Sunday, 15th December 2024

ಸಿಇಟಿ ವಿರುದ್ಧ ನೀಟ್, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ!

ಇಂದು ನೀಟ್‌ಗೆ ಪ್ರವೇಶ ಪಡೆಯುತ್ತಿರುವ ವಿದ್ಯಾಾರ್ಥಿಗಳ ಸಂಖ್ಯೆೆ ಗಮನಿಸಿದರೆ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳ ಸಾಧನೆ ತೀರಾ ಕಡಿಮೆ.

 ಗೊರೂರು ಶಿವೇಶ್, ಪತ್ರಕರ್ತರು

ಸರ್ವ ಶಿಕ್ಷಣ ಅಭಿಯಾನ ಎಲ್ಲಾಾ ಮಕ್ಕಳಿಗೂ ಸಮನಾದ ಅವಕಾಶ, ಸಮನಾದ ಶಿಕ್ಷಣಕ್ಕಾಗಿ 2001 ರಿಂದ 2010 ರವರೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಡೆಸಿದ ಅತಿ ದೊಡ್ಡಮಟ್ಟದ ಅಭಿಯಾನ. ಇದಕ್ಕಾಗಿ ಸಹಸ್ರ ಕೋಟಿಗಳಷ್ಟು ಹಣ ಬಿಡುಗಡೆಯಾಗಿದೆ. ಆದರೆ, ಇಂದಿಗೂ ಗ್ರಾಾಮೀಣ ಬಡ ಹಿನ್ನೆೆಲೆಯ ಮಕ್ಕಳು, ನಗರ ಮೆಟ್ರೋಪಾಲಿಟನ್ ನಗರಗಳಲ್ಲಿ ವ್ಯಾಾಸಂಗ ಮಾಡುತ್ತಿರುವ ವಿದ್ಯಾಾರ್ಥಿಗಳೊಂದಿಗೆ ಸೆಣೆಸಲು ಸಾಧ್ಯವಾಗಿದೆಯೇ? ಎಂಬ ಪ್ರಶ್ನೆೆಗೆ ನಿರಾಶೆಯ ಉತ್ತರ ಸಿಗುತ್ತದೆ. ಶಿಕ್ಷಣ ಕ್ಷೇತ್ರ ಹೆಚ್ಚು ವ್ಯಾಾಪಕವಾಗಿ ಬೆಳೆದು ಬಂಡವಾಳಗಾರರ ಪ್ರವೇಶವಾಗಿ ಶಿಕ್ಷಣವೆಂಬುದು ಸೇವೆಯಾಗದೆ ವ್ಯಾಾಪಾರವಾದ ನಂತರ ಖಾಸಗಿ ಕ್ಷೇತ್ರದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ, ಗ್ಲೋೋಬಲ್ ಮಟ್ಟದಲ್ಲಿ ಕಲಿಸುವ ಭರವಸೆಯೊಂದಿಗೆ ಆರಂಭಿಸಲಾಗುತ್ತಿರುವ ಶಿಕ್ಷಣ ಕೇಂದ್ರಗಳು ಪತಂಗಗಳಂತೆ ವಿದ್ಯಾಾರ್ಥಿಗಳನ್ನು ಸೆಳೆದು ಅವುಗಳ ರೆಕ್ಕೆೆಗಳ ಸುಡುವ ಕೆಲಸವನ್ನು ಅಷ್ಟೆೆ ಮಾಡುತ್ತಿವೆ. ಇತ್ತ ನಗರ ಪ್ರದೇಶದ ವಿದ್ಯಾಾರ್ಥಿಗಳೊಂದಿಗೆ ಸೆಣಸಲಾಗದೆ ಗ್ರಾಾಮೀಣ ವಿದ್ಯಾಾರ್ಥಿಗಳು ಹತಾಶರಾಗುತ್ತಿದ್ದಾರೆ. ಅದಕ್ಕೆೆ ಇತ್ತೀಚಿನ ಉದಾಹರಣೆ ಸಿಇಟಿ ಮತ್ತು ನೀಟ್ ಪರೀಕ್ಷೆಗಳು. ಸಿಇಟಿ ಕೇವಲ ಈಗ ಎಂಜಿನಿಯರಿಂಗಿಗೆ ವಿದ್ಯಾಾರ್ಥಿಗಳು ಪ್ರವೇಶ ಪಡೆಯಲು ಸೀಮಿತವಾದ ನಂತರ ಅದರ ಮಹತ್ವ ಕಡಿಮೆಯಾಗಿದೆ.

