Thursday, 12th December 2024

Sexual Pleasure: ಸ್ತನಗಳ ಸ್ಪರ್ಶದಿಂದ ಮಹಿಳೆಯರಿಗೆ ನಿಜಕ್ಕೂ ಲೈಂಗಿಕ ಆನಂದ ಸಿಗುತ್ತದೆಯೆ? ಸಮೀಕ್ಷೆ ಹೇಳಿದ್ದೇನು?

Sexual Pleasure

ಮಹಿಳೆಯರ ಸ್ತನಗಳು (Sexual Pleasure) ಕಾಮೋದ್ರೇಕಗೊಳಿಸುವ ಅಂಗಗಳಲ್ಲಿ ಒಂದು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಸಾಮಾನ್ಯವಾಗಿ ಮಹಿಳೆಯರ ಸ್ತನ ಭಾಗವನ್ನು ಸ್ಪರ್ಶಿಸಿದಾಗ ಅವರು ಲೈಂಗಿಕವಾಗಿ ಉದ್ರೇಕಗೊಳ್ಳಲು ಶುರು ಮಾಡುತ್ತಾರೆ. ಇದನ್ನು ಬಹಳ ಹಿಂದೆ ಕಾಳಿದಾಸ ಬರೆದ ಮಹಾಕಾವ್ಯದಲ್ಲಿ ಹಾಗೂ ನಾಯಕ ಮತ್ತು ನಾಯಕಿಯರ ಲೈಂಗಿಕ ಕ್ರಿಯೆಯ ಬಗ್ಗೆ ವಿವರಿಸುವ ಸಂಸ್ಕೃತ ಮಹಾಕಾವ್ಯಗಳಲ್ಲಿ ಕೂಡ ತಿಳಿಸಲಾಗಿತ್ತು. ಅಲ್ಲದೇ ಸ್ತ್ರೀ ದೇಹದ ಈ ಭಾಗವು ಪುರುಷರನ್ನು ಕೂಡ ಲೈಂಗಿಕತೆಗೆ ಉತ್ತೇಜಿಸುತ್ತದೆ ಎಂಬುದೂ ಸಾಮಾನ್ಯ ಪರಿಕಲ್ಪನೆ. ಆದರೆ ಮಹಿಳೆಯರು ನಿಜವಾಗಿಯೂ ಸ್ತನ ಸ್ಪರ್ಶದಿಂದ ಲೈಂಗಿಕ ಆನಂದವನ್ನು ಅನುಭವಿಸುತ್ತಾರೆಯೇ ಎಂಬ ಪ್ರಶ್ನೆ ಇನ್ನೂ ಹಲವರಿಗಿದೆ.

ಹಾಗಾಗಿ ಈ ಪ್ರಶ್ನೆಗೆ ಉತ್ತರಿಸಲು, ಸಂಸ್ಕೃತ ಮಹಾಕಾವ್ಯಗಳ ಯುಗದಿಂದ ನೇರವಾಗಿ 1960ರ ದಶಕಗಳಿಗೆ ಬಂದು ಹೇಳುವುದಾದರೆ ಈ ಸಮಯದಲ್ಲಿ, ಡಾ. ವಿಲಿಯಂ ಮಾಸ್ಟರ್ಸ್ ಮತ್ತು ವರ್ಜೀನಿಯಾ ಜಾನ್ಸನ್ ಒಂದು ಸಮೀಕ್ಷೆಯನ್ನು ನಡೆಸಿದ್ದರು. ಸ್ತನಗಳು ಸ್ತ್ರೀ ಲೈಂಗಿಕ ಆನಂದವನ್ನು ಹೆಚ್ಚಿಸುತ್ತದೆಯೇ? ಹಾಗಿದ್ದರೆ ಅದರ ಹಿಂದಿನ ಶಾರೀರಿಕ ರಹಸ್ಯಗಳು ಯಾವುವು ಎಂಬುದನ್ನು ಅರ್ಥಮಾಡಿಕೊಳ್ಳಲು ಅವರು ಪ್ರಯತ್ನಿಸಿದ್ದರು.

ಈ ಬಗ್ಗೆ ಸಮೀಕ್ಷೆ ಕೂಡ ನಡೆಸಿದಾಗ ಸಮೀಕ್ಷೆಯ ಕೊನೆಯಲ್ಲಿ, ಲೈಂಗಿಕ ಪ್ರಚೋದನೆಯ ಸಮಯದಲ್ಲಿ, ಸ್ತನಗಳ ಗಾತ್ರ ಮತ್ತು ಮೊಲೆತೊಟ್ಟುಗಳ ಸುತ್ತಲಿನ ವೃತ್ತಾಕಾರದ ಪ್ರದೇಶವು ಉಬ್ಬುತ್ತದೆ ಎಂದು ಅವರು ವರದಿ ಮಾಡಿದ್ದರು. ಯೋನಿ ಆನಂದದ ಸಮಯದಲ್ಲಿ ಮೊಲೆತೊಟ್ಟುಗಳು ಗಟ್ಟಿಯಾಗುತ್ತವೆ ಎಂಬುದಾಗಿಯೂ ತಿಳಿಸಿದ್ದರು. ಅಲ್ಲದೇ ಸ್ತನ್ಯಪಾನದ ವಿಷಯದ ಬಗ್ಗೆ ತಿಳಿಸುತ್ತಾ ಈ ವೇಳೆ ಮೆದುಳಿನಲ್ಲಿ ಆಕ್ಸಿಟೋಸಿನ್ ಹಾರ್ಮೋನ್ ಸ್ರವಿಸುವುದರಿಂದ ಸ್ತನ್ಯಪಾನವು ಮಹಿಳೆಯರನ್ನು ಲೈಂಗಿಕ ಆನಂದದ ಉತ್ತುಂಗಕ್ಕೆ ಕರೆದೊಯ್ಯುತ್ತದೆ ಎಂದು ಸಮೀಕ್ಷೆಯಲ್ಲಿ ಕಂಡುಹಿಡಿಯಲಾಗಿತ್ತು. ಇದು ಸಂಭೋಗದ ಸಮಯದಲ್ಲಿಯೂ ಸಂಭವಿಸುತ್ತದೆ ಎಂದು ದಾಖಲಿಸಲಾಗಿತ್ತು.

