Sunday, 15th December 2024

ನೇಣು ಬಿಗಿದ ಸ್ಥಿತಿಯಲ್ಲಿ ಸಹೋದರಿಯರ ಶವ ಪತ್ತೆ

ಖಾಂಡ್ವಾ: ಖಾಂಡ್ವಾದ ಜವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಖೇಡಿ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೂವರು ಸಹೋದರಿಯರ ಶವ ಪತ್ತೆಯಾಗಿದೆ.

ಮೃತರನ್ನು ಸೋನು, ಸಾವಿತ್ರಿ, ಲಲಿತಾ ಎಂದು ತಿಳಿದು ಬಂದಿದ್ದು, ಈ ಮೂವರು ತಾಯಿ ಮತ್ತು ಸಹೋದರರ ಜೊತೆ ವಾಸಿಸುತ್ತಿದ್ದರು. ಅವರು ತಾಯಿ, ಇಬ್ಬರು ಸಹೋದರಿಯರು ಮತ್ತು ಮೂವರು ಸಹೋದರರನ್ನು ಅಗಲಿದ್ದಾರೆ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನಾ ಸ್ಥಳದಲ್ಲಿ  ಪತ್ರ ಪತ್ತೆಯಾಗದ ಕಾರಣ ಸಾವಿನ ಹಿಂದಿನ ಪ್ರಮುಖ ಕಾರಣ ಇನ್ನೂ ತಿಳಿದು ಬಂದಿಲ್ಲ.

ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.