ಚಿಕ್ಕನಾಯಕನಹಳ್ಳಿ : ಪೋಲೀಸ್ ಕಾನ್ಸ್ಟೇಬಲ್ ಮನೆಗೆ ಹಗಲಿನಲ್ಲೇ ನುಗ್ಗಿ ಕನ್ನ ಹಾಕಿರುವ ಖತರ್ನಾಕ್ ಖದೀಮನೊಬ್ಬ ೧.೨೦ ಲಕ್ಷ ಹಣ ದೋಚಿಕೊಂಡು ಹೋಗಿರುವ ಘಟನೆ ಚಿಕ್ಕನಾಯಕನಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ಸಮೀಪ ಸಿದ್ದರಾಮನಗರಲ್ಲಿರುವ ಪೋಲೀಸ್ ಕಾನ್ಸ್ಟೇಬಲ್ ಮನೆಗೆ ಮಧ್ಯಾಹ್ನ ಸುಮಾರು ೧೨ ಗಂಟೆಗೆ ನುಗ್ಗಿದ ಕಳ್ಳ ೧.೨೦ ಲಕ್ಷ ನಗದು ದೋಚಿ ಪರಾರಿಯಾಗಿದ್ದಾನೆ. ಮನೆಯ ಮಾಲಿಕ ತುಮಕೂರಿನ ಲೋಕಾಯುಕ್ತ ಕಚೇರಿಯಲ್ಲಿ ಪೋಲೀಸ್ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ತಾಯಿ ಮತ್ತು ತಮ್ಮ ಸಂಬAಧಿಗಳ ಮನೆಗೆ ತೆರಳಿದ್ದರು.
ಮಧ್ಯಾಹ್ನ ೨.೩೦ ಸುಮಾರಿಗೆ ವಾಪಸ್ ಮನೆಗೆ ಬಂದು ನೋಡಿದಾಗ ಬೀಗ ಮುರಿದಿದ್ದು ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ಮನೆಯಲ್ಲಿ ಕಳ್ಳತನವಾಗಿರುವುದು ಅರಿವಿಗೆ ಬರುತ್ತಿದ್ದಂತೆಯೇ ದೂರು ದಾಖಲಿಸಿದ್ದಾರೆ.