ಆದರೆ 1983ರಲ್ಲಿ 121 ಮಹಿಳೆಯರ ಮೇಲೆ ಅವರು ಮತ್ತೊಂದು ಸಮೀಕ್ಷೆಯನ್ನು ನಡೆಸಿದ್ದರು. ಆದರೆ ಅದರ ಫಲಿತಾಂಶಗಳು ಹಿಂದಿನದಕ್ಕಿಂತ ವಿರುದ್ಧವಾಗಿದ್ದವು. ಈ ಸಮೀಕ್ಷೆಯಲ್ಲಿ, 62.65% ಸ್ತನ್ಯಪಾನ ಮಾಡುವ ಮಹಿಳೆಯರು ಸ್ತನ್ಯಪಾನದ ಸಮಯದಲ್ಲಿ ಲೈಂಗಿಕ ಉದ್ರೇಕ ಅನುಭವಿಸಲಿಲ್ಲ ಎಂದು ಅವರು ದಾಖಲಿಸಿದ್ದರು. ಹೆರಿಗೆಯ ನಂತರ, ಮಹಿಳೆಯರು ಸ್ವಲ್ಪ ಸಮಯದವರೆಗೆ ಲೈಂಗಿಕ ವಿಚಾರಗಳಲ್ಲಿ ಆಸಕ್ತಿ ಹೊಂದಿರುವುದಿಲ್ಲ ಎಂದು ಅನೇಕರು ನಂಬುತ್ತಾರೆ, ಈ ವಿಚಾರ ಇದಕ್ಕೆ ಕಾರಣವಾಗಿರಬಹುದು. ಆದರೆ, ಅವರಲ್ಲಿ 11.3% ಜನರು ಸ್ತನ್ಯಪಾನದ ವೇಳೆ ಪ್ರಚೋದನೆಯನ್ನು ಅನುಭವಿಸಿದ್ದಾರೆ ಎಂದು ಹೇಳಿದ್ದರು.

ಆದರೆ 2006ರಲ್ಲಿ, 153 ಮಹಿಳೆಯರ ಮೇಲೆ ಈ ಸಮೀಕ್ಷೆ ನಡೆಸಲಾಗಿದ್ದು, ಈ ಬಾರಿ ಸಂಭೋಗದ ಸಮಯದಲ್ಲಿ, ಪುರುಷರು ತಮ್ಮ ಸ್ತನಗಳನ್ನು ಸ್ಪರ್ಶಿಸಿದಾಗ ಲೈಂಗಿಕವಾಗಿ ಪ್ರಚೋದನೆಗೊಂಡಿರುವುದಾಗಿ 82% ಮಹಿಳೆಯರು ಸಂಶೋಧಕರಿಗೆ ಹೇಳಿದ್ದಾರೆ. 60% ಪುರುಷರು ತಮ್ಮ ಸ್ತನಗಳನ್ನು ಸ್ಪರ್ಶಿಸಲು ಬಯಸುತ್ತಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಜ್ವರದಿಂದ ಬಳಲುತ್ತಿದ್ದೀರಾ; ಹಾಗಾದ್ರೆ ಬೇಗ ಚೇತರಿಸಿಕೊಳ್ಳಲು ಈ 7 ಆಹಾರ ಸೇವಿಸಿ

ಅಂತಿಮವಾಗಿ, ಒಬ್ಬರು ಲೈಂಗಿಕ ಆನಂದವನ್ನು ಹೇಗೆ ಅನುಭವಿಸುತ್ತಾರೆ ಎಂಬುದು ವೈಯಕ್ತಿಕ ವಿಷಯವಾಗಿದೆ. ಸಾರ್ವತ್ರಿಕ ತತ್ವಗಳು ಇಲ್ಲಿ ಅನ್ವಯಿಸುವುದಿಲ್ಲ. ಆದ್ದರಿಂದ ಸ್ತನ ಸ್ಪರ್ಶದಿಂದ ಆನಂದವನ್ನು ಕಂಡುಕೊಳ್ಳುವವರು ಲೈಂಗಿಕತೆಯಲ್ಲಿ ಆಸಕ್ತಿಯನ್ನು ಹೊಂದಿರುವವರಾಗಿರುತ್ತಾರೆ. ಆದರೆ ಈ ಬಗ್ಗೆ ಆಸಕ್ತಿ ಇಲ್ಲದವರು ಸ್ತನಗಳನ್ನು ಸ್ಪರ್ಶಿಸಿದಾಗ ಪುರುಷರ ಮೇಲೆ ಕೋಪಗೊಳ್ಳಬಹುದು ಎಂಬುದಾಗಿ ಸಮೀಕ್ಷೆ ನಡೆಸಿದವರು ಟಿಪ್ಪಣಿ ಮಾಡಿದ್ದಾರೆ.