರಿಂದಲೇ ನಾನು ರಾಜಕೀಯವಾಗಿ ಇಂದಿಗೂ ಜೀವಂತವಾಗಿದ್ದೇನೆ. ಬೇರೆಯವರ ಕೈಯಲ್ಲಿ ನಮ್ಮ ಕ್ಷೇತ್ರವನ್ನು ಕೊಟ್ಟಿಿದ್ದರಿಂದ ಒಂದೂವರೆ ವರ್ಷ ತಾಲೂಕಿನ ಅಭಿವೃದ್ಧಿಿಗೆ ಹಿನ್ನಡೆಯಾಗಿದೆ.
ಕೆ.ಬಿ.ಕೋಳಿವಾಡ ಕಾಂಗ್ರೆೆಸ್ ಅಭ್ಯರ್ಥಿ