Thursday, 21st November 2024

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ಯಾರಂಟಿ ಬಜೆಟ್ ಅಂಶಗಳು….

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ರೂಪಿಸಿರುವ ಗ್ಯಾರಂಟಿ ಯೋಜನೆಗಳು ಚುನಾವಣಾ ಗಿಮಿಕ್​ಗಳಲ್ಲ.

ಬಡವರ ಏಳಿಗೆಗಾಗಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ. 

ಬಜೆಟ್‌ನ ಪ್ರಮುಖಾಂಶಗಳು

ಗೃಹಲಕ್ಷ್ಮೀ ಯೋಜನೆಗೆ ೨೮ ಸಾವಿರದ ೬೦೮ ಕೋಟಿ ಮೀಸಲು
ಗಣಿ ಬಾಧಿತ ಪ್ರದೇಶಗಳಲ್ಲಿ ಮೀನುಗಾರಿಕೆ ಉತ್ತೇಜನ
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆ
೭೬ ಗೋದಾಮುಗಳ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್
ಬೆಂಗಳೂರಲ್ಲಿ ೨೩೩ ಕೋಟಿ ರೂ ವೆಚ್ಚದಲ್ಲಿ ವಿಜ್ಞಾನ ನಗರ
ಶೇ.೬೦ ರಷ್ಟು ಕನ್ನಡ ಬಳಕೆ ಮಾಡೋದು ಕಡ್ಡಾಯ ಅನುಷ್ಠಾನ
ಶಿಕ್ಷಣದ ಸಾಮರ್ಥ್ಯ ಅಭಿವೃದ್ದಿಗೆ ೧೦ ಕೋಟಿ ಅನುದಾನ
೨೦ ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ
೫೫೫೦ ಕೋಟಿ ವೆಚ್ಚದಲ್ಲಿ BWSSB ಯೋಜನೆ
ಮಾರುಕಟ್ಟೆ ಸಮಿತಿಗಳ ಡಿಜಿಟಲೈಸ್‌ಗೆ ೧೦ ಕೋಟಿ
೧೦ ಪಾಲಿಕೆಗಳಲ್ಲೂ ರಾತ್ರಿ ೧೦ ಗಂಟೆಯವರೆಗೆ ವ್ಯಾಪಾರ
ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗೆ ಕಟ್ಟಡ
ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯೂವಿಟಿ ಸೌಲಭ್ಯ
ರೈತ ಮಹಿಳೆಯರಿಗೆ ಹೈನುಗಾರಿಕೆಗೆ ಪ್ರೋತ್ಸಾಹ
ಕರಾವಳಿಯ ಮೀನುಗಾರಿಕೆಗೆ ಮತ್ಸ್ಯ ಆಶಾ ಕಿರಣ ಯೋಜನೆ
ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನಲ್ಲಿ ಟನಲ್‌ ನಿರ್ಮಾಣ
ಅಂಗನವಾಡಿಗೆ ಅಭಿವೃದ್ದಿಗೆ ೩೦೦ ರೂ ಕೋಟಿ ಮೀಸಲು
ಶಾಲಾ-ಕಾಲೇಜು ಕೊಠಡಿಗಳ ನಿರ್ಮಾಣಕ್ಕೆ ೮೫೦ ಕೋಟಿ
ಮೇ ನಲ್ಲಿ ಕಾವೇರಿ ಹಂತ- ೫ ಕಾರ್ಯಾರಂಭ
ರಾಯಚೂರಿನಲ್ಲಿ ಹೈಟೆಕ್ ಒಣ ಮೆಣಸಿನಕಾಯಿ ಮಾರ್ಕೆಟ್
೫೦ ಸಂಖ್ಯಾಬಲವುಳ್ಳ ೫೦ ಮೊರಾರ್ಜಿ ದೇಸಾಯಿ ವಸತಿ ಶಾಲೆ
೬-೭ ನೇ ತರಗತಿ ವಿದ್ಯಾರ್ಥಿಗಳಿಗೆ ಮರು ಸಿಂಚನಾ
ಮೆಟ್ರಿಕ್ ನಂತರದ ಬಾಲಕ-ಬಾಲಕಿಯರಿಗೆ ಹಾಸ್ಟೆಲ್
ಹತ್ತು ಪ್ರವಾಸಿ ತಾಣಗಳಲ್ಲಿ ಕಾರ್‌ ರೋಪ್ ವೇ
ನೂರು ಹೊಸ ಮೌಲಾನಾ ಆಜಾದ್ ಶಾಲೆಗಳ ನಿರ್ಮಾಣ
೨೦೨೫ರೊಳಗೆ ೪೪೦ ಕಿಮೀ ಮೆಟ್ರೋ ಮಾರ್ಗ ಸೇರ್ಪಡೆ
ರಾಜ್ಯದ ಸರ್ಕಾರಿ ಶಾಲೆ, ಕಾಲೇಜುಗಳಿಗೆ ಫ್ರೀ ಕರೆಂಟ್