Wednesday, 9th October 2024

ಭಾರೀ ಅಗ್ನಿ ಅವಘಡ: ಸ್ಲಂ ಪ್ರದೇಶದಲ್ಲಿನ ಮನೆಗಳು ಸುಟ್ಟು ಭಸ್ಮ

ಮುಂಬೈ : ಮಂಖುರ್ದ್ ಪ್ರದೇಶದಲ್ಲಿ ಶುಕ್ರವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ.

ಮಂಖುರ್ದ್-ಘಾಟ್ಕೋಪರ್ ಲಿಂಕ್ ರಸ್ತೆಯ ಮಂಡಲದಲ್ಲಿ ಬೆಂಕಿಯುಂಟಾಗಿದ್ದು, ಈ ಬೆಂಕಿಯು ಭಾರೀ ಪ್ರಮಾಣದ ಬೆಂಕಿಯ ಕೆನ್ನಾಲಿಗೆಗೆ ಮುಂಬೈನ ಮಂಡಲಾ ಸ್ಲಂ ಪ್ರದೇಶದಲ್ಲಿನ ಅನೇಕ ಮನೆಗಳು ಸುಟ್ಟು ಭಸ್ಮವಾಗಿದೆ. ಘಟನಾ ಸ್ಥಳಕ್ಕೆ 14 ಅಗ್ನಿಶಾಮಕ ವಾಹನಗಳು ತಲುಪಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ.

ಬೆಂಕಿಯಿಂದ ಯಾವುದೇ ಹಾನಿ ಅಥವಾ ಹಾನಿಯಾದ ಬಗ್ಗೆ ಇದುವರೆಗೆ ವರದಿಯಾಗಿಲ್ಲ.