Tuesday, 12th November 2024

ಕೇರಳದ ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ಬಿಡುಗಡೆ

ಖನೌ: ಕೇರಳದ ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ಅವರು ಲಖನೌದ ಜಿಲ್ಲಾ ಕಾರಾಗೃಹದಿಂದ ಜಾಮೀನಿನ ಮೇಲೆ ಗುರುವಾರ ಬಿಡುಗಡೆಯಾದರು.

ಈ ವೇಳೆ ಕಪ್ಪನ್ ಪತ್ನಿ, ಮಗ ಹಾಗೂ ಸ್ನೇಹಿತರು ಅವರನ್ನು ಬರಮಾಡಿಕೊಂಡರು. ಇದೇ ವೇಳೆ ಕಪ್ಪನ್‌ ಅವರ ವಕೀಲ ಮೊಹಮ್ಮದ್ ಧಾನೀಶ್ ಕೆ.ಎಸ್. ಹಾಜರಿದ್ದರು.

2020ರ ಅಕ್ಟೋಬರ್‌ನಲ್ಲಿ ಗ್ಯಾಂಗ್‌ ರೇಪ್ ನಡೆದಿದ್ದ ಹಾತ್ರಾಸ್‌ಗೆ ತೆರಳುತ್ತಿದ್ದಾಗ ಉತ್ತರ ಪ್ರದೇಶ ಪೊಲೀಸರು ಕಪ್ಪನ್‌ ಅವರನ್ನು ಬಂಧಿಸಿದ್ದರು. ಕಪ್ಪನ್‌ ಅವರನ್ನು ಲಖನೌನ ಜಿಲ್ಲಾ ಕಾರಾಗೃಹದಲ್ಲಿರಿಸಲಾಗಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಪ್ಪನ್ ಅವರು, ‘ನಾನು ಹೋರಾಡಿದೆ’ ಎಂದು ಭಾವುಕರಾದರು.

ಹಾತ್ರಾಸ್‌ ನಲ್ಲಿ ದಲಿತ ಮಹಿಳೆ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಕುರಿತು ವರದಿ ಮಾಡಲು ಸಿದ್ದೀಕ್‌ ಕಪ್ಪನ್‌ ತೆರಳಿದ್ದರು. ಈ ವೇಳೆ ಉತ್ತರ ಪ್ರದೇಶ ಪೊಲೀಸರು, ಕಪ್ಪನ್‌ ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದಾರೆ ಎಂದು 2020ರ ಅಕ್ಟೋಬರ್‌ನಲ್ಲಿ ಬಂಧಿಸಿ ಜೈಲಿಗಟ್ಟಿದ್ದರು. ಅವರು 28 ತಿಂಗಳು ಜೈಲಿನಲ್ಲಿದ್ದರು.