ಕರ್ನಾಟಕದ ಸರಕಾರವು  ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ’ವನ್ನು ಸ್ಥಾಪಿಸಿದ ನಂತರ ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ, ಆಯುರ್ವೇದ ಸೀಟಿನ ಹಂಚಿಕೆಯನ್ನು ಸಿಇಟಿ ಮೂಲಕ ನಡೆಸಲು ನಿರ್ಧರಿಸಿದ್ದ ಸಂದರ್ಭದಲ್ಲಿ ಆಗ ನಗರ ಪ್ರದೇಶಗಳಲ್ಲಿ ಇದಕ್ಕಾಾಗಿ ಕೋಚಿಂಗ್ ಸೆಂಟರ್‌ಗಳು ಆರಂಭವಾಗಿ ಗ್ರಾಾಮೀಣ-ತಾಲೂಕು ಕೇಂದ್ರದ ವಿದ್ಯಾಾರ್ಥಿಗಳು ಪಿಯೂಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದರೂ ಸಿಇಟಿಯಲ್ಲಿ ಕಡಿಮೆ ಅಂಕಗಳನ್ನು ಪಡೆದು ಕಡಿಮೆ ರ್ಯಾಾಂಕ್ ಪಡೆದ ಕಾರಣ ಅತ್ಯುತ್ತಮ ಸೌಲಭ್ಯವುಳ್ಳ ಕಾಲೇಜನ್ನು ಸೇರುವ ಅವಕಾಶದಿಂದ ವಂಚಿತರಾದರು. ಆದರೂ ದ್ವಿಿತೀಯ ಪಿಯೂಸಿ ಪರೀಕ್ಷೆಯಲ್ಲಿ ಪಿಸಿಎಂಬಿಯಲ್ಲಿ ಪಡೆದ ಅಂಕಗಳ ಶೇ.50 ರಷ್ಟು ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದ ಕಾರಣ ಪ್ರತಿಭಾವಂತ ವಿದ್ಯಾಾರ್ಥಿಗಳು ಪರಿಶ್ರಮದ ಮೂಲಕ ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಸೀಟ್ ಪಡೆಯಲು ಸಾಧ್ಯವಿತ್ತು.

2000 ರಿಂದ 2010ರವರೆಗಿನ ಅವಧಿಯಲ್ಲಿ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅದರಲ್ಲೂ ‘ಐಟಿಬಿಟಿ’ ಕ್ಷೇತ್ರದಲ್ಲಿ ಹೆಚ್ಚು ಉದ್ಯೋೋಗಗಳ ಸೃಷ್ಟಿಿಯಿಂದಾಗಿ ಆರಂಭದಲ್ಲಿಯೇ ಎಂಟರಿಂದ ಹತ್ತು ಲಕ್ಷ ವೇತನದ ಜತೆಗೆ ವಿದೇಶದ ಕಂಪನಿಗಳು ಕೂಡಾ ಅವಕಾಶದ ಬಾಗಿಲು ತೆರೆದು ಎಲ್ಲಾಾ ವಿದ್ಯಾಾರ್ಥಿಗಳ ಗಮನ ಅತ್ತ ಹರಿಯಲು ಆರಂಭವಾಯಿತು. ಇದರ ಲಾಭ ಪಡೆಯ ಹೊರಟ ಅನೇಕ ಖಾಸಗಿ ಕಾಲೇಜುಗಳು, ಹಣವುಳ್ಳು ವ್ಯಕ್ತಿಿಗಳು ಹತ್ತಾಾರು ಎಕರೆ ಪ್ರದೇಶದಲ್ಲಿ ಸುಸಜ್ಜಿತ ಎಂಜಿನಿಯರಿಂಗ್ ಕಾಲೇಜು ಆರಂಭಿಸಿದ ಪರಿಣಾಮ ಕರ್ನಾಟಕ ಒಂದರಲ್ಲಿಯೆ ಲಕ್ಷಕ್ಕೂ ಹೆಚ್ಚು ವಿದ್ಯಾಾರ್ಥಿಗಳು ನಾನಾ ಕೋಟಗಳ ಅಡಿಯಲ್ಲಿ ಅವಕಾಶ ಪಡೆದು ಅಭ್ಯಾಾಸ ನಡೆಸಿದ ಪರಿಣಾಮ ಬೇಡಿಕೆಗಿಂತ ಹೆಚ್ಚು ವಿದ್ಯಾಾರ್ಥಿಗಳು ಹೊರಹೊಮ್ಮಿಿ ಇಂದು ಲಕ್ಷಾಂತರ ಎಂಜಿನಿಯರಿಂಗ್ ವಿದ್ಯಾಾರ್ಥಿಗಳು ಉದ್ಯೋೋಗ ವಂಚಿತರಾಗಿದ್ದಾರೆ.

