Sunday, 15th December 2024

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಮುಂಬೈಗೆ ಸೂರ್ಯಕುಮಾರ್ ಯಾದವ್ ಸಾರಥ್ಯ

ಮುಂಬೈ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮುಂಬೈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ.

ಮುಂಬೈ ತಂಡಕ್ಕೆ ಉಪನಾಯಕರಾಗಿ ವಿಕೆಟ್ ಕೀಪರ್ ಆದಿತ್ಯ ತಾರೆ ಆಯ್ಕೆಯಾಗಿದ್ದಾರೆ. ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಮುಂಬೈ ತಂಡವನ್ನು ಪ್ರಕಟಿಸಿದೆ. ಜನವರಿ 10ರಂದು ಆರಂಭಗೊಳ್ಳಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಜನವರಿ 31ಕ್ಕೆ ಮುಕ್ತಾಯಗೊಳ್ಳಲಿದೆ.

ಮುಂಬೈ ತಂಡ ಇಂತಿದೆ. 

ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್), ಆದಿತ್ಯ ತಾರೆ (ಉಪನಾಯಕ), ಯಶಸ್ವಿ ಜೈಸ್ವಾಲ್, ಆಕರ್ಷಿತ್ ಗೊಮೆಲ್, ಸರ್ಫ ರಾಜ್ ಖಾನ್, ಸಿದ್ಧೇಶ್ ಲಾಡ್, ಶಿವಮ್ ದೂಬೆ, ಶುಭಮ್ ರಂಜನೆ, ಸುಜಿತ್ ನಾಯಕ್, ಸಾಯ್‌ರಾಜ್ ಪಾಟೀಲ್, ತುಷಾರ್ ದೇಶಪಾಂಡೆ, ಧವಲ್ ಕುಲಕರ್ಣಿ, ಮಿನಾದ್ ಮಂಜ್ರೇಕರ್, ಪ್ರಥಮೇಶ್ ಧಾಕೆ, ಅಥರ್ವ ಅಂಕೋಲೆಕರ್, ಶಶಾಂಕ್ ಅತ್ತಾರ್ಡೆ, ಶಮ್ಸ್ ಮುಲಾನಿ, ಹಾರ್ದಿಕ್ ತಮೋರ್, ಆಕಾಶ್ ಪಾರ್ಕರ್ ಮತ್ತು ಸುಫಿಯಾನ್ ಶೇಖ್.