ನವದೆಹಲಿ: ವಿಶ್ವದಾದ್ಯಂತ ಪ್ರಮುಖ ಜಾಲತಾಣಗಳಾದ ವಾಟ್ಸಾಪ್, ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ಬಳಕೆದಾರರಿಗೆ ಸೇವೆಯಲ್ಲಿ ವ್ಯತ್ಯಯವಾಗಿದೆ. ಭಾರತೀಯ ಕಾಲಮಾನದಲ್ಲಿ 9 ಗಂಟೆಯ ನಂತರ ಈ ಮೂರು ಅಪ್ಲಿಕೇಷನ್ಸ್ಗಳು ಕಾರ್ಯ ನಿರ್ವಹಿಸುತ್ತಿಲ್ಲ.
ಆಂಡ್ರ್ಯಾಯ್ಡ್ , ಐಒಎಸ್ ಹಾಗೂ ವೆಬ್ ಅಪ್ಲಿಕೇಷನ್ಸ್ಗಳಲ್ಲೂ ಕೆಲಸ ಮಾಡುತ್ತಿಲ್ಲ. ವಾಟ್ಸಾಪ್ ಸಂದೇಶಗಳು ಹಾಗೂ ಸ್ಟೇಟಸ್ಗಳು ಅಪ್ಲೋಡ್ ಆಗುತ್ತಿಲ್ಲ, ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ನಲ್ಲಿ ಯಾವುದೇ ಫೀಡ್ ಗಳು ಆಗುತ್ತಿಲ್ಲ.
ಬಹುತೇಕ ಮಂದಿ ವಾಟ್ಸಾಪ್ ಸೇವೆಯಲ್ಲಿ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ವಾಟ್ಸಾಪ್ ಅನ್ನು ಸಾಮಾನ್ಯ ಸ್ಥಿತಿಗೆ ತರಲು ನಾವು ಕೆಲಸ ಮಾಡುತ್ತಿದ್ದೇವೆ, ಸಾಧ್ಯವಾದಷ್ಟು ಬೇಗ ಅಪ್ಡೇಟ್ ನೀಡು ತ್ತೇವೆ ಎಂದು ವಾಟ್ಸಾಪ್ ಹೇಳಿಕೆ ಹೇಳಿದೆ.
ಇನ್ನು ಫೇಸ್ಬುಕ್, ನಮ್ಮ ಅಪ್ಲಿಕೇಷನ್ಗಳನ್ನು ತೆರೆಯಲು ಹಲವು ಮಂದಿ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವುದು ತಿಳಿದಿದೆ. ನಾವು ಸಹಜ ಸ್ಥಿತಿಗೆ ಮರಳಿಸುವ ಪ್ರಯತ್ನದಲ್ಲಿದ್ದೇವೆ. ಈ ಅನನುಕೂಲತೆಗಾಗಿ ವಿಷಾಧಿಸುತ್ತೇವೆ, ಕ್ಷಮೆ ಯಾಚಿಸುತ್ತೇವೆ ಎಂದು ತಿಳಿಸಿದೆ.
ಮೂರು ಅಪ್ಲಿಕೇಶನ್ಗಳು – ಇವೆಲ್ಲವೂ ಫೇಸ್ಬುಕ್ ಒಡೆತನದಲ್ಲಿವೆ ಮತ್ತು ಹಂಚಿದ ಮೂಲಸೌಕರ್ಯದಲ್ಲಿ ಕಾರ್ಯನಿರ್ವಹಿಸುತ್ತವೆ – ಎಲ್ಲವೂ ಸಂಜೆ 5 ಗಂಟೆಯ ಮೊದಲು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದವು. ಫೇಸ್ಬುಕ್ ಕೆಲಸದ ಸ್ಥಳದಂತಹ ಒಂದೇ ಕುಟುಂಬದ ಅಪ್ಲಿಕೇಶನ್ಗಳ ಭಾಗವಾಗಿರುವ ಇತರ ಉತ್ಪನ್ನಗಳು ಸಹ ಕೆಲಸ ಮಾಡುವುದನ್ನು ನಿಲ್ಲಿಸಿವೆ.
ಫೇಸ್ಬುಕ್, ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಂ ಇದೇ ವರ್ಷದ ಆರಂಭದಲ್ಲಿ ಮಾರ್ಚ್ 19 ರಂದು ಸಂದೇಶ ರವಾನೆ ಮತ್ತು ಫೋಟೋ ಹಂಚಿಕೆ ಅಪ್ಲಿಕೇಷನ್ಗಳು ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿ ಸಾಮೂಹಿಕ ಸ್ಥಗಿತವನ್ನು ಎದುರಿಸಿದವು.