2013ರಲ್ಲಿ ಕೇಂದ್ರವು ನೀಟ್ ‘ನ್ಯಾಾಷನಲ್ ಎಲಿಜಬಿಲಿಟಿ ಕಮ್ ಎಂಟ್ರೆನ್‌ಸ್‌ ಟೆಸ್‌ಟ್‌’ನ್ನು ಆರಂಭಿಸಿ ಅದರ ಮೂಲಕ ಮೆಡಿಕಲ್ ಸೀಟನ್ನು ತುಂಬಲು ಹೊರಟಾಗ ಬಹಳಷ್ಟು ಸರಕಾರಗಳು ಅದರ ವಿರುದ್ದ ತಡೆಯಾಜ್ಞೆ ತಂದು ತಮ್ಮದೇ ವಿಧಾನಗಳಲ್ಲಿ ಪ್ರವೇಶಾತಿ ನೀಡಿದವು. ಇದಕ್ಕೆೆ ರಾಜ್ಯ ಹಾಗೂ ಕೇಂದ್ರ ಪಠ್ಯಕ್ರಮದಲ್ಲಿ ಬದಲಾವಣೆ ಇದ್ದದ್ದು ಒಂದು ಕಾರಣವಾದರೆ ನೀಟ್‌ನ ಕ್ಲಿಿಷ್ಠತೆ ಮತ್ತೊೊಂದು ಕಾರಣ. ಮುಂದೆ ಸುದೀರ್ಘ ವಿಚಾರಣೆ ನಡೆದು ಭಿನ್ನ ತೀರ್ಪಿನ ನಂತರ ಸುಪ್ರೀಂ ಕೋರ್ಟ್‌ನ ಐದು ನ್ಯಾಾಯಾದೀಶರ ತಂಡದೆದುರು ವಿಚಾರಣೆಗೆ ಬಂದು ನೀಟ್‌ನ್ನು ಎತ್ತಿಹಿಡಿದ ಪರಿಣಾಮ ಎಲ್ಲಾಾ ರಾಜ್ಯಗಳು ನೀಟ್‌ನ ಮೂಲಕ ಸೀಟು ಹಂಚಿಕೆಯ ಅನುವಾರ್ಯತೆಗೆ ಸಿಲುಕಿದವು.

ನೀಟ್‌ನ ನಿಯಮದಂತೆ ಶೇ.15 ರಷ್ಟು ಕಾಲೇಜುಗಳ ಸೀಟನ್ನು ರಾಷ್ಟ್ರೀಯ ಮಟ್ಟದಲ್ಲಿ ಗಳಿಸುವ ರ್ಯಾಾಂಕಿಂಗ್ ಮೂಲಕ ರಾಷ್ಟ್ರಮಟ್ಟದಲ್ಲಿ ತುಂಬಲಾಗುತ್ತಿದೆ. ಇನ್ನುಳಿದ ಶೇ.85 ರಷ್ಟನ್ನು ರಾಜ್ಯ ಸರಕಾರಗಳು ಆ ರಾಜ್ಯದ ವಿದ್ಯಾಾರ್ಥಿಗಳಿಗೆ ಅದೇ ರ್ಯಾಾಂಕಿಂಗ್‌ನ್ನು ಬಳಸಿ ತುಂಬುತ್ತಿವೆ. ಪಿಯೂ ಪರೀಕ್ಷೆಗೆ ಈಗ ಸಿಬಿಎಸ್‌ಇ ಪಠ್ಯಕ್ರಮವನ್ನು ತಂದಿದೆಯಾದರೂ ಮೊದಲ ಒಂದೆರಡು ವರ್ಷಗಳು ವಿದ್ಯಾಾರ್ಥಿಗಳ ಅನುಕೂಲಕ್ಕಾಾಗಿ ‘ಬ್ಲೋೋ-ಅಪ್ ಸಿಲಬಸ್’ ಕೆಲವು ಕಠಿಣ ಪಠ್ಯವನ್ನು ಹೊರತುಪಡಿಸಿದ ಹಾಗೂ ‘ಛಾಯ್‌ಸ್‌ ಬೇಸ್‌ಡ್‌ ಎಕ್ಸಾಾಂ’ ಐದು ಪ್ರಶ್ನೆೆಗಳಿಗೆ ಮೂರು ಪ್ರಶ್ನೆೆಗಳನ್ನು ಉತ್ತರಿಸುವನ್ನು ತಂದ ಪ್ರಯುಕ್ತ ಪಿಯೂ ಫಲಿತಾಂಶ ಸುಧಾರಿಸುತ್ತಾಾದರೂ ನೀಟ್ ಪರೀಕ್ಷೆಯಲ್ಲಿ ನಿಗದಿತ 3 ಗಂಟೆಗಳ ಅವಧಿಯಲ್ಲಿ 180 ಪ್ರಶ್ನೆೆಗಳನ್ನೂ ಬಹು ಆಯ್ಕೆೆ ಉತ್ತರದ ರೂಪದಲ್ಲಿ ನೀಡಲಾದ ಪ್ರಶ್ನೆೆಪತ್ರಿಕೆ ಎದುರಿಸಲು ಗ್ರಾಾಮೀಣ ವಿದ್ಯಾಾರ್ಥಿಗಳು ಸೋಲುತ್ತಿದ್ದಾರೆ. ಇದಕ್ಕೆೆ ಒಂದು ಪ್ರಶ್ನೆೆಗೆ ನಾಲ್ಕು ಅಂಕಗಳಿದ್ದು ತಪ್ಪುು ಉತ್ತರಕ್ಕೆೆ ಒಂದು ಅಂಕವನ್ನು ಕಳೆಯುವ ನೆಗೆಟಿವ್ ಅಂಕಗಳ ಸಹ ಇದ್ದರೆ ಸಿಇಟಿಯಲ್ಲಿ ತಪ್ಪುು ಉತ್ತರಗಳಿಗೆ ಅಂಕ ಕಳೆಯಲಾಗುತ್ತಿಲ್ಲ.

