Friday, 27th September 2024

Relationship Tips: ನಿಮ್ಮ ಸಂಬಂಧವನ್ನು ಬಲಪಡಿಸಲು 2: 2: 2 ತಂತ್ರ ಬಳಸಿಕೊಳ್ಳಿ!

Relationship Tips

ಸಂಬಂಧ(Relationship Tips)ದಲ್ಲಿ ಬರೀ ಪ್ರೀತಿ ಮಾತ್ರ ಇರುವುದಿಲ್ಲ. ಅದರ ಜೊತೆಗೆ ಜಗಳ, ಕೋಪ, ಮನಸ್ತಾಪಗಳು ಕೂಡ ಇರುತ್ತವೆ. ಆಗ ಮಾತ್ರ ಆ ಸಂಬಂಧ ಗಟ್ಟಿಯಾಗಲು ಸಾಧ್ಯ. ಸಂಬಂಧದಲ್ಲಿ ಜಗಳಗಳು ಬಂದಾಗ ಕೆಲವರು ಅದನ್ನು ಸರಿಪಡಿಸಿಕೊಂಡು ಹೋಗುತ್ತಾರೆ. ಆದರೆ ಇನ್ನೂ ಕೆಲವರು ಅದನ್ನೇ ದೊಡ್ಡದು ಮಾಡಿ ಸಂಬಂಧವನ್ನೇ ಮುರಿದುಕೊಂಡು ಹೋಗುತ್ತಾರೆ. ಇದರಿಂದ ಇಡೀ ಜೀವನ ಹಾಳಾಗುತ್ತದೆ. ಹಾಗಾಗಿ ಸಂಬಂಧದಲ್ಲಿ ಯಾವುದೇ ಸಮಸ್ಯೆಗಳು ಎದುರಾಗದೆ ಸಂಬಂಧ ದೀರ್ಘಕಾಲದವರೆಗೆ ಗಟ್ಟಿಯಾಗಿ ಇರಲು 2: 2: 2 ತಂತ್ರವನ್ನು ಅನುಸರಿಸಿ. ಹಾಗಾದ್ರೆ ಈ 2: 2: 2 ತಂತ್ರದ ಬಗ್ಗೆ ತಿಳಿದುಕೊಳ್ಳಿ.

Relationship Tips

ಸಂಬಂಧದಲ್ಲಿ 2:2:2 ನಿಯಮವನ್ನು ಅನುಸರಿಸಿದರೆ ದಂಪತಿಗೆ ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಕೆಲಸದ ಒತ್ತಡ ಮತ್ತು ಸಂಗಾತಿಯ ಬೇಡಿಕೆಗಳಂತಹ ಜೀವನದ ಜಂಜಾಟದಲ್ಲಿ ಸಿಲುಕಿದವರು 2:2:2 ನಿಯಮವನ್ನು ಅನುಸರಿಸಿದರೆ ಕೆಲಸದ ಜೊತೆಗೆ ಸಂಗಾತಿಗೂ ಸಮಯ ನೀಡಬಹುದು. 2:2:2 ನಿಯಮವು ಪ್ರತಿ ಎರಡು ವಾರಗಳಿಗೊಮ್ಮೆ ನಿಮ್ಮ ಸಂಗಾತಿಯೊಂದಿಗೆ ಡೇಟಿಂಗ್‌ಗೆ ಹೋಗುವುದು, ಪ್ರತಿ ಎರಡು ತಿಂಗಳಿಗೊಮ್ಮೆ ಒಟ್ಟಿಗೆ ವಾರಾಂತ್ಯದ ಪ್ರವಾಸಕ್ಕೆ ಹೋಗುವುದು ಮತ್ತು ಪ್ರತಿ ಎರಡು ವರ್ಷಗಳಿಗೊಮ್ಮೆ ದೀರ್ಘಕಾಲದ ರಜೆಯನ್ನು ತೆಗೆದುಕೊಳ್ಳುವುದು ಆಗಿರುತ್ತದೆ.

Relationship Tips

ಪ್ರತಿ ಎರಡು ವಾರಗಳಿಗೊಮ್ಮೆ ಸಂಗಾತಿಯೊಂದಿಗೆ ಡೇಟಿಂಗ್ ಹೋದರೆ ಸಂಗಾತಿಗೆ ಸಮಯ ನೀಡಿದಂತಾಗುತ್ತದೆ ಮತ್ತು ಅವರು ಖುಷಿಯಾಗಿರುತ್ತಾರೆ. ಅಲ್ಲದೇ ನೀವಿಬ್ಬರು ಸಂತೋಷದ ಕ್ಷಣಗಳನ್ನು ಕಳೆಯಲು ಸಾಧ್ಯವಾಗುತ್ತದೆ. ಪ್ರತಿಬಾರಿ ಡೇಟಿಂಗ್‍ಗೆ ಹೋಗುವುದರಿಂದ ದಂಪತಿಯ ನಡುವೆ ಸಂವಹನ ಏರ್ಪಟ್ಟು ಅವರು ತಮ್ಮ ತಮ್ಮ ಅನುಭವವನನ್ನು ಹಂಚಿಕೊಳ್ಳಲು ಸಮಯ ಸಿಗುತ್ತದೆ.

ಪ್ರತಿ ಎರಡು ತಿಂಗಳಿಗೊಮ್ಮೆ ವಾರಾಂತ್ಯದ ರಜಾದಿನಗಳಲ್ಲಿ ಸಂಗಾತಿಯ ಜೊತೆಗೆ ಇಷ್ಟವಾದ ಸ್ಥಳಕ್ಕೆ ಪ್ರವಾಸಕ್ಕೆ ಹೋಗಿ. ಇದರಿಂದ ದಂಪತಿಗೆ ದೈನಂದಿನ ಜೀವನದ ದಿನಚರಿ ಮತ್ತು ಒತ್ತಡಗಳಿಂದ ಪಾರಾಗಲು ಸಹಾಯ ಮಾಡುತ್ತದೆ. ಈ ಸಣ್ಣ ಪ್ರವಾಸಗಳು ಸಂಗಾತಿಗೆ ಹೊಸ ಸ್ಥಳಗಳನ್ನು ನೋಡಲು, ವಿಶ್ರಾಂತಿ ಪಡೆಯಲು ಮತ್ತು ಉಲ್ಲಾಸಕರ ವಾತಾವರಣದಲ್ಲಿ ಸಂಗಾತಿಯ ಜೊತೆಗೆ ಕಳೆದ ಆನಂದ ಸಿಗುತ್ತದೆ. ಇದರಿಂದ ಅವರ ಮನಸ್ಸು ಸಂತೋಷದಿಂದ ಇರುತ್ತದೆ.

Relationship Tips

ಪ್ರತಿ ಎರಡು ವರ್ಷಗಳಿಗೊಮ್ಮೆ ದೀರ್ಘ ರಜೆಯನ್ನು ತೆಗೆದುಕೊಳ್ಳುವುದು. ಇದರಿಂದ ನೀವು ನಿಮ್ಮ ಸಂಗಾತಿಯ ಜೊತೆಗೆ ಹೆಚ್ಚು ಸಮಯವನ್ನು ಕಳೆಯಬಹುದಾಗಿರುತ್ತದೆ. ಈ ರಜಾದಿನಗಳಲ್ಲಿ ನೀವು ಹೊಸ ತಾಣಗಳನ್ನು ಅನ್ವೇಷಿಸಲು, ಮತ್ತು ದೈನಂದಿನ ಜೀವನದ ಒತ್ತಡಗಳಿಂದ ದೂರವಿರುವ ಮೂಲಕ ನಿಮಗೆ ವಿಶ್ರಾಂತಿ ಸಿಗುತ್ತದೆ ಮತ್ತು ಸಂಗಾತಿಯ ಜೊತೆಗೆ ಖುಷಿಯಿಂದ ಸಮಯ ಕಳೆಯಬಹುದು.

ಇದನ್ನೂ ಓದಿ:ಬ್ರಾ ಧರಿಸಿ ‌ನಡುರಸ್ತೆಯಲ್ಲಿ ತಿರುಗಾಡಿದ ಯುವತಿ; ಎದೆಗಾರಿಕೆ ಅಂದರೆ ಇದು ಎಂದ ನೆಟ್ಟಿಗರು!

ಈ ರೀತಿಯಲ್ಲಿ 2:2:2 ನಿಯಮವು ದಂಪತಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರಿಂದ ದಂಪತಿ ತಮ್ಮ ವೈವಾಹಿಕ ಜೀವನದಲ್ಲಿ ರೊಮ್ಯಾಂಟಿಕ್ ಆಗಿರಲು ಸಹಾಯ ಮಾಡುತ್ತದೆ. ಹಾಗೆಯೇ ಸಂಗಾತಿ ಹಾಗೂ ಕುಟುಂಬಕ್ಕೆ ಸಮಯ ನೀಡಿದಂತಾಗುತ್ತದೆ. ಕೆಲಸದ ಒತ್ತಡದಿಂದ ಕೂಡ ವಿಶ್ರಾಂತಿ ಸಿಗುತ್ತದೆ. ಇದರಿಂದ ಜೀವನದಲ್ಲಿ ಉತ್ಸಾಹ ಹೆಚ್ಚಾಗುತ್ತದೆ.