ರಾಯಚೂರು: ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಾನು ಲೋಕಸಭಾ ಚುನಾವಣೆಗೆ ನಿಂತಾಗ ಈ ಕ್ಷೇತ್ರದ ಜನರು ನನಗೆ ಸಹಕರಿಸಲಿಲ್ಲ ಈ ಬಾರಿ ರಾಜಾ ಅಮರೇಶ್ವರ ನಾಯಕ ಅವರನ್ನು ಗೆಲ್ಲಿಸಿದ್ರೆ ಪ್ರಧಾನಿ ಮಂತ್ರಿ ಅವರ ಕೈ ಕಾಲು ಆದ್ರೂ ಇಡಿದು ಜಿಲ್ಲೆಗೆ ಏಮ್ಸ್ ತರ್ತಿನಿ ಇಲ್ಲದಿದ್ದರೆ ರಾಜಕೀಯ ಸನ್ಯಾಸವನ್ನು ಪಡೆಯುತ್ತೇನೆ ಎಂದು ಘೋಷಣೆ ಮಾಡಿದ್ದರು.ಅವರಿಗೆ ಮಾನ,ಮರ್ಯಾದೆ ಏನಾದ್ರೂ ಇದ್ದರೆ ನಾಳೇನೇ ಜನಸಂಕಲ್ಪ ಯಾತ್ರೆಯಲ್ಲಿ ರಾಜೀನಾಮೆ ನೀಡಿ ಶಾಸ್ವಾತ ರಾಜಕೀಯ ಸನ್ಯಾಸ ವನ್ನು ತೆಗೆದುಕೊಳ್ಳಬೇಕು ಎಂದು ಏಮ್ಸ್ ಮಂಜೂರಾತಿ ಹೋರಾಟ ಸಮಿತಿ ಸಂಚಾಲಕ ಡಾ.ಬಸವರಾಜ ಕಳಸ ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನಾಳೆ ನಡೆಯುವ ಗಿಲ್ಲೇಸೂ ಗೂರು ಜನ ಸಂಕಲ್ಪ ಸಭೆಯಲ್ಲಿ ಜನರ ಮಧ್ಯೆ ರಾಜೀನಾಮೆ ಘೋಷಣೆ ಮಾಡಲಿ, ಅಷ್ಟಾದರೆ ಸಾಲದು ರಾಜಕೀಯ ಸನ್ಯಾಸ ಸ್ವೀಕರಿಸದೇ ಹೋದರೆ ಅಕ್ಟೋಬರ್ ೧೫ ಕ್ಕೆ ಅರಕೇರಾಕ್ಕೆ ಗ್ರಾಮ ವಾಸ್ತವ್ಯದ ಹೆಸರಲ್ಲಿ ಬಿಜೆಪಿ ಜಾತ್ರೆ ಮಾಡಲು ಬರುವ ಆರ್. ಅಶೋಕ್ ಮತ್ತು ಶಿವನಗೌಡ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ. ಬದ್ದತೆ ಇಲ್ಲದವರ ಅವಶ್ಯಕತೆ ನಮ್ಮ ಜನರಿಗಿಲ್ಲ. ೧೪ ರಿಂದ ಅರಕೇರಾಕ್ಕೆ ಪಾದಯಾತ್ರೆ ಆರಂಭಿಸುತ್ತೇವೆ. ೧೧ ರಂದು ಗಿಲ್ಲೇಸುಗೂರಿಗೆ ತೆರಳಿ ಈ ಹಿಂದೆ ಏಮ್ಸ್ ಭರವಸೆ ನೀಡಿದ್ದ ಯಡಿಯೂರಪ್ಪ ಮತ್ತು ಸುಳ್ಳು ಭರವಸೆ ನೀಡಿ ಹೋದ ಸಿಎಂ ಬೊಮ್ಮಾಯಿಗೆ ಭೇಟಿಯಾಗಿ ಸಚಿವ ಸಂಪುಟದಲ್ಲಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲು ಆಗ್ರಹಿಸುವುದಾಗಿ ಹೇಳಿದರು.
ಮಾನದಂಡ, ಷರತ್ತುಗಳನ್ನು ಈಡೇರಿಸುವ ಜವಾಬ್ದಾರಿ ಸರ್ಕಾರದ್ದು ನಮ್ಮದಲ್ಲ. ಬದ್ದತೆ ಪ್ರಮಾಣ ಪತ್ರ ನೀಡಿ, ಬೇರೆ ರಾಜ್ಯಗಳಲ್ಲಿಲ್ಲದ ಷರತ್ತು ರಾಯಚೂರಿಗೆ ಯಾಕೆ ಎಂದು ಪ್ರಶ್ನಿಸಿದರು.
ಸಂಸದರು ನಿಸ್ಸಾಹಾಯಕರು ಅಂತರವನ್ನು ಗೆಲ್ಲಿಸಿದ ನಾವು ನತದೃಷ್ಠರು. ಅವರ ಗೆಲ್ಲಿಸಲು ಸುಳ್ಳು ಹೇಳಿದ ಶಿವನಗೌಡರೊಬ್ಬ ಪೌರುಷತನದ ಮಾತನಾಡುವ ಬದ್ದತೆ ಇಲ್ಲದ ರಾಜಕಾರಣಿ ರಾಜೀನಾಮೆ ಕೊಟ್ಟು ಸನ್ಯಾಸ ಸ್ವೀಕರಿಸಿ ಬೇರೆಯವರ ಗಂಡಸುತನದ ಬಗ್ಗೆ ಮಾತನಾಡುವ ಮುನ್ನ ತಮ್ಮ ಗಂಡಸುತನ ತೋರಿಸಲಿ ಎಂದು ವಾಗ್ದಾಳಿ ನಡೆಸಿದರು.
ಸದನದಲ್ಲಿ ಏಮ್ಸ್ ಬಗ್ಗೆ ಧ್ಚನಿ ಎತ್ತಿದ ಶಾಸಕ ಬಸನಗೌಡ ದದ್ದಲ್ ಗೆ ಜಿಲ್ಲೆಯ ಬದ್ದತೆ ಇದೆ ಉಳಿದವರು ಯಾರೂ ತುಟಿ ಬಿಚ್ಚಲಿಲ್ಲ, ಬೆಂಬಲಿಸಲು ಇಲ್ಲ. ಉಳಿದ ಆರು ಜನ ಶಾಸಕರಿಗೆ ಚುನಾವಣೆ ಮಾತ್ರ ಮುಖ್ಯವಾಗಿದೆ. ಜನ ಸಂಪರ್ಕ ನಾಟಕ ಶುರು ಮಾಡಿದ್ದಾರೆ. ಜನ ಅವರ ನಾಟಕ ನೋಡ್ತಾರೆ ಪಾಠ ಕಲಿಸ್ತಾರೆ ಎಂದರು.
ಅಶೋಕ ಕುಮಾರ ಜೈನ್, ಎಸ್. ಮಾರೆಪ್ಪ, ಚಾಂದ್ ಪಾಷ, ಬಸವರಾಜ ಮಿಮಿಕ್ರಿ ಇದ್ದರು.