ಇಂದು ನೀಟ್‌ಗೆ ಪ್ರವೇಶ ಪಡೆಯುತ್ತಿರುವ ವಿದ್ಯಾಾರ್ಥಿಗಳ ಸಂಖ್ಯೆೆ ಗಮನಿಸಿದರೆ ತಾಲೂಕು, ಜಿಲ್ಲಾಾ ಕೇಂದ್ರಗಳಲ್ಲಿ ಅಭ್ಯಾಾಸ ಮಾಡಿದ ವಿದ್ಯಾಾರ್ಥಿಗಳ ಸಾಧನೆ ತೀರಾ ಕಡಿಮೆ ಇದೆ. ಪಿಯೂ ಪರೀಕ್ಷೆಯನ್ನು ನೆಪ ಮಾತ್ರಕ್ಕೆೆ ಬರೆದು ಇದಕ್ಕಾಾಗಿ ರಾಜಧಾನಿಯಲ್ಲಿ ಆರಂಭವಾಗಿರುವ ಕೆಲವು ರಾಷ್ಟ್ರಮಟ್ಟದ ಕೋಚಿಂಗ್ ಟ್ಯೂಷನ್ ಸೆಂಟರ್‌ಗಳು ಲಕ್ಷಾಂತರ ರು. ಹಣ ಮಾಡುವ ಮೂಲಕ ನೀಡಲಾಗುವ ಪ್ರತ್ಯೇಕ ನೀಟ್ ಕೋಚಿಂಗಿಗೆ ಸೇರುತ್ತಿದ್ದು ಆ ತರಬೇತಿ ಪಡೆದವರೆ ಈಗ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂಕಗಳಿಸುವುದರ ಮೂಲಕ ಮೆಡಿಕಲ್ ನೀಟ್ ಗಿಟ್ಟಿಸಿದ್ದಾಾರೆ. ಗ್ರಾಾಮೀಣ ಹಾಗೂ ತಾಲೂಕು ಕೇಂದ್ರಗಳ ವಿದ್ಯಾಾರ್ಥಿಗಳಿಗೆ ಈ ಅವಕಾಶ ದೊರೆಯದಿರುವುದು ಮೆಡಿಕಲ್ ಸೀಟಿನಿಂದ ವಂಚಿತರಾಗುವಂತೆ ಮಾಡಿರುವುದಲ್ಲದೆ ಪಿಯೂ ಫಲಿತಾಂಶಕ್ಕೆೆ ಬೆಲೆ ಇಲ್ಲದಂತೆ ಮಾಡಿದೆ.

ಇದಕ್ಕೆೆ ಪರಿಹಾರವಿದೆಯೇ? ಖಂಡಿತ ಇದೆ. ಕೇಂದ್ರ ಸರಕಾರ ನಡೆಸುವ * ಘೆಅಅ ಡ್ರಾಾಯಿಂಗ್ ಪರೀಕ್ಷೆಯಲ್ಲಿ ಶೇ.50ರಷ್ಟು ಅಂಕಗಳು ಅದಕ್ಕೆೆ ಸಂಬಂಧಿಸಿದ ಪಿಯೂ ಪರೀಕ್ಷೆಯ ಭೌತಶಾಶ್ತ್ರ, ಗಣಿತ ವಿಷಯಗಳಲ್ಲಿ ತೆಗೆದುಕೊಂಡ ಅಂಕಗಳನ್ನು ಪರಿಗಣಿಸಲಾಗಿತ್ತಿದೆ. ನೀಟ್ ಮತ್ತು ಎಂಜಿನಿಯರಿಂಗ್ * ಐಐ ಕಾಲೇಜುಗಳಿಗಾಗಿ * ನ ಪರೀಕ್ಷೆಯ ಜತೆಗೆ ಪಿಯೂ ಪರೀಕ್ಷೆಯ ಶೇ.50 ರಷ್ಟು ಅಂಕಗಳನ್ನು ಪರಿಗಣಿಸಿದರೆ ಪಿಯೂ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದ ವಿದ್ಯಾಾರ್ಥಿಗಳಿಗೆ ಸಹಾಯವಾಗಲಿದೆ. ಇನ್ನು ನೀಟ್ ಪರೀಕ್ಷೆಯಲ್ಲಿ ಪ್ರತಿ ವಿಷಯಗಳಿಗೂ ಮಿನಿಮಮ್ ಅಂಕಗಳನ್ನು ನಿಗದಿಪಡಿಸದ ಕಾರಣ ಕೆಲವು ವಿಷಯಗಳಲ್ಲಿ ಐದರಿಂದ ಹತ್ತು ಅಂಕ ಪಡೆದವರು ಉಳಿದ ವಿಷಯಗಳಲ್ಲಿ ಹೆಚ್ಚು ಅಂಕಪಡೆದು ಕಟ್ ಆಫ್‌ನ ಕನಿಷ್ಠ ಅಂಕ ಪಡೆದು ಖಾಸಗಿ ಕಾಲೇಜುಗಳಲ್ಲಿ ಡೊನೆಷನ್ ನೀಡಿ ಪ್ರವೇಶ ಪಡೆಯಲು ಅರ್ಹತೆ ಪಡೆಯುತ್ತಿದ್ದಾರೆ.

ಹಾಗೆ ಪ್ರಾಾಂತಿಯ ಭಾಷೆಗಳಲ್ಲಿ ನೀಟ್‌ನ್ನು ಉತ್ತರಿಸುವ ಅವಕಾಶ ನೀಡಿದೆ ಆದರೂ ಪಶ್ನೆೆಪತ್ರಿಕೆ ತಯಾರಿಕೆಯ ಅನುವಾದದಲ್ಲಿನ ಗೊಂದಲ ಹಾಗೂ ಪ್ರಶ್ನೆೆಗಳ ಮುದ್ರಣ ದೋಷದಿಂದಾಗಿ ತಮಿಳುನಾಡಿನಲ್ಲಿ ತಮಿಳು ಭಾಷೆಯಲ್ಲಿ ಬರೆದ ವಿದ್ಯಾಾರ್ಥಿಗಳಿಗೆ 196 ಅಂಕಗಳನ್ನು ಗ್ರೇಸ್ ರೂಪದಲ್ಲಿ ನೀಡಬೇಕಾಗಿ ಬಂದಿರುವುದು ಮತ್ತೊೊಂದು ವಿಪರ್ಯಾಸದ ಸಂಗತಿ. ಇದಕ್ಕೆೆ ಪರಿಹಾರ ಏನು ಎಂಬುದನ್ನು ಕಾದು ನೋಡಬೇಕಾಗಿದೆ. ನೀಟ್ ಪರೀಕ್ಷೆ ಇದ್ದರೂ ಇಂದಿಗೂ *  ಹಾಗೂ ಪದುಚೆರಿಯ *ಒಜಿಞಛ್ಟಿಿ ಗೆ ಪ್ರತ್ಯೇಕ ಪರೀಕ್ಷೆಗಳಿದ್ದು ಅನೇಕ ಖಾಸಗಿ ವಿಶ್ವವಿದ್ಯಾಾನಿಲಯಗಳು (ಡೀಮ್‌ಡ್‌) ತಮ್ಮ ಕಾಲೇಜಿಗೆ ಬೇರೆಯದೇ ಪರೀಕ್ಷೆ ನಡೆಸಿ ದಾಖಲು ಮಾಡಿಕೊಳ್ಳುತ್ತಿವೆ. ಇದೆಲ್ಲವೂ ಮೂಲ ಆಶಯವನ್ನು ಬದಲಾಯಿಸುತ್ತಿರುವುದರಿಂದ ಇವೆಲ್ಲವಕ್ಕೂ ನುರಿತ ಶಿಕ್ಷಣ ತಜ್ಞರ ಸಮಿತಿಯ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ.

ಇಂಟ್ರೋೋ:2 ನೀಟ್ ಪರೀಕ್ಷೆಯಲ್ಲಿ ಪ್ರತಿ ವಿಷಯಗಳಿಗೂ ಕನಿಷ್ಠ ಅಂಕಗಳನ್ನು ನಿಗದಿಪಡಿಸದ ಕಾರಣ ಕೆಲವು ವಿಷಯಗಳಲ್ಲಿ ಐದರಿಂದ ಹತ್ತು ಅಂಕ ಪಡೆದವರು ಉಳಿದ ವಿಷಯಗಳಲ್ಲಿ ಹೆಚ್ಚು ಅಂಕ ಪಡೆದು ಕಟ್ ಆಫ್ ಕನಿಷ್ಠ ಅಂಕ ಪಡೆದು ಖಾಸಗಿ ಕಾಲೇಜುಗಳಲ್ಲಿ ಡೊನೆಷನ್ ನೀಡಿ ಪ್ರವೇಶ ಪಡೆಯಲು ಅರ್ಹತೆ ಪಡೆಯುತ್ತಿದ್ದಾರೆ.