Saturday, 27th April 2024

ಪಿಂಕ್ ಬಾಲ್ ಟೆಸ್ಟ್: ಸ್ಮೃತಿ ಮಂಧಾನ ದಾಖಲೆ

ಕ್ಯಾನ್ ಬೆರಾ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಅವರು ಶುಕ್ರವಾರ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 127 ರನ್ ಗಳಿಸಿದರು.

ಈ ಮೂಲಕ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಮಹಿಳೆ ಎನಿಸಿ ಕೊಂಡರು. ಆಸ್ಟ್ರೇಲಿಯಾ ನೆಲದಲ್ಲಿ ಭಾರತೀಯ ಮಹಿಳೆಯ ಮೊದಲ ಶತಕವಾಗಿದೆ. ಮೊದಲ ದಿನದಾಟದಂತ್ಯಕ್ಕೆ ಔಟಾಗದೆ 80 ರನ್ ಗಳಿಸಿದ್ದ ಮಂಧಾನ, ಕ್ವೀನ್ಸ್‌ಲ್ಯಾಂಡ್‌ನಲ್ಲಿ ಎರಡನೇ ದಿನದಾಟ ವಾದ ಶುಕ್ರವಾರ ಶತಕ ಬಾರಿಸಲು 171 ಎಸೆತಗಳನ್ನು ತೆಗೆದುಕೊಂಡರು ಹಾಗೂ 127 ರನ್ ಗಳಿಸಿ ಔಟಾದರು.

ಮಂಧಾನ 216 ಎಸೆತಗಳಲ್ಲಿ 27 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಾಯದಿಂದ 127 ರನ್, ಪೂನಂ ರಾವತ್ (36) ರೊಂದಿಗೆ ಎರಡನೇ ವಿಕೆಟ್ ಗೆ 102 ರನ್ ಸೇರಿಸಿ ದಾಖಲೆ ನಿರ್ಮಿಸಿದರು.

Leave a Reply

Your email address will not be published. Required fields are marked *

error: Content is